ಬಿಜೆಪಿ ತೊರೆದು ‘ಕೈ’ ಸೇರಿದ ಲಕ್ಷ್ಮಣ್‍ಕುಮಾರ್
ಮಂಡ್ಯ

ಬಿಜೆಪಿ ತೊರೆದು ‘ಕೈ’ ಸೇರಿದ ಲಕ್ಷ್ಮಣ್‍ಕುಮಾರ್

April 25, 2018

ಮದ್ದೂರು: ತಾಲೂಕು ಬಿಜೆಪಿ ಅಧ್ಯಕ್ಷ ಲಕ್ಷ್ಮಣ್‍ಕುಮಾರ್ ಬಿಜೆಪಿ ತೊರೆದು ಮಧು ಜಿ.ಮಾದೇಗೌಡರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

ಈ ವೇಳೆ ಮಾತನಾಡಿದ ಲಕ್ಷ್ಮಣ್ ಕುಮಾರ್, ಕಳೆದ 2 ವರ್ಷದಿಂದ ತಾಲೂಕಿ ನಾದ್ಯಂತ ತಳಮಟ್ಟದಿಂದ ಬಿಜೆಪಿಯನ್ನು ಸಂಘಟಿಸಿದ್ದೇನೆ. ಪ್ರತಿ ಹಳ್ಳಿಯಲ್ಲೂ ಬಿಜೆಪಿ ಕಾರ್ಯಕರ್ತರನ್ನು ಹುಟ್ಟು ಹಾಕಿ, ಹೋಬಳಿಗಳಲ್ಲಿ ಉಚಿತ ಆರೋಗ್ಯ ತಪಾ ಸಣಾ ಶಿಬಿರ ಸೇರಿದಂತೆ ಸಮಾಜಮುಖಿ ಕಾರ್ಯಗಳನ್ನು ಮಾಡಿ ಪಕ್ಷಕ್ಕೆ ಉತ್ತಮ ಹೆಸರು ತಂದಿದ್ದೆ. ಆದರೆ ಇಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸುವ ಉದ್ದೇಶದಿಂದ ನನ್ನಂತ ನಿಷ್ಠಾವಂತನಿಗೆ ಟಿಕೆಟ್ ನೀಡದೇ ಮೋಸ ಮಾಡಿದ್ದಾರೆ. ಹೀಗಾಗಿ ನನ್ನ ಅಪಾರ ಬೆಂಬ ಲಿಗರ ಜೊತೆ ಹಲವು ಬಾರಿ ಚರ್ಚಿಸಿ ಯಾವುದೇ ಪ್ರತಿಫಲ ಬಯಸದೆ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದು, ಪಕ್ಷ ಗೆಲ್ಲಿಸುವುದೇ ನನ್ನ ಮುಂದಿನ ಗುರಿ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇ ಗೌಡ ಮಾತನಾಡಿ, ಲಕ್ಷ್ಮಣ್‍ಕುಮಾರ್ ಸೇರ್ಪಡೆಯಿಂದ ಕಾಂಗ್ರೆಸ್‍ಗೆ ಆನೆ ಬಲ ಬಂದಿದೆ. ಇವರನ್ನು ಹಾಗೂ ಬೆಂಬಲಿ ಗರನ್ನು ಪಕ್ಷದಲ್ಲಿ ಗೌರವಯುತವಾಗಿ ನಡೆಸಿಕೊಳ್ಳಲಾಗುವುದು ಎಂದರು.
ಮಾಜಿ ಎಂಎಲ್‍ಸಿ ಬಿ.ರಾಮಕೃಷ್ಣ, ಜಿಪಂ ಮಾಜಿ ಅಧ್ಯಕ್ಷ ಎಸ್.ಗುರುಚರಣ್, ಜಿಪಂ ಸದಸ್ಯ ರಾಜೀವ್, ಪುರಸಭಾ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜು, ಮುಖಂಡರಾದ ವಿ.ಕೆ.ಜಗದೀಶ್, ಟೈರ್ ಗಿರಿ, ದಾಕ್ಷಾಯಿಣ , ಲಕ್ಷ್ಮಣ್, ಕುಮಾರ್, ಯೋಗನಂದಾ, ಶಶಿಧರ್, ಸಿದ್ದು ಇನ್ನಿತರರು ಹಾಜರಿದ್ದರು.

Translate »