ಪರಿವಾರ, ತಳವಾರ ಸಮುದಾಯ ಎಸ್‍ಟಿ ಸೇರ್ಪಡೆ ಕನಸು ನನಸು ಸಂಸದ ಬಿ. ಶ್ರೀರಾಮುಲು
ಮೈಸೂರು

ಪರಿವಾರ, ತಳವಾರ ಸಮುದಾಯ ಎಸ್‍ಟಿ ಸೇರ್ಪಡೆ ಕನಸು ನನಸು ಸಂಸದ ಬಿ. ಶ್ರೀರಾಮುಲು

April 25, 2018

ನಂಜನಗೂಡು: ಕಳೆದ 30 ವರ್ಷಗಳಿಂದ ಪರಿವಾರ, ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಹೋರಾಟ ನಡೆಯಿತು. ಕಾಂಗ್ರೆಸ್ ಸರ್ಕಾರ ಸೇರ್ಪಡೆ ಭರವಸೆ ನೀಡಿ ಕೈ ತೊಳೆದುಕೊಂಡಿತ್ತು. ಆದರೆ ಕೇಂದ್ರ ಬಿಜೆಪಿ ಸರ್ಕಾರ ಈ ವಿವಾದ ಬಗೆಹರಿಸಿಕೊಡುವ ಮೂಲಕ ನಾಯಕ ಸಮಾಜಕ್ಕೆ ನ್ಯಾಯ ದೊರಕಿಸಿಕೊಟ್ಟಿದೆ ಎಂದು ಸಂಸದ ಶ್ರೀರಾಮುಲು ಹೇಳಿದರು.ನಗರದ ದವಳ ಸಭಾಂಗಣದಲ್ಲಿ ನಡೆದ ನಾಯಕ ಸಮುದಾಯ ಸಭೆಯಲ್ಲಿ ಅವರು ಮಾತನಾಡಿದರು.

30 ವರ್ಷದಿಂದ ಉದ್ಯೋಗಕ್ಕಾಗಿ, ವಿದ್ಯಾ ಭ್ಯಾಸಕ್ಕಾಗಿ ಜನಾಂಗದ ಅನೇಕ ಬಡವರು ಪ್ರಮಾಣ ಪತ್ರ ಸಿಗದೇ ಪರದಾಡು ವಂತಾಯಿತು. ಹೋರಾಟಗಳೂ ನಡೆದು ನೊಂದು ಕೊನೆಗೆ ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವ ನಿದರ್ಶನಗಳೂ ಇವೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರದ ಎಲ್ಲಾ ನಾಯಕರ ವಿಶೇಷ ಕಾಳಜಿಯಿಂದ ಈ ಸಮಸ್ಯೆ ಬಗೆಹರಿದಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಜನಾಂಗಕ್ಕೆ ಶೇ 7.5 ರಷ್ಟು ಮೀಸಲಾತಿಯನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಎಸ್‍ಟಿ ಮೋರ್ಚಾ ಉಪಾಧ್ಯಕ್ಷ ಸಿ.ಚಿಕ್ಕರಂಗನಾಯಕ ಮಾತನಾಡಿ, ತಳವಾರ, ಪರಿವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿದ್ದ ಕ್ಕಾಗಿ ಕೇಂದ್ರ ಬಿಜೆಪಿ ನಾಯಕರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ. ಶ್ರೀರಾಮುಲು ಅವರಿಗೆ ಸಮು ದಾಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿ.ರಾಮುಲು ಅವರು ಉಪ ಮುಖ್ಯಮಂತ್ರಿಯಾಗುವ ಸಂಭವವಿದೆ. ಸಮುದಾಯ ವದಂತಿ ಗಳಿಗೆ ಕಿವಿಗೊಡದೆ ಬಿಜೆಪಿ ಪಕ್ಷವನ್ನು ಬೆಂಬ ಲಿಸಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಮುಡಾ ಮಾಜಿ ಅಧ್ಯಕ್ಷ ಬಸವೇ ಗೌಡ, ನಂಜನಗೂಡು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹರ್ಷವರ್ಧನ್, ಬಿಜೆಪಿ ತಾಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾ ಧ್ಯಕ್ಷ ಬಾಲ ಚಂದ್ರು, ಕೆ.ಡಿ.ಮಂಜು, ಶಿವಣ್ಣ ಹಾಜರಿದ್ದರು.

Translate »