ರೈತರಿಗೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ: ಡಿಸಿಟಿ
ಮಂಡ್ಯ

ರೈತರಿಗೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ: ಡಿಸಿಟಿ

April 25, 2018

ಭಾರತೀನಗರ: ರಾಜ್ಯದ ರೈತರಿಗೆ ರೈತಪರ ನಿಲುವು ಹೊಂದಿರುವ ಪ್ರಾದೇಶಿಕ ಪಕ್ಷ ಜೆಡಿಎಸ್‍ನ ಅನಿವಾರ್ಯತೆ ಇದೆ ಎಂದು ಜೆಡಿಎಸ್ ಅಭ್ಯರ್ಥಿ ಡಿ.ಸಿ. ತಮ್ಮಣ್ಣ ತಿಳಿಸಿದರು.

ಕ್ಷೇತ್ರದ ಚಿಕ್ಕರಸಿನಕೆರೆ ಹೋಬಳಿ ವ್ಯಾಪ್ತಿಯ ಕಾಡುಕೊತ್ತನಹಳ್ಳಿ, ಭುಜವಳ್ಳಿ, ಕಪರನಕೊಪ್ಪಲು ಇನ್ನಿತರೆ ಗ್ರಾಮಗಳಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, 20 ತಿಂಗಳ ಅಧಿಕಾರಾವಧಿಯಲ್ಲಿ ರೈತಪರ ಕೆಲಸ ಮಾಡಿದ್ದ ಹೆಚ್.ಡಿ.ಕುಮಾರ ಸ್ವಾಮಿ ಈ ಬಾರಿ ಮುಖ್ಯಮಂತ್ರಿಯಾಗಲಿ ದ್ದಾರೆ ಎಂದರು.

ಇಸ್ರೇಲ್ ಮಾದರಿ ಕೃಷಿ ಜಾರಿಗೊಳಿ ಸುವ ಇಚ್ಛಾಶಕ್ತಿ ಜೆಡಿಎಸ್ ವರಿಷ್ಠರಿಗಿದೆ. ರೈತರು ಸಿದ್ದರಾಮಯ್ಯ ಸರ್ಕಾರದಲ್ಲಿ ಸಂಕಷ್ಟ ಎದುರಿಸುತ್ತಿದ್ದು, ಅವರ ಶ್ರೇಯೋಭಿವೃದ್ಧಿಗೆ ಜೆಡಿಎಸ್ ಅಧಿಕಾರಕ್ಕೆ ಬರಬೇಕಿದೆ ಎಂದರು.

ವಿರೋಧಿಗಳು ನನ್ನ ರಾಜಕೀಯ ಏಳ್ಗೆ ಸಹಿಸದೇ ಅಪಪ್ರಚಾರದಲ್ಲಿ ನಿರತರಾ ಗಿದ್ದಾರೆ. ಆದರೆ ನನ್ನ ಅಧಿಕಾರವಧಿಯಲ್ಲಿ 1400 ಕೋಟಿಗೂ ಮಿಗಿಲಾದ ಅನು ದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಆದರೆ, ಅಧಿಕಾರಾವಿದ್ದಾಗ ಅನುದಾನ ವನ್ನು ಸ್ವಂತಕ್ಕೆ ಬಳಸಿಕೊಂಡವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇ ಗೌಡರ ವಿರುದ್ಧ ಹರಿಹಾಯ್ದರು.
ಈ ಸಂದರ್ಭ ಜಿಪಂ ಸದಸ್ಯೆ ಸುಕನ್ಯಾ, ತಾಪಂ ಸದಸ್ಯ ನಂಜುಂಡಯ್ಯ, ದಲಿತ ಸೇನಾ ಸಮಿತಿ ಅಧ್ಯಕ್ಷ ಎಂ.ಸುದರ್ಶನ್, ಮಲ್ಲರಾಜು, ಮಾದೇಗೌಡ, ಶಿವಸ್ವಾಮಿ, ದಯಾನಂದ್, ಶಿವಕುಮಾರ್ ಸೇರಿದಂತೆ ಇತರರಿದ್ದರು.

Translate »