ಕೆ.ಆರ್.ಪೇಟೆ: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯುವಂತೆ ಶಾಸಕ ಕೆ.ಸಿ.ನಾರಾಯಣಗೌಡ ಮತ್ತು ಜಿಪಂ ಸದಸ್ಯ ಬಿ.ಎಲ್.ದೇವರಾಜು ಅವರಿಗೆ ಸಿ.ಫಾರಂ ನೀಡಿದ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ಶಾಸಕ ಕೆ.ಸಿ.ನಾರಾಯಣಗೌಡರು ಜೆಡಿಎಸ್ ವರಿಷ್ಠರಿಂದ ಬಿ.ಫಾರಂ ಪಡೆದು ಏ.23ರಂದು ಸಾವಿರಾರು ಕಾರ್ಯಕರ್ತ ರೊಂದಿಗೆ ಪಟ್ಟಣದ ಮಿನಿ ವಿಧಾನಸೌಧ ದಲ್ಲಿ ನಾಮಪತ್ರ ಸಲ್ಲಿಸಿದ್ದರು. ಆದರೆ ಜಿಪಂ ಸದಸ್ಯ ಬಿ.ಎಲ್.ದೇವರಾಜು ಸೋಮವಾರ ಸಂಜೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಮನವೊಲಿಸಿ, ಅವರಿಂದ ನಾರಾಯಣ ಗೌಡರಿಗೆ ನೀಡಿದ್ದ ಬಿ.ಫಾರಂ ಪರಿಗಣ ಸದಂತೆ ಸಿ.ಫಾರಂ ಪಡೆದು ನಾಮಪತ್ರ ಸಲ್ಲಿಸಲು ಕಡೇ ದಿನವಾಗಿದ್ದ ಇಂದು ಪಟ್ಟಣದ ಶ್ರೀರಂಗ ಚಿತ್ರಮಂದಿರದಿಂದ ಚೋಳೇನ ಹಳ್ಳಿ ಪುಟ್ಟಸ್ವಾಮಿಗೌಡ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಆರ್.ವೆಂಕಟಸುಬ್ಬೇ ಗೌಡ, ಬಸ್ ಕೃಷ್ಣೇಗೌಡ ಮತ್ತು ಶೀಳನೆರೆ ರಮೇಶ್, ಕೆ.ಎಸ್.ಸಂತೋಷ್, ಜಯ ರಂಗ, ವಕೀಲ ನವೀನ್‍ಕುಮಾರ್, ಕಾಯಿ ಮಂಜೇಗೌಡ ಸೇರಿದಂತೆ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಮೆರವಣ ಗೆಯಲ್ಲಿ ಬಂದು ಜೆಡಿಎಸ್‍ನ ಅಧಿಕೃತ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದರು.
ಆದರೆ ಮಂಗಳವಾರ ಮಧ್ಯಾಹ್ನ 2ಗಂಟೆ ವೇಳೆಗೆ ಬಿ.ಎಲ್.ದೇವರಾಜು ಅವರಿಗೆ ನೀಡಿದ ಸಿ.ಫಾರಂ ಪರಿಗಣ ಸದಂತೆ ಶಾಸಕ ಕೆ.ಸಿ.ನಾರಾಯಣಗೌಡ ಜೆಡಿಎಸ್ ವರಿಷ್ಠ ದೇವೇಗೌಡರಿಂದ ಮತ್ತೊಂದು ಸಿ.ಫಾರಂನೊಂದಿಗೆ ಪಟ್ಟಣದ ಚುನಾವಣಾ ಕಚೇರಿಗೆ ಆಗಮಿಸಿ ಮತ್ತೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿದ ಬಿ.ಎಲ್.ದೇವರಾಜು, ಶಾಸಕರು ನಾಮಪತ್ರ ಸಲ್ಲಿಸುವ ವೇಳೆ ನೀಡಿ ರುವ ದಾಖಲಾತಿಗಳನ್ನು ಮಾತ್ರ ಪರಿಗಣ ಸ ಬೇಕು. 3ಗಂಟೆ ನಂತರ ನೀಡಿದ ದಾಖಲಾತಿ ಸ್ವೀಕರಿಸಿದರೆ ನ್ಯಾಯಾಲಯದ ಮೆಟ್ಟಿಲೇರುವು ದಾಗಿ ಚುನಾವಣಾಧಿಕಾರಿ ಗಳಿಗೆ ಎಚ್ಚರಿಕೆ ನೀಡಿದರು. ಇದರಿಂದ ಕೆಲಕಾಲ ಚುನಾವಣಾಧಿ ಕಾರಿ, ದೇವರಾಜು ನಡುವೆ ಮಾತಿನ ಚಕಮಕಿ ನಡೆಯಿತು. ಒಟ್ಟಿನಲ್ಲಿ ಜೆಡಿಎಸ್ ಪಕ್ಷದವರ ಬಿ.ಫಾರಂ, ಸಿ.ಫಾರಂ ಗೊಂದಲದಿಂದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಹೈರಾಣಾಗಿದ್ದು ಮಾತ್ರ ಸುಳ್ಳಲ್ಲ.