ವಿಧಾನಸಭಾ ಚುನಾವಣೆ: ಕಡೇ ದಿನ 82 ನಾಮಪತ್ರ ಸಲ್ಲಿಕೆ
ಮಂಡ್ಯ

ವಿಧಾನಸಭಾ ಚುನಾವಣೆ: ಕಡೇ ದಿನ 82 ನಾಮಪತ್ರ ಸಲ್ಲಿಕೆ

April 25, 2018

ಮಂಡ್ಯ: ಸಾರ್ವತ್ರಿಕ ವಿಧಾನ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೇ ದಿನವಾದ ಏ.24 ರಂದು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ 71 ಅಭ್ಯರ್ಥಿಗಳಿಂದ 82 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮೇಲುಕೋಟೆ ವಿಧಾನಸಭಾ ಕ್ಷೇತ್ರ: ಸಮಾಜವಾದಿ ಪಕ್ಷದಿಂದ ರೋಹಿಣ 1 ನಾಮಪತ್ರ, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಆರ್.ಎಸ್.ಹನುಮಂತೇ ಗೌಡ 2 ನಾಮಪತ್ರ, ಬಿಜೆಪಿಯಿಂದ ಸುಂಡಹಳ್ಳಿ ಸೋಮಶೇಖರ್ 1 ನಾಮ ಪತ್ರ, ಕರ್ನಾಟಕ ಜನತಾ ಪಕ್ಷದಿಂದ ಜಿ.ಎಂ. ರಮೇಶ್ 1 ನಾಮಪತ್ರ, ಪಕ್ಷೇತರ ಅಭ್ಯರ್ಥಿಗಳಾಗಿ ಎಂ.ರಮೇಶ 1 ನಾಮಪತ್ರ, ಕೆ.ಎಸ್. ದರ್ಶನ್ 1 ನಾಮಪತ್ರ, ಪುಟ್ಟರಾಜು 1 ನಾಮಪತ್ರ, ಹೆಚ್.ನಾರಾಯಣ 1 ನಾಮಪತ್ರ ಹಾಗೂ ಜೆ.ಶಿವಲಿಂಗೇಗೌಡ 1 ನಾಮಪತ್ರ ಸಲ್ಲಿಸಿದ್ದಾರೆ.
ನಾಗಮಂಗಲ ವಿಧಾನಸಭಾ ಕ್ಷೇತ್ರ: ಪಕ್ಷೇತರ ಅಭ್ಯರ್ಥಿಗಳಾಗಿ ಬಿ.ವಿ.ಧರಣೇಂದ್ರ ಬಾಬು 1 ನಾಮಪತ್ರ, ಯಡವನಹಳ್ಳಿ ಪಿ.ಸಿ. ಕೃಷ್ಣೇಗೌಡ 1 ನಾಮಪತ್ರ, ವೆಂಕಟೇಶ 1 ನಾಮಪತ್ರ, ಬಿ.ಕೆ.ಗಂಗಾಧರ 1 ನಾಮ ಪತ್ರ, ಎಲ್.ಜಯರಾಮೇಗೌಡ 1 ನಾಮ ಪತ್ರ ಹಾಗೂ ಕರ್ನಾಟಕ ಜನತಾ ಪಕ್ಷ ದಿಂದ ಬಿ.ಎನ್.ಗೌಡ 1 ನಾಮಪತ್ರ ಸಲ್ಲಿಸಿದ್ದಾರೆ.

ಮದ್ದೂರು ವಿಧಾನಸಭಾ ಕ್ಷೇತ್ರ: ಪಕ್ಷೇತರ ಅಭ್ಯರ್ಥಿಗಳಾಗಿ ಬಿ.ಚೇತನ್ 1 ನಾಮಪತ್ರ, ಚಿಕ್ಕನಂಜಾಚಾರಿ 1 ನಾಮಪತ್ರ, ಎನ್.ಸಿ.ಪುಟ್ಟರಾಜು 1 ನಾಮಪತ್ರ, ವೆಂಕಟೇಶ 1 ನಾಮಪತ್ರ, ಎಸ್.ಮಹೇಶ್ 1 ನಾಮಪತ್ರ, ಸ್ವರಾಜ್ ಇಂಡಿಯಾ ಪಕ್ಷದಿಂದ ಲಿಂಗೇಗೌಡ 1 ನಾಮಪತ್ರ, ಫೆಡರಲ್ ಕಾಂಗ್ರೆಸ್ ಆಫ್ ಇಂಡಿಯಾ ಪಕ್ಷದಿಂದ ಡಾ.ಮನೀಜಿತ್ 1 ನಾಮಪತ್ರ, ಬಿಜೆಪಿಯಿಂದ ಎಂ.ಸತೀಶ್ 1 ನಾಮಪತ್ರ, ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯಿಂದ ಬಿ.ವೆಂಕಟೇಶ 1 ನಾಮಪತ್ರ ಹಾಗೂ ರಾಷ್ಟ್ರೀಯ ಮಾನವ ವಿಕಾಸ ಪಕ್ಷದಿಂದ ವಿಶ್ವನಾಥ್ ರಾವ್ 1 ನಾಮಪತ್ರ ಸಲ್ಲಿಸಿದ್ದಾರೆ.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ: ರಾಷ್ಟ್ರೀಯ ಮಾನವ ವಿಕಾಸ ಪಕ್ಷದಿಂದ ಎಸ್.ವೆಂಕಟೇಶ್ 1 ನಾಮಪತ್ರ, ಪ್ರಜಾ ಪರಿವರ್ತನಾ ಪಾರ್ಟಿಯಿಂದ ಹೆಚ್.ಎಂ. ಸತೀಶ 1 ನಾಮಪತ್ರ, ಎಐಎಂಇಪಿ ಯಿಂದ ವಿ.ಸುರೇಶ್ 1 ನಾಮಪತ್ರ, ಪಕ್ಷೇತರ ಅಭ್ಯರ್ಥಿ ಗಳಾಗಿ ಪಿ.ಹೆಚ್.ಚಂದ್ರಶೇಖರ್ 1 ನಾಮಪತ್ರ, ಸಿ.ಹೇಮಂತ್ ಕುಮಾರ್ 1 ನಾಮಪತ್ರ, ಎಸ್.ಎಸ್.ರಾಜಶೇಖರಯ್ಯ 1 ನಾಮಪತ್ರ, ಸಿ.ಲಿಂಗೇಗೌಡ 1 ನಾಮ ಪತ್ರ, ಎಂ.ಎಂ.ಮಹೇಶಗೌಡ 1 ನಾಮಪತ್ರ, ಸಿದ್ದಯ್ಯ 1 ನಾಮಪತ್ರ, ಚಿದಂಬರ ಎಂ.ಸಿ 1 ನಾಮಪತ್ರ ಹಾಗೂ ಕೆಂಪೇಗೌಡ ಅವರು 1 ನಾಮಪತ್ರ ಸಲ್ಲಿಸಿದ್ದಾರೆ.

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ: ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷದಿಂದ ದಿವಾಕರ 1 ನಾಮಪತ್ರ, ಜೆಡಿಎಸ್ ನಿಂದ ಬಿ.ಎಲ್.ದೇವರಾಜ 1 ನಾಮಪತ್ರ, ಜೆಡಿಎಸ್‍ನಿಂದ ನಾರಾಯಣಗೌಡ 1 ನಾಮಪತ್ರ, ಪಕ್ಷೇತರ ಅಭ್ಯರ್ಥಿಗಳಾಗಿ ಪುಟ್ಟಣ್ಣ ಎಸ್.ಗೌಡ 1 ನಾಮಪತ್ರ, ಆರ್.ಜಗದೀಶ್ 1 ನಾಮಪತ್ರ, ನಾರಾಯಣ ಗೌಡ 1 ನಾಮಪತ್ರ, ಶಂಕರೇಗೌಡ ಕೆ.ಎನ್ 1 ನಾಮಪತ್ರ, ಬಿ.ಪ್ರಕಾಶ್ 2 ನಾಮಪತ್ರ, ಅಶೋಕ 1 ನಾಮಪತ್ರ, ಎ.ಆರ್.ರಘು 1 ನಾಮಪತ್ರ ಹಾಗೂ ಬಿ.ಎಲ್ ದೇವರಾಜ 1 ನಾಮಪತ್ರ ಸಲ್ಲಿಸಿದ್ದಾರೆ.

ಮಳವಳ್ಳಿ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್ ನಿಂದ ಪಿ.ಎಂ.ನರೇಂದ್ರಸ್ವಾಮಿ 1 ನಾಮಪತ್ರ, ಆಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿಯಿಂದ ವಿಶ್ವನಾಥ್ 2 ನಾಮಪತ್ರ, ಭಾರತೀಯ ರಾಷ್ಟ್ರೀಯ ಮಹಿಳಾ ಸರ್ವೋದಯ ಕಾಂಗ್ರೆಸ್ ಪಕ್ಷದಿಂದ ಎಂ. ಕೃಷ್ಣಮೂರ್ತಿ 1 ನಾಮಪತ್ರ, ಕರ್ನಾಟಕ ಪ್ರಜಾವಂತ ಜನತಾ ಪಾರ್ಟಿಯಿಂದ ನೀಲಮ್ಮ 1 ನಾಮಪತ್ರ, ಬಿಜೆಪಿಯಿಂದÀ ಬಿ.ಸೋಮಶೇಖರ್ 1 ನಾಮಪತ್ರ, ಲೋಕ ಅದಾಲತ್ ದಳ ಪಕ್ಷದಿಂದ ಎಂ.ಕೆ.ವಿದ್ಯಾ 1 ನಾಮಪತ್ರ, ಪಕ್ಷೇತರ ಅಭ್ಯರ್ಥಿಗಳಾಗಿ ಮಹದೇವಮ್ಮ 1 ನಾಮಪತ್ರ, ಆರ್.ಸಿದ್ದ ರಾಜು 1 ನಾಮಪತ್ರ, ಹೆಚ್.ಮಹದೇವ 1 ನಾಮಪತ್ರ, ಎಂ.ನಂಜಪ್ಪ 1 ನಾಮಪತ್ರ, ಹೆಚ್.ಡಿ.ದೇವಪ್ರಸಾದ್ 3 ನಾಮಪತ್ರ ಸಲ್ಲಿಸಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರ: ಪಕ್ಷೇತರ ಅಭ್ಯರ್ಥಿಗಳಾಗಿ ಹೆಚ್.ಎನ್.ಹರೀಶ್ 1 ನಾಮಪತ್ರ, ರಾಜೇಶ 2 ನಾಮಪತ್ರ, ಎಂ.ಬಿ.ನಾಗಣ್ಣ 1 ನಾಮಪತ್ರ, ಸಿ.ಎಂ. ಕೃಷ್ಣ 1 ನಾಮಪತ್ರ, ಹೆಚ್.ಬಿ.ರಾಮು 3 ನಾಮಪತ್ರ, ಎಂ.ಸಿ.ನಿತ್ಯಾನಂದ 1 ನಾಮ ಪತ್ರ, ಸಿದ್ದಾರಾಮೇಗೌಡ 1 ನಾಮಪತ್ರ, ಕೆ.ಮಲ್ಲೇಶ್ 1 ನಾಮಪತ್ರ, ಉಮೇಶ್ ಚಂದ್ರ 1 ನಾಮಪತ್ರ, ಬೋರಯ್ಯ 1 ನಾಮಪತ್ರ, ಶಿವರಾಮು ಹೆಚ್.ಸಿ 1 ನಾಮ ಪತ್ರ, ಬಿಜೆಪಿಯಿಂದ ಎನ್.ಶಿವಣ್ಣ 3 ನಾಮಪತ್ರ ಹಾಗೂ ಕಾಂಗ್ರೆಸ್‍ನಿಂದ ಪಿ.ರವಿಕುಮಾರ್ 2 ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾದ್ಯಂತ 171 ನಾಮಪತ್ರ ಸಲ್ಲಿಕೆ

ಮಂಡ್ಯ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮಂಡ್ಯ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ 115 ಅಭ್ಯರ್ಥಿಗಳಿಂದ 171 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳಿಂದ 35 ನಾಮಪತ್ರ, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 18 ಅಭ್ಯರ್ಥಿಗಳಿಂದ 23 ನಾಮಪತ್ರ, ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 13 ಅಭ್ಯರ್ಥಿಗಳಿಂದ 22 ನಾಮಪತ್ರ, ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳಿಂದ 21 ನಾಮಪತ್ರ, ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 17 ಅಭ್ಯರ್ಥಿ ಗಳಿಂದ 26 ನಾಮಪತ್ರ, ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳಿಂದ 23 ನಾಮಪತ್ರ, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳಿಂದ 21 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Translate »