ಅರ್ಹರಿಗೆ ಸೌಲಭ್ಯ ಕಲ್ಪಿಸಲು ಸಂಘಟಿತರಾಗಿ: ಶಾಸಕ ನಾರಾಯಣಗೌಡರಿಂದ ಎಸ್‍ಸಿ, ಎಸ್‍ಟಿ ರೈತರಿಗೆ ಕೊಳವೆ ಬಾವಿ ಪರಿಕರ ವಿತರಣೆ
ಮಂಡ್ಯ

ಅರ್ಹರಿಗೆ ಸೌಲಭ್ಯ ಕಲ್ಪಿಸಲು ಸಂಘಟಿತರಾಗಿ: ಶಾಸಕ ನಾರಾಯಣಗೌಡರಿಂದ ಎಸ್‍ಸಿ, ಎಸ್‍ಟಿ ರೈತರಿಗೆ ಕೊಳವೆ ಬಾವಿ ಪರಿಕರ ವಿತರಣೆ

August 9, 2018

ಕೆ.ಆರ್.ಪೇಟೆ:  ‘ದಲಿತರಿಗೆ ಶಿಕ್ಷಣ, ಅಭಿವೃದ್ಧಿಗೆ ನೆರವು ನೀಡಲು ಸ್ಥಾಪಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮವು ಪಾರದರ್ಶಕವಾಗಿ ಕೆಲಸ ಮಾಡಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ತಲುಪಿಸಲು ದಲಿತ ಬಂಧುಗಳು ಸಂಘಟಿತರಾಗಿ ಹೋರಾಡ ಬೇಕು’ ಎಂದು ಶಾಸಕ ಡಾ.ಕೆ.ಸಿ.ನಾರಾ ಯಣಗೌಡ ಸಲಹೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣ ದಲ್ಲಿ ಬುಧವಾರ ನಡೆದ ಕಾರ್ಯಕ್ರಮ ದಲ್ಲಿ ತಾಲೂಕಿನ 27 ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರಿಗೆ ತಲಾ 2.50 ಲಕ್ಷ ರೂ. ಮೌಲ್ಯದ ಕೊಳವೆ ಬಾವಿಯ ಮೋಟಾರ್ ಸೇರಿದಂತೆ ಇತರೆ ಪರಿಕರ ಗಳನ್ನು ವಿತರಿಸಿ ಅವರು ಮಾತನಾಡಿದರು.

ತಾಲೂಕಿನಾದ್ಯಂತ 500ಕ್ಕೂ ಹೆಚ್ಚು ಬಡತನದ ರೇಖೆಗಿಂತ ಕಡಿಮೆ ಇರುವ ದಲಿತ ಕುಟುಂಬಗಳಿಗೆ ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಸಿ ವಿದ್ಯುತ್ ಸಂಪರ್ಕವನ್ನು ಒದಗಿಸಿ ಕೊಳವೆ ಬಾವಿಯ ನೀರೆತ್ತುವ ಮೋಟಾರು ಗಳು, ಪೈಪುಗಳು, ವಿದ್ಯುತ್ ಕೇಬಲ್, ಮೀಟರ್ ಬೋರ್ಡ್ ಸೇರಿದಂತೆ ಎಲ್ಲಾ ಪರಿಕರಗಳನ್ನು 2.50 ಲಕ್ಷರೂ ವೆಚ್ಚ ದಡಿ ಡಾ.ಬಿ.ಆರ್. ಅಂಬೇಡ್ಕರ್ ಅಭಿ ವೃದ್ಧಿ ನಿಗಮದ ಆಶ್ರಯದಲ್ಲಿ ವಿತರಿಸ ಲಾಗುತ್ತಿದೆ ಎಂದರು.

ರೈತರಿಗೆ ನಿಗಮವು 2.50 ಲಕ್ಷ ರೂ. ಸಾಲ ನೀಡಿ ಅದರಲ್ಲಿ 2 ಲಕ್ಷ ಸಹಾಯ ಧನ ನೀಡುತ್ತಿದೆ. ಉಳಿದ 50 ಸಾವಿರ ವನ್ನು ಮಾತ್ರ ಸಾಲದ ರೂಪದಲ್ಲಿ ರೈತರು ಹಿಂತಿರುಗಿಸಬೇಕು. ಪ್ರಸಕ್ತ ಸಾಲಿನ ಫಲಾನು ಭವಿಗಳಿಗೆ ತಲಾ 3 ಲಕ್ಷ ರೂ.ಗಳ ವೆಚ್ಚ ದಡಿ ಗಂಗಾ ಕಲ್ಯಾಣ ಯೋಜನೆಯನ್ನು ಪರಿಷ್ಕರಿಸಿ ಸವಲತ್ತುಗಳನ್ನು ನೀಡಲಾಗುತ್ತಿದೆ. ರೈತರು ಇದರ ಸದ್ಬಳಕೆ ಮಾಡಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಸೌಲಭ್ಯವನ್ನು ಪಡೆದುಕೊಳ್ಳಲು ನಿಗಮದ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಯಾವುದೇ ಮಧ್ಯವರ್ತಿಗಳಿಗೆ ಲಂಚದ ರೂಪದಲ್ಲಿ ಹಣವನ್ನು ನೀಡಬೇಕಾಗಿಲ್ಲ. ಯೋಜನೆಯ ಫಲವು ಎಲ್ಲಾ ಫಲಾನುಭವಿಗಳಿಗೆ ನೇರವಾಗಿ ತಲುಪಿಸಲು ಅಡ್ಡಿಪಡಿಸಿದರೆ ಅಥವಾ ಲಂಚದ ಹಣಕ್ಕಾಗಿ ಒತ್ತಾಯಿಸಿ ದರೆ ಕೂಡಲೇ ನನ್ನ ಗಮನಕ್ಕೆ ತರಬೇಕು. ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾ ಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು, ಉಪಾಧ್ಯಕ್ಷೆ ಗಾಯಿತ್ರಿ ರೇವಣ್ಣ, ತಾಲೂಕು ಪಂಚಾ ಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಎನ್. ವಿಜಯಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎನ್.ಕೃಷ್ಣ, ಉಪಾಧ್ಯಕ್ಷೆ ಮಹೇಶ್ವರಿ ನರಸೇಗೌಡ, ನಿರ್ದೇಶಕರಾದ ನಾಗರಾಜೇಗೌಡ, ದಲಿತ ಮುಖಂಡ ರಾದ ಕೃಷ್ಣಮೂರ್ತಿ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಕೆ.ಆರ್.ಹೇಮಂತ್ ಕುಮಾರ್, ಜಿಲ್ಲಾ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷ ಶ್ರೀಧರ್ ಸಿರಿವಂತ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವಿಸ್ತರಣಾಧಿಕಾರಿ ಕೃಷ್ಣಪ್ಪ, ಶಾಸಕರ ಆಪ್ತ ಕಾರ್ಯದರ್ಶಿ ದಯಾ ನಂದ್, ಮುಖಂಡರಾದ ಕೆ.ಟಿ.ಗಂಗಾಧರ್, ಸಂತೇಬಚಹಳ್ಳಿ ಮರೀಗೌಡ, ಪೂವನ ಹಳ್ಳಿ ರೇವಣ್ಣ, ಕೈಗೋನಹಳ್ಳಿ ಕುಮಾರ್, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ ಇದ್ದರು.

Translate »