ಬಿಜೆಪಿ, ಜೆಡಿಎಸ್‍ನಿಂದ ಸಿದ್ದರಾಮಯ್ಯನವರ ಮೇಲೆ ರಾಜಕೀಯ ದಾಳಿ ವಾಟಾಳು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಹೆಚ್.ಸಿ. ಮಹದೇವಪ್ಪ
ಮೈಸೂರು

ಬಿಜೆಪಿ, ಜೆಡಿಎಸ್‍ನಿಂದ ಸಿದ್ದರಾಮಯ್ಯನವರ ಮೇಲೆ ರಾಜಕೀಯ ದಾಳಿ ವಾಟಾಳು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಹೆಚ್.ಸಿ. ಮಹದೇವಪ್ಪ

April 25, 2018

ತಿ.ನರಸೀಪುರ: ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಬಡವರ ಪರವಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿ, ರಾಜಕೀಯ ದಾಳಿ ನಡೆಸುತ್ತಿ ದ್ದಾರೆ ಎಂದು ಲೋಕೋಪಯೋಗಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹ ದೇವಪ್ಪ ಹೇಳಿದರು.

ತಾಲೂಕಿನ ವಾಟಾಳು ಗ್ರಾಮದಲ್ಲಿ ಮಂಗಳವಾರ ಪಾದಯಾತ್ರೆ ಮೂಲಕ ಮತಯಾಚಿಸಿ ಮಾತನಾಡಿ, ರೈತಪರ ಧ್ವನಿಯಾಗಿ, ಎಲ್ಲಾ ಬಡವರ ಪರವಾಗಿ ರುವ ಸಿದ್ದರಾಮಯ್ಯ ಅವರನ್ನು ಅಧಿಕಾರ ದಿಂದ ಕೆಳಗಿಳಿಸಿದರೆ ಬಡವರ ಮೇಲೆ ಸವಾರಿ ಮಾಡಬಹುದೆಂಬ ದುರುದ್ದೇಶ ಬಿಜೆಪಿ ಹಾಗೂ ಜೆಡಿಎಸ್‍ನದ್ದಾಗಿದೆ ಎಂದರು.

ರಾಜ್ಯದಲ್ಲಿ ಬಿಜೆಪಿಯಾಗಲೀ, ಜೆಡಿಎಸ್ ಆಗಲಿ ಅಧಿಕಾರಕ್ಕೆ ಬರುವುದಿಲ್ಲ. ಸರ್ಕಾರವೇ ಅಧಿಕಾರಕ್ಕೆ ಬಾರದ ಮೇಲೆ ಕ್ಷೇತ್ರದಲ್ಲಿ ಅವೆರಡು ಪಕ್ಷಗಳ ಅಭ್ಯರ್ಥಿಗೆ ಮತವನ್ನು ಹಾಕಿದರೆ ಅಭಿವೃದ್ಧಿಯನ್ನಾ ಗಲಿ, ಜನರ ಕೆಲಸವನ್ನಾಗಲಿ ಮಾಡಲು ಸಾಧ್ಯವಿಲ್ಲ. ಮತ ಕೇಳೋಕೆ ಬರುವ ಅವರನ್ನು ಗೌರವಯುತವಾಗಿ ಕಾಣಬೇಕು. ಆದರೆ ರಾಜಕೀಯವಾಗಿ ಬೆಂಬಲಿಸಬಾರದೆಂದು ಮಹದೇವಪ್ಪ ಕರೆ ನೀಡಿದರು.

ಮತಯಾಚನೆಗೂ ಮೊದಲು ವಾಟಾಳು ಗ್ರಾಮದಲ್ಲಿರುವ ಸೂರ್ಯ ಸಿಂಹಾಸನ ಮಠಕ್ಕೆ ಭೇಟಿ ನೀಡಿ ಸಿದ್ಧ ಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಯುವ ಮುಖಂಡ ಸುನೀಲ್ ಬೋಸ್, ಜಿ.ಪಂ ಸದಸ್ಯ ಮಂಜುನಾಥನ್, ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಎಂ.ಡಿ. ಬಸವರಾಜು, ಕೆಪಿಸಿಸಿ ಉಪಾಧ್ಯಕ್ಷ ಹೊನ್ನನಾಯಕ, ಅಲ್ಪಸಂಖ್ಯಾತ ವಿಭಾ ಗದ ಉಪಾಧ್ಯಕ್ಷ ಎನ್.ಕೆ.ಫರೀದ್, ಸಂಚಾಲಕ ಬಿ.ಮನ್ಸೂರ್ ಆಲಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಎಸ್.ಶಿವಮೂರ್ತಿ, ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ತಾ.ಪಂ ಸದಸ್ಯ ಹೆಚ್.ಎನ್.ಉಮೇಶ, ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವ ಕುಮಾರ್, ಪುರಸಭೆ ಅಧ್ಯಕ್ಷ ಸಿ.ಉಮೇಶ, ಸದಸ್ಯ ರಾಘವೇಂದ್ರ, ಎಸ್ಸಿ/ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ಸೋಸಲೆ ಮಹದೇವ ಸ್ವಾಮಿ, ಗುತ್ತಿಗೆದಾರ ರಾಚೇಗೌಡ, ಗ್ರಾ.ಪಂ ಮಾಜಿ ಅಧ್ಯಕ್ಷ ವಾಟಾಳು ನಾಗೇಶ, ಅಕ್ಕೂರು ಮಹೇಶ, ಮುಖಂಡರಾದ ಪಿ.ಪುಟ್ಟ ರಾಜು, ಕೇತಹಳ್ಳಿ ಮಲ್ಲಣ್ಣ, ಕನ್ನಡ ಪುಟ್ಟ ಸ್ವಾಮಿ, ಅಂದಾನಿ, ಲಕ್ಷ್ಮೀನಾರಾಯಣ, ಎಂ.ಶಿವಮೂರ್ತಿ, ಹದಿನಾರು ಶಿವ ಕುಮಾರ್, ಜನ್ನೂರು ಮಹದೇವ ಹಾಗೂ ಇನ್ನಿತರರು ಹಾಜರಿದ್ದರು.

Translate »