ಗವಿರಂಗಪ್ಪನ ಮೇಲಾಣೆ ಗ್ರಾಮದ ಅಭಿವೃದ್ಧಿ ಖಚಿತ: ಸಿಎಸ್‍ಪಿ
ಮಂಡ್ಯ

ಗವಿರಂಗಪ್ಪನ ಮೇಲಾಣೆ ಗ್ರಾಮದ ಅಭಿವೃದ್ಧಿ ಖಚಿತ: ಸಿಎಸ್‍ಪಿ

April 25, 2018

ಪಾಂಡವಪುರ: ಗವಿರಂಗಪ್ಪನ ಮೇಲಾಣೆ ನಾನು ಗ್ರಾಮದ ಅಭಿವೃದ್ಧಿ ಮಾಡುತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದರು.

ತಾಲೂಕಿನ ವಡ್ಡರಹಳ್ಳಿಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ತೊಣ್ಣೂರು ಕೆರೆಯಿಂದ ವಡ್ಡರ ಹಳ್ಳಿ ಗ್ರಾಮಕ್ಕೆ ನೀರು ಹರಿಸುವ ಯೋಜನೆ ಮತ್ತು ವಡ್ಡರಹಳ್ಳಿ ಮೇಲ್ಭಾಗದಲ್ಲಿ ಕೆರೆ ಕಟ್ಟಿಸುವ ಯೋಜನೆ ರೂಪಿಸಿದ್ದೆ. ಆದರೆ ನನ್ನ ನಂತರ ಬಂದ ಶಾಸಕರು ಇದಕ್ಕೆ ಅಡ್ಡಗಾಲು ಹಾಕಿದರು. ಇದು ನಿಮಗೆ ಗೊತ್ತಿರುವ ವಿಚಾರವಾಗಿದ್ದು, ಎಂದಿಗೂ ನಾನು ನೀತಿಗೆಟ್ಟ ರಾಜಕಾರಣ ಮಾಡಿಲ್ಲ ಧೈರ್ಯವಾಗಿ ನನ್ನನ್ನು ಗೆಲ್ಲಿಸಿ, ವಡ್ಡರಹಳ್ಳಿ ಗ್ರಾಮವನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದರು.

ಮಹಿಳೆಯರ ಸಾಲ ಮನ್ನಾ: ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರಾಜ್ಯದ ಎಲ್ಲಾ ರೈತರ ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಕುಮಾರಣ್ಣ ಭರವಸೆ ನೀಡಿದ್ದಾರೆ. ಜೆಡಿಎಸ್ ಅಧಿಕಾರ ದಲ್ಲಿ ಮಹಿಳೆಯರು ಸಾಲ ಮುಕ್ತರಾಗಿ ನೆಮ್ಮದಿಯಿಂದ ಬದುಕಬಹುದು ಎಂದರು. ಇದೇ ವೇಳೆ ನೂರಾರು ಯುವಕರು ಪುಟ್ಟ ರಾಜು ಸಮ್ಮುಖದಲ್ಲಿ ರೈತಸಂಘ ತೊರೆದು ಜೆಡಿಎಸ್ ಸೇರ್ಪಡೆಯಾದರು.

ತಾಪಂ ಮಾಜಿ ಅಧ್ಯಕ್ಷೆ ರಾಧಮ್ಮ, ತಾಪಂ ಸದಸ್ಯ ನಿಂಗೇಗೌಡ, ಜಿಪಂ ಸದಸ್ಯ ತಿಮ್ಮೇಗೌಡ, ವೀರಶೈವ ಮುಂಖಡ ದೇವಪ್ಪ, ಕೆ.ಬೆಟ್ಟಹಳ್ಳಿ ಗ್ರಾಪಂ ಸದಸ್ಯೆ ವನಜಾಕ್ಷಿ, ಜೆಡಿಎಸ್ ಮುಖಂಡರಾದ ರಾಮಕೃಷ್ಣ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಗುರುಸ್ವಾಮಿ, ಜೆಡಿಎಸ್ ಕಾರ್ಯಾಧ್ಯಕ್ಷ ಮಲ್ಲೇಶ್, ಪುರಸಭೆ ಮಾಜಿ ಅಧ್ಯಕ್ಷ ಎ.ಆರ್.ನಾಸೀರ್, ಜೆಡಿಎಸ್ ಯುವ ಮುಖಂಡ ಇಮ್ರಾನ್, ಎಸ್.ಎನ್.ಬಿ.ಶಿವಣ್ಣ, ಗ್ರಾಮದ ಯಜಮಾನ ರಾದ ಕಾಳೇಗೌಡ, ಸತ್ಯ, ಬೋರೆಗೌಡ, ಚಿಕ್ಕೆಗೌಡ, ಗವಿಗೌಡ, ನಿಂಗೇಗೌಡ, ನಲೇಗೌಡ ಇನ್ನಿತರರಿದ್ದರು.

 

Translate »