ಮಡಿಕೇರಿ: ಮಡಿಕೇರಿ ನಗ ರದ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡು ಪ್ರಾಣ ಗಳ ಹಾವಳಿ ಹೆಚ್ಚಾಗಲು ಇಲ್ಲಿನ ಅರಣ್ಯ ಪ್ರದೇಶವನ್ನು ಪ್ರಭಾವಿ ರಾಜಕಾರ ಣ ಯೊಬ್ಬರು ಸೇರಿದಂತೆ ಸುಮಾರು 68 ಮಂದಿ ಅತಿಕ್ರಮಿಸಿಕೊಂಡಿರುವುದೇ ಕಾರಣ ಎಂದು ಆರೋಪಿಸಿರುವ ಕಾವೇರಿಸೇನೆ, ಅತಿಕ್ರಮಣವನ್ನು ತೆರವುಗೊಳಿಸಬೇಕೆಂದು ಮಾಡಿಕೊಂಡ ಮನವಿಗೆ ಅರಣ್ಯ ಇಲಾಖೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ನ್ಯಾಯಾ ಲಯದ ಮೊರೆ ಹೋಗಿರುವುದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾವೇರಿಸೇನೆಯ ಸಂಚಾಲಕ ಕೆ.ಎ.ರವಿ ಚಂಗಪ್ಪ ಅವರು, ಸಮಾಜಕ್ಕೆ ಮಾದರಿಯಾಗ ಬೇಕಾಗಿದ್ದ ಪ್ರಭಾವಿ ರಾಜಕಾರಣ ಯೊಬ್ಬರು ನಗರಸಭೆ ಹಾಗೂ ಮೂಡಾದ ಅನುಮತಿ ಇಲ್ಲದೆ ಅರಣ್ಯ ಪ್ರದೇಶಕ್ಕೆ ಸೇರಿದ ಜಾಗ ದಲ್ಲಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಮನೆ ನಿರ್ಮಿ ಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಮಡಿಕೇರಿ ಅರಣ್ಯ ಭವನದ ಬಳಿ ಪ್ರತೀ ವರ್ಷ ಕಾಡಾನೆಗಳು ಕಾಣ ಸಿಕೊಳ್ಳುತ್ತಿದ್ದು, ಇದಕ್ಕೆ ಅರಣ್ಯ ನಾಶವೇ ಕಾರಣವಾಗಿದೆ. ಮಡಿಕೇರಿ ಪಟ್ಟಣದ ಒತ್ತಿನಲ್ಲಿರುವ ಕರ್ಣಂಗೇರಿ ಗ್ರಾಮದ ಸ.ನಂ.289/1ರಲ್ಲಿ 54 ಎಕರೆ ಅರಣ್ಯ ಜಾಗವಿದ್ದು, ಇದನ್ನು ಮಡಿಕೇರಿ ಪೂರ್ವ ಅರಣ್ಯವೆಂದು ಕರೆ ಯಲಾಗುತ್ತಿದೆ. ಪ್ರಾಣ ಗಳು ಓಡಾಡಬೇಕಾ ಗಿರುವ ಈ ಅರಣ್ಯ ಜಾಗವನ್ನು ಸುಮಾರು 68 ಮಂದಿ ಒತ್ತುವರಿ ಮಾಡಿಕೊಂಡಿರು ವುದಾಗಿ ಅರಣ್ಯ ಇಲಾಖೆಯ ದಾಖಲೆ ಗಳೇ ಹೇಳುತ್ತಿವೆ. ಒತ್ತುವರಿಯಾಗಿರುವ ಜಾಗದಲ್ಲಿ ಮನೆಗಳನ್ನು ನಿರ್ಮಿಸಲಾಗಿ ದ್ದರೂ, ಅರಣ್ಯ ಇಲಾಖೆ ಈ ಪ್ರಕರಣವನ್ನು ಕಂಡೂ ಕಾಣದಂತೆ ಮೌನಕ್ಕೆ ಶರಣಾಗಿದೆ ಎಂದು ರವಿಚಂಗಪ್ಪ ಆರೋಪಿಸಿದರು.
ಅರಣ್ಯವನ್ನು ಒತ್ತುವರಿ ಮಾಡಿಕೊಂಡಿರು ವವರು ದಲಿತರು, ಮನೆ ಇಲ್ಲದವರು ಅಥವಾ ಬಡವರಲ್ಲ. ಬದಲಾಗಿ ಎಲ್ಲರೂ ಬಲಿಷ್ಠರೇ ಆಗಿದ್ದು, ಕೆಲವರು ರಾಜಕೀಯ ವಾಗಿ ರಾಜ್ಯ ಮಟ್ಟದಲ್ಲಿ ಪ್ರಭಾವ ಇರು ವವರೂ ಇದ್ದಾರೆ. ಇಂತಹ ವ್ಯಕ್ತಿಗಳು ನಗರಸಭೆ, ಮೂಡಾ ಸೇರಿದಂತೆ ಸಂಬಂಧಿ ಸಿದ ಪ್ರಾಧಿಕಾರಗಳಿಂದ ಯಾವುದೇ ಅನು ಮತಿಯನ್ನೂ ಪಡೆಯದೆ ಬೃಹತ್ ಬಂಗಲೆ ಗಳನ್ನು ನಿರ್ಮಿಸಿಕೊಂಡಿದ್ದಾರೆ. ತಾನು ಮಾಹಿತಿ ಹಕ್ಕಿನಡಿ ಸಂಗ್ರಹಿಸಿರುವ ಮಾಹಿ ತಿಯ ಅನ್ವಯ ಪ್ರಭಾವಿ ರಾಜಕಾರಣ ಯೊಬ್ಬರು ಸಂಬಂಧಿಸಿದ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆ, ಭೂ ಪರಿವರ್ತನೆ ಯನ್ನೂ ಮಾಡದೆ ಮನೆಯನ್ನು ನಿರ್ಮಿಸಿ ಕೊಂಡಿರುವುದು ಬೆಳಕಿಗೆ ಬಂದಿದ್ದು, ಈ ಕುರಿತು ಸಂಬಂಧಿಸಿದ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರವಿಚಂಗಪ್ಪ ಆರೋಪಿಸಿದರು.
ಇದೀಗ ಸಂಘಟನೆ ವತಿಯಿಂದ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದೂರು ದಾಖ ಲಿಸಲಾಗಿದ್ದು, ದೂರಿನಲ್ಲಿ ಪ್ರಭಾವಿ ರಾಜ ಕಾರಣ ಸಹಿತ ಅರಣ್ಯ ಜಾಗವನ್ನು ಅತಿಕ್ರಮಿಸಿ ಕಳೆದ ಹಲವು ದಶಕಗಳಿಂದ ವಾಸಿಸುತ್ತಿರುವ ಎಲ್ಲಾ 68 ಕುಟುಂಬ ಗಳನ್ನು ಒಕ್ಕಲೆಬ್ಬಿಸುವಂತೆ ಕೋರಲಾಗಿದೆ ಎಂದು ಹೇಳಿದರು.
ದಿಡ್ಡಳ್ಳಿಯಲ್ಲಿ ಅರಣ್ಯದಂಚಿನಲ್ಲಿದ್ದ ಆದಿವಾಸಿಗಳನ್ನು ನಿರ್ದಾಕ್ಷಿಣ್ಯವಾಗಿ ಹೊರ ಹಾಕಿದ ಅರಣ್ಯ ಇಲಾಖೆ ಮಡಿಕೇರಿ ಯಲ್ಲಿ ತನ್ನದೇ ಜಾಗದಲ್ಲಿ ವಾಸವಾಗಿರುವ ಪ್ರಭಾವಿಗಳು, ಹಣವಂತರನ್ನು ಒಕ್ಕಲೆಬ್ಬಿ ಸದೆ ಮೌನವಾಗಿರುವುದೇಕೆ ಎಂದು ಪ್ರಶ್ನಿ ಸಿದ ಅವರು, ಅರಣ್ಯ ಇಲಾಖೆಯ ಕಾನೂನಿ ನಲ್ಲಿ ಪ್ರಭಾವಿಗಳಿಗೊಂದು, ಇತರರಿಗೆ ಮತ್ತೊಂದು ಕಾನೂನು ಇದೆಯೇ ಎಂದೂ ಪ್ರಶ್ನಿಸಿದರು. ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಿ ಸಿದ ಇತರ ಇಲಾಖೆಗಳು ತಕ್ಷಣ ಕಾರ್ಯ ಪ್ರವೃತ್ತರಾಗಿ ಒತ್ತುವರಿಯನ್ನು ತೆರವುಗೊಳಿ ಸಬೇಕು ಎಂದು ಆಗ್ರಹಿಸಿದ ರವಿಚಂಗಪ್ಪ, ತಪ್ಪಿದಲ್ಲಿ ಅರಣ್ಯ ಇಲಾಖೆ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷ ಹೊಸಬೀಡು ಶಶಿ, ಹಾಗೂ ದಿವಾಕರ ಉಪಸ್ಥಿತರಿದ್ದರು.