ನಂಜನಗೂಡು: ತಾಲೂಕು ಉಪ್ಪಾರ ಜನಾಂಗದ ವತಿ ಯಿಂದ (ಮೇಲು ಸಕ್ಕರೆ ಶೆಟ್ಟರು) ನಗರದ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಉಪ್ಪಾರರ ಕಲ್ಯಾಣ ಮಂಟಪದಲ್ಲಿ ಶ್ರೀ ಭಗೀರಥ ಮಹರ್ಷಿ ಜಯಂತಿ ಆಚರಿಸಲಾಯಿತು. ಸಮಾಜದ ತಾಲೂಕು ಅಧ್ಯಕ್ಷ ಹಾಗೂ ತಾ.ಪಂ ಸದಸ್ಯ ಹಗಿನವಾಳು ಮೂಗಶೆಟ್ಟಿ ಮಾತನಾಡಿ, ಭಗೀರಥ, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಸಂಗೊಳ್ಳಿ ರಾಯಣ್ಣ, ವಾಲ್ಮೀಕಿ ಮಹರ್ಷಿ ಗಳ ತತ್ವ ಸಿದ್ದಾಂತಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಇಂತಹ ಮಹನೀಯ ರನ್ನು ಒಂದು ವರ್ಗಕ್ಕೆ ಸೀಮಿತ ಮಾಡ ಬಾರದು. ಎಲ್ಲಾ ವರ್ಗಗಳವರೂ ಈ ಮಹ ನೀಯರ…