ಮತದಾನ ಕುರಿತು ಮೈಸೂರಲ್ಲಿ ಮಹಾ ಜಾಗೃತಿ ನಾಲ್ಕು ಪಥಗಳಲ್ಲಿ ಅರಿವಿನ ಜಾಥಾ
ಮೈಸೂರು

ಮತದಾನ ಕುರಿತು ಮೈಸೂರಲ್ಲಿ ಮಹಾ ಜಾಗೃತಿ ನಾಲ್ಕು ಪಥಗಳಲ್ಲಿ ಅರಿವಿನ ಜಾಥಾ

April 25, 2018

ಮೈಸೂರು: ಮತ ಚಲಾಯಿಸುವುದು ನಿಮ್ಮ ಹಕ್ಕು, ಇದು ಆಯ್ಕೆಯಾಗದಿರಲಿ. ಮತ ಎಂದರೆ ಬರೀ ಒತ್ತುವುದಲ್ಲ ದೇಶದ ಪ್ರಗತಿಯನ್ನು ಮೇಲೆತ್ತುವುದು. ಬಳಸಿರಿ ಮತ ಎಂಬ ಅಸ್ತ್ರವ ಉಳಿಸಿರಿ ಪ್ರಜಾಪ್ರಭುತ್ವವ, ರೈತ ದೇಶದ ಬೆನ್ನೆಲುಬು, ಮತದಾರ ಪ್ರಜಾ ಪ್ರಭುತ್ವದ ಬೆನ್ನೆಲುಬು ಪ್ರಾಮಾಣ ಕ ಮತದಾರ ಈ ದೇಶದ ಸೂತ್ರಧಾರ ಎಂಬ ವಿವಿಧ ಘೋಷಣೆಗಳೊಂದಿಗೆ ಮತ ದಾರರಲ್ಲಿ ಜಾಗೃತಿ ಮೂಡಿಸಲಾಯಿತು.

ಇತ್ತೀಚಿನ ಸಮೀಕ್ಷೆ ಪ್ರಕಾರ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲಿ ಮತ ದಾನದ ಪ್ರಮಾಣ ಕ್ಷೀಣವಾಗಿರುವುದನ್ನು ಮನಗಂಡ ಚುನಾವಣಾ ಆಯೋಗವು ಸ್ವೀಪ್ ಸಮಿತಿ ರಚಿಸಿತ್ತು. ಅದರಂತೆ ಸ್ವೀಪ್ ಸಮಿತಿಯು ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಮಂಗಳವಾರ ಕ್ರೀಡಾಪಟುಗಳು, ವಿದ್ಯಾರ್ಥಿ ಗಳು, ಅಂಗನವಾಡಿ ಕಾರ್ಯಕರ್ತೆಯರು, ತರಬೇತಿ ನಿರತ ಪೊಲೀಸರು, ಸಾರ್ವ ಜನಿಕರು ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಮತದಾನ ಕುರಿತು ಮಹಾ ಜಾಗೃತಿ ಜಾಥಾ ನಡೆಸುವ ಮೂಲಕ ಜನರಲ್ಲಿ ಅರಿವು ಮೂಡಿಸಿದರು.

ಮತದಾನ ಜಾಗೃತಿ ಜಾಥಾವನ್ನು 4 ಪಥಗಳಲ್ಲಿ ವಿಂಗಡಿಸಲಾಗಿತ್ತು. ಜಿಲ್ಲಾಧಿಕಾರಿ ಗಳ ಕಚೇರಿಯಿಂದ ಪ್ರಾರಂಭವಾದ ಮೊದಲ ಪಥದಲ್ಲಿ ಮಹಾರಾಣ ಕಲಾ, ವಾಣ ಜ್ಯ, ವಿಜ್ಞಾನ ಕಾಲೇಜು, ಯುವರಾಜ ಕಾಲೇಜು, ಮಹಾರಾಜ ಕಾಲೇಜು, ಬಿ.ಪಿಎಡ್, ಎಂ. ಪಿಎಡ್. ಪ್ರಶಿಕ್ಷಣಾರ್ಥಿಗಳು, ಸ್ಕೌಟ್ಸ್ ಅಂಡ್ ಗೈಡ್ಸ್, ಎನ್‍ಎಸ್‍ಎಸ್ ವಿದ್ಯಾರ್ಥಿ ಗಳು ಭಾಗವಹಿಸಿ, ದೇವರಾಜ ಅರಸು ರಸ್ತೆ ಮೂಲಕ ಕೆ.ಆರ್.ವೃತ್ತ ತಲುಪಿದರು. ಜಾಥದಲ್ಲಿ ರಸ್ತೆಯ ಉದ್ದಕ್ಕೂ ಕಡ್ಡಾಯ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು. ಇದರ ನೇತೃತ್ವವನ್ನು ಮೈವಿವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಮದಿಯಳಗನ್ ವಹಿಸಿದ್ದರು. ಜಾಥಕ್ಕೂ ಮುನ್ನ ಕೆ.ಆರ್.ಸಂಚಾರ ಠಾಣೆ ಪೊಲೀಸರು ಸಂಚಾರ ನಿಯಮ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಕೆ.ಆರ್.ಆಸ್ಪತ್ರೆ ವೃತ್ತದಿಂದ ಪ್ರಾರಂಭ ವಾದ 2ನೇ ಪಥದಲ್ಲಿ ಮೈಸೂರು ವೈದ್ಯ ಕೀಯ ಮಹಾವಿದ್ಯಾಲಯದ ಅಧೀನಕ್ಕೆ ಒಳಪಡುವ ವೈದ್ಯಕೀಯ ಶಿಕ್ಷಣಾರ್ಥಿ ಗಳು, ನರ್ಸಿಂಗ್ ಪ್ರತಿಶಿಕ್ಷಣಾರ್ಥಿಗಳು, ಆಯುರ್ವೆದಿಕ್ ಮಹಾವಿದ್ಯಾನಿಲಯದ ಶಿಕ್ಷಣಾರ್ಥಿಗಳು ಭಾಗವಹಿಸಿ ನ್ಯೂ ಸಯ್ಯಾಜಿರಾವ್ ರಸ್ತೆಯ ಮೂಲಕ ಜಾಥಾ ಹೊರಟು ಕೆ.ಆರ್.ವೃತ್ತ ತಲುಪಿ ದರು. ಇದರ ನೇತೃತ್ವವನ್ನು ವೈದ್ಯಕೀಯ ಕಾಲೇಜಿನ ಶರೀರಶಾಸ್ತ್ರ ವಿಭಾಗದ ಡಾ.ಕೆ.ಟಿ.ಚಂದ್ರಶೇಖರ್, ದೈಹಿಕ ಶಿಕ್ಷಣ ಬೋಧಕ ಮಂಜುನಾಥ್ ವಹಿಸಿದ್ದರು.

ಮೈಸೂರು ಚಾಮುಂಡಿ ವಿಹಾರ ಕ್ರೀಡಾಂಗಣದಿಂದ ಪ್ರಾರಂಭವಾದ 3ನೇ ಪಥದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡಾಶಾಲೆ/ನಿಲಯದ ಕ್ರೀಡಾಪಟುಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶಾ ಕಾರ್ಯಕರ್ತೆಯರು, ಗೋಪಾಲ್ ಗೌಡ ನರ್ಸಿಂಗ್ ಹೋಂನ ನರ್ಸಿಂಗ್ ವಿದ್ಯಾರ್ಥಿಗಳು, ಡಯಟ್‍ನ ಬಿ.ಇಡ್ ಪ್ರತಿಶಿಕ್ಷಣಾರ್ಥಿಗಳು, ಕರ್ನಾಟಕ ಪೊಲೀಸ್ ಆಕಾಡೆಮಿ ಮತ್ತು ನಗರ ಸಶಸ್ತ್ರ ಪಡೆಯಲ್ಲಿ ತರಬೇತಿ ನಿರತ ಪ್ರತಿಶಿಕ್ಷಣಾರ್ಥಿ ಗಳು ಜಾಥಾದಲ್ಲಿ ಪಾಲ್ಗೊಂಡು ನಜರ್ ಬಾದ್ ರಸ್ತೆ, ಹಾರ್ಡಿಂಗ್ ವೃತ್ತದ ಮೂಲಕ ಸಾಗಿ ಕೆ.ಆರ್.ವೃತ್ತ ತಲುಪಿದರು. ಮಾರ್ಗ ದುದ್ದಕ್ಕೂ ಮತದಾನ ಕುರಿತು ವಿವಿಧ ಘೋಷಣೆಗಳುಳ್ಳ ನಾಮಫಲಕಗಳನ್ನು ಹಿಡಿದು ಜನರಲ್ಲಿ ಜಾಗೃತಿ ಮೂಡಿಸಿದರು. ಇದರ ನೇತೃತ್ವವನ್ನು ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಡಾ.ಪ್ರಕಾಶ್ ಮತ್ತು ಶಿವರಾಂ, ಜಿಮ್ ಇನ್ಸ್‍ಸ್ಟ್ರಕ್ಟರ್ ಎಂ.ವಿಶ್ವ ವಹಿಸಿದ್ದರು.

ಬಸವೇಶ್ವರ ವೃತ್ತದಿಂದ ಪ್ರಾರಂಭವಾದ 4ನೇ ಪಥದಲ್ಲಿ ಜೆಎಸ್‍ಎಸ್ ನರ್ಸಿಂಗ್ ಕಾಲೇಜು, ಪದವಿಪೂರ್ವ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ, ನಗರಪಾಲಿಕೆ ಮೂಲಕ ಸಾಗಿ ಕೆ.ಆರ್. ವೃತ್ತ ತಲುಪಿದರು. ಈ ನಾಲ್ಕು ಪಥಗಳಲ್ಲೂ ಬೀದಿ ನಾಟಕಗಳ ಮೂಲಕ ಮತದಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ವರುಣನ ಸಿಂಚನದ ನಡುವೆಯೂ ಪಂಜಿನ ಮೆರವಣಿಗೆ: ವಿವಿಧ ಕಡೆಗಳಿಂದ 4 ಪಥಗಳಲ್ಲಿ ಜಾಥದ ಮೂಲಕ ಕೆ.ಆರ್. ವೃತ್ತಕ್ಕೆ ಆಗಮಿಸಿದ ಸಾವಿರಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು, ಕೆ.ಆರ್.ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಅಷ್ಟೊತ್ತಿ ಗಾಗಲೇ ಮಳೆರಾಯನ ಸಿಂಚನವಾಯಿತು. ಇದರ ನಡುವೆಯೂ ಸಿಎಆರ್-ಡಿಎಆರ್ ಪೊಲೀಸರು ಪಂಜಿನಮೆರವಣ ಗೆ ನಡೆಸಿ, ಮತದಾನ ಕುರಿತು ಜಾಗೃತಿ ಮೂಡಿಸಿದರು.

ಈ ವೇಳೆ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಿ.ಶಿವಶಂಕರ್ ಮಾತನಾಡಿ, ನಗರ ಪ್ರದೇಶದಲ್ಲಿ ಮತ ದಾನದ ಪ್ರಮಾಣ ಕಡಿಮೆ ಆಗುತ್ತಿದ್ದು, ಅದನ್ನು ಈ ಚುನಾವಣೆಯಲ್ಲಿ ಹೆಚ್ಚು ಮಾಡಬೇಕೆಂದು ನಗರದಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆ ನಿಟ್ಟಿನಲ್ಲಿಯೇ ಯುವಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ಜಾಥ, ಪಂಜಿನ ಮೆರವಣ ಗೆ, ಮಾನವ ಸರಪಳಿಯಂತಹ ಕಾರ್ಯವನ್ನು ಇಂದು ಆಯೋಜಿಸಲಾಗಿದೆ ಎಂದರು.

ನಗರ ಭಾಗದಲ್ಲಿ ಪ್ರತಿ ಬಾರಿ ಶೇ.56 ರಷ್ಟು ಮಾತ್ರ ಮತದಾನ ಮಾಡುತ್ತಿದ್ದು, ಈ ಬಾರಿ ಕನಿಷ್ಠ 70%ರಷ್ಟು ಮತದಾನ ಆಗಲಿದೆ. ಜತೆಗೆ ಪ್ರತಿ ತಾಲೂಕು, ಗ್ರಾಮಗಳಲ್ಲಿ ಮತದಾನ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಪಂ ಉಪ ಕಾರ್ಯದರ್ಶಿ ಶಿವ ಕುಮಾರಸ್ವಾಮಿ, ನಗರಪಾಲಿಕೆ ಆಯುಕ್ತ ಜಗದೀಶ್, ಸ್ವೀಪ್ ಕಾರ್ಯದರ್ಶಿ ಕೃಷ್ಣ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು, ಯುವಜನ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್, ಹಿಂದು ಳಿದ ವರ್ಗಗಳ ಕಲ್ಯಾಣ ಇಲಾಖೆಯ ರೇಣುಕಮ್ಮ ಮತ್ತಿತರರು ಉಪಸ್ಥಿತರಿದ್ದರು.

Translate »