ತಂದೆಗೆ ‘ಲಿವರ್’ ನೀಡಲು ಮುಂದಾಗಿರುವ ಮಗ
ಮೈಸೂರು

ತಂದೆಗೆ ‘ಲಿವರ್’ ನೀಡಲು ಮುಂದಾಗಿರುವ ಮಗ

August 9, 2018

ಮೈಸೂರ: ಅಪ್ಪ ಆರೋಗ್ಯವಾಗಿದ್ದಾಗಲೇ ಸರಿಯಾಗಿ ಊಟೋಪಚಾರ ಮಾಡದ ಜನರಿರುವ ಮಧ್ಯೆಯೇ ಲಿವರ್ ಸಮಸ್ಯೆಯಿಂದ ಬಳಲು ತ್ತಿರುವ ಅಪ್ಪನ ಪ್ರಾಣವನ್ನು ಉಳಿಸಲು ಪುತ್ರನೇ ತನ್ನ ಲಿವರ್ ನೀಡಲು ಮುಂದಾಗುವ ಮೂಲಕ ಕರ್ಣನ ದಾನಶೂರತೆ ಮೆರೆದಿದ್ದಾರೆ.

ನಗರದ ವೀರನಗೆರೆಯ ನಿವಾಸಿ, ಚಿನ್ನ- ಬೆಳ್ಳಿ ವ್ಯಾಪಾರಿ ಅಶೋಕ್ ಜೈನ್(78) ಎಂಬುವರ ಪುತ್ರ ಪ್ರೀತೇಶ್ ಜೈನ್ ತಂದೆ ಯನ್ನು ಉಳಿಸಲು ಲಿವರ್ ನೀಡಲು ಮುಂದಾಗಿದ್ದಾರೆ. ಕಳೆದ 8 ವರ್ಷದಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅಶೋಕ್ ಜೈನ್ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದರು. ಆದರೆ, ಸಮಸ್ಯೆ ತೀವ್ರವಾದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಅಶೋಕ್ ಅವರನ್ನು ಚೆನ್ನೈನ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ವೈದ್ಯರು ತಿಂಗಳೊ ಳಗೆ ಶಸ್ತ್ರಚಿಕಿತ್ಸೆ ಮಾಡಬೇಕಿದ್ದು, ಈಗಿರುವ ಲಿವರ್ ತೆಗೆದು ಬೇರೆ ಲಿವರ್ ಜೋಡಣೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಆಗ ಪುತ್ರ ಪ್ರೀತೇಶ್ ಜೈನ್, ತಂದೆಯನ್ನು ಉಳಿಸಿಕೊಳ್ಳಲೇಬೇಕೆಂದು ನಿರ್ಧರಿಸಿ ತನ್ನ ಲಿವರ್ ಅನ್ನು ನೀಡಲು ಮುಂದಾಗಿದ್ದಾರೆ.

ತೂಕ ಇಳಿಸಲು ಮುಂದಾದ ಪ್ರಿತೇಶ್: ಸದ್ಯ ಪ್ರೀತೇಶ್ ಜೈನ್ ತೂಕ 90 ಕೆಜಿ ಇದ್ದು, 75 ಕೆಜಿಗೆ ತೂಕ ಇಳಿಸಿದರೆ ಶಸ್ತ್ರ ಚಿಕಿತ್ಸೆ ಮಾಡಲು ಅನುಕೂಲವಾಗುತ್ತದೆ ಎಂದು ವೈದ್ಯರು ತಿಳಿಸಿದ ಹಿನ್ನೆಲೆಯಲ್ಲಿ ತೂಕವನ್ನು ಕಡಿಮೆ ಮಾಡಲು ಕಸರತ್ತು ನಡೆಸುತ್ತಿದ್ದಾರೆ. ಇದಕ್ಕಾಗಿ ಪ್ರತಿದಿನ ನಡಿಗೆ, ಸೈಕ್ಲಿಂಗ್ ಮಾಡುತ್ತಿದ್ದು, 27 ದಿನದಲ್ಲಿ 7 ಕೆಜಿ ತೂಕ ಇಳಿಸಿದ್ದಾರೆ. ಇನ್ನು 8 ಕೆಜಿ ತೂಕ ಕಡಿಮೆ ಮಾಡ ಬೇಕಿದ್ದು, ಇದಕ್ಕಾಗಿ ನಿತ್ಯ ಚಪಾತಿ, ಸಲಾಡ್, ತರಕಾರಿ ಪದಾ ರ್ಥಗಳನ್ನು ಸೇವನೆ ಮಾಡುತ್ತಿದ್ದಾರೆ.

ಕೋರ್ಟ್‍ನಿಂದ ಎನ್‍ಓಸಿ: ಯಾರ ಒತ್ತಡವಿಲ್ಲದೆ ನಾನೇ ಸ್ವಯಂ ಲಿವರ್ ನೀಡುತ್ತಿದ್ದೇನೆಂದು ಕರ್ನಾಟಕ ಹೈ ಕೋರ್ಟ್‍ನಿಂದ ಎನ್‍ಓಸಿ ತೆಗೆದು ಕೊಳ್ಳ ಬೇಕು. ಇದನ್ನು ಆಸ್ಪತ್ರೆಗೆ ನೀಡಿದರೆ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಇದಕ್ಕಾಗಿ 22 ಲಕ್ಷ ರೂ.ಖರ್ಚಾಗಲಿದೆ ಎಂದು ಪ್ರಿತೇಶ್ ಜೈನ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »