ಹಂತಕನ ಬಂಧನ, ರೂಂ ಬೆಲ್ ಮಾಡಿದ್ದಕ್ಕೆ ಕೊಲೆ
ಮೈಸೂರು

ಹಂತಕನ ಬಂಧನ, ರೂಂ ಬೆಲ್ ಮಾಡಿದ್ದಕ್ಕೆ ಕೊಲೆ

December 2, 2019

ಮೈಸೂರು,ಡಿ.1- ಅಮೇರಿಕಾದಲ್ಲಿ ಮೈಸೂರಿನ ವಿದ್ಯಾರ್ಥಿ ಅಭಿಷೇಕ್‍ನನ್ನು ಗುಂಡಿಕ್ಕಿ ಹತ್ಯೆಗೈದ ಆರೋಪಿಯನ್ನು ಶನಿವಾರ ಅಮೇರಿಕಾ ಪೊಲೀಸರು ಬಂಧಿಸಿ ದ್ದಾರೆ. ಆಫ್ರಿಕಾ ಮೂಲದ ಎರಿಕ್ ಡೆವನ್ ಟರ್ನರ್(42) ಬಂಧಿತನಾಗಿದ್ದು, ಈತ ನನ್ನು ಪೊಲೀಸರು ತೀವ್ರ ವಿಚಾರಣೆಗೊಳ ಪಡಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಅಭಿಷೇಕ್ ನ.28ರಂದು ತನ್ನ ಕರ್ತವ್ಯ ಮುಗಿಸಿ ಹೋಟೆಲ್‍ನಿಂದ ತೆರಳಲು ಸಿದ್ಧ ವಾಗಿದ್ದ. ಸಮಯ ಮೀರಿದ್ದರಿಂದ ರೂಂ ಖಾಲಿ ಮಾಡುವಂತೆ ಗ್ರಾಹಕ ಎರಿಕ್ ಡೆವನ್ ಟರ್ನರ್‍ಗೆ ಆತ ಇಂಟರ್ ಕಾಮ್ ಮೂಲಕ ತಿಳಿಸಿದ್ದ. ಪದೇ ಪದೆ ತಿಳಿಸಿ ದರೂ ರೂಂ ಖಾಲಿ ಮಾಡದ ಕಾರಣ ಅಭಿಷೇಕ್ ತೆರಳಿ ರೂಂ ಬೆಲ್ ಹಾಕಿದಾಗ ಬಾಗಿಲು ತೆರೆದ ದುಷ್ಕರ್ಮಿ ಅಭಿಷೇಕ್ ಹಣೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಆದರೂ ಈ ಹತ್ಯೆಗೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಸ್ಥಳೀಯ ಪೊಲಿಸ್ ಠಾಣೆ ಅಧಿಕಾರಿ ಆಲ್ಬರ್ಟ್ ಟೆಲೋ ತಿಳಿಸಿದ್ದಾರೆ. ಹಂತಕ ತಾನಾಗಿಯೇ ಪೊಲೀಸರಿಗೆ ಶನಿವಾರ ಶರಣಾಗಿ, ತಪ್ಪೊಪ್ಪಿ ಕೊಂಡಿದ್ದಾನೆ ಎಂದು ಸ್ಥಳೀಯ ವೆಬ್‍ಸೈಟ್‍ವೊಂದು ಮಾಡಿದ್ದ ವರದಿಯನ್ನು ಪೊಲೀಸ್ ಅಧಿಕಾರಿ ಅಲ್ಲಗೆಳೆದಿದ್ದಾರೆ. ಅಭಿಷೇಕ್ ಮೃತ ದೇಹವನ್ನು ಸ್ಥಳೀಯ ಆಸ್ಪತ್ರೆಯ ಶವಾ ಗಾರದಲ್ಲಿ ಇರಿಸಲಾಗಿದ್ದು, ಬುಧವಾರ ಅಥವಾ ಗುರುವಾರ ಮರಣೋತ್ತರ ಪರೀಕ್ಷೆ ನಡೆಯ ಬಹುದು ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ಅಭಿಷೇಕ್ ತಂದೆ-ತಾಯಿ ಹಾಗೂ ಸಹೋದರ ಗುರುವಾರ ಅಮೇರಿಕಾದ ಸ್ಯಾನ್‍ಬರ್ನಾಡಿನೋಗೆ ತಲುಪುವ ಸಾಧ್ಯತೆ ಇದ್ದು, ಅವರಿಗೆ ಸಂಬಂಧಿಕರು ಮತ್ತು ಹಿತೈಷಿಗಳು ನೆರವು ನೀಡುತ್ತಿದ್ದಾರೆ.

ಅಭಿಷೇಕ್ ಕುಟುಂಬಕ್ಕೆ ಆರ್ಥಿಕ ಮುಗ್ಗಟ್ಟು; ಸಂಬಂಧಿಕರು, ಸ್ನೇಹಿತರಿಂದ ಕ್ರೌಡ್‍ಫಂಡಿಂಗ್ ಮೂಲಕ ದೇಣಿಗೆ ಸಂಗ್ರಹ
ಮೈಸೂರು,ಡಿ.1- ಅಮೇರಿಕಾದಲ್ಲಿ ಗುಂಡೇಟಿಗೆ ಬಲಿಯಾದ ಮೈಸೂರಿನ ವಿದ್ಯಾರ್ಥಿ ಅಭಿಷೇಕ್ ಪೋಷಕರು ತಮ್ಮ ಪುತ್ರನನ್ನು ಕಳೆದುಕೊಂಡಿರುವ ದುಃಖದ ಜೊತೆಗೆ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದ್ದು, ಅವರಿಗೆ ನೆರವಾಗಲು ಸಂಬಂಧಿಕರು ಹಾಗೂ ಸ್ನೇಹಿತರು ಕ್ರೌಡ್‍ಫಂಡಿಂಗ್ ಆರಂಭಿಸಿ ದೇಣಿಗೆ ಸಂಗ್ರಹಿ ಸಲು ಮುಂದಾಗಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.

ಅಭಿಷೇಕ್ ಕುಟುಂಬಕ್ಕೆ ನೆರವು ನೀಡಲು ಕ್ರೌಡ್‍ಫಂಡಿಂಗ್ ಆರಂಭಿಸಿರುವವರು 70 ಸಾವಿರ ಡಾಲರ್ (50 ಲಕ್ಷ ರೂ) ಸಂಗ್ರಹಿಸಲು ಯೋಜಿಸಿದ್ದಾರೆ ಎನ್ನಲಾಗಿದ್ದು, ಕ್ರೌಡ್‍ಫಂಡಿಂಗ್ ಆರಂಭಿಸಿದ ಕೇವಲ 14 ಗಂಟೆಗಳಲ್ಲಿ 33413 ಡಾಲರ್ ಅಂದರೆ 23.97 ಲಕ್ಷ ರೂ. ಸಂಗ್ರಹವಾಗಿದೆ ಎಂದು ಹೇಳಲಾಗಿದೆ. ಇನ್ನು ಒಂದೆರಡು ದಿನದಲ್ಲಿ ಹಣಸಂಗ್ರಹದ ಗುರಿ ಮುಟ್ಟುವ ವಿಶ್ವಾಸವನ್ನು ಅಭಿಷೇಕ್ ಕುಟುಂಬದ ಆಪ್ತರು ವ್ಯಕ್ತಪಡಿಸಿ ದ್ದಾರೆ. ಅಭಿಷೇಕ್‍ಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಕೊಡಿಸುವ ಕನಸು ಕಂಡಿದ್ದ ಅವರ ತಂದೆ ಬ್ಯಾಂಕ್‍ನಲ್ಲಿ ಶೈಕ್ಷಣಿಕ ಸಾಲ ಪಡೆದಿದ್ದರು ಎಂದು ಹೇಳಲಾಗಿದ್ದು, ಒಂದೆಡೆ ಮಗನ ವಿದ್ಯಾಭ್ಯಾಸವೂ ಪೂರ್ಣಗೊಳ್ಳದೇ ಆತ ಮೃತಪಟ್ಟಿರುವುದರಿಂದ ಬ್ಯಾಂಕ್ ಸಾಲ ಪಾವತಿಸಬೇಕಾದ ಹೊರೆಯೂ ಕೂಡಾ ಕುಟುಂಬಸ್ಥರ ಮೇಲೆ ಬಿದ್ದಿದೆ. ಈ ಎಲ್ಲಾ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಂಡಿರುವ ಅಭಿಷೇಕ್ ಕುಟುಂಬದ ಸಂಬಂಧಿ ಕರು ಮತ್ತು ಸ್ನೇಹಿತರು ದೇಣಿಗೆ ಸಂಗ್ರಹಕ್ಕೆ ಮುಂದಾದರು ಎಂದು ಹೇಳಲಾಗಿದೆ.

 

Translate »