ಲಾರಿ-ಬೈಕ್ ನಡುವೆ ಡಿಕ್ಕಿ; ಯುವಕರ ಸಾವು
ಚಾಮರಾಜನಗರ

ಲಾರಿ-ಬೈಕ್ ನಡುವೆ ಡಿಕ್ಕಿ; ಯುವಕರ ಸಾವು

April 26, 2018

ಚಾಮರಾಜನಗರ: ಜಲ್ಲಿಕಲ್ಲು ತುಂಬಿದ್ದ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್‍ನಲ್ಲಿದ್ದ ಇಬ್ಬರು ಯುವಕರು ಸಾವ ನಪ್ಪಿರುವ ಘಟನೆ ತಾಲೂಕಿನ ವೆಂಕ ಟಯ್ಯಛತ್ರ ಗ್ರಾಮದ ಗ್ರಾಪಂ ಮುಂಭಾಗ ಬುಧವಾರ ನಡೆದಿದೆ.
ವೆಂಕಟಯ್ಯನಛತ್ರ ಗ್ರಾಮದ ವೆಂಕಟ ರಾಜು ಅವರ ಮಗ ಶಿವಮೂರ್ತಿ(19) ಅದೇ ಗ್ರಾಮದ ಚಿಕ್ಕೂಸಶೆಟ್ಟಿ ಎಂಬುವರು ಮಾಗ ಶಿವು (20) ಸಾವನ್ನಪ್ಪಿದ ಯುವಕರು.

ಘಟನೆಯ ವಿವರ: ವೆಂಕಟಯ್ಯನಛತ್ರ ಗ್ರಾಮದ ಶಿವಮೂರ್ತಿ ಮತ್ತು ಶಿವು ಒಂದೇ ಬೈಕ್‍ನಲ್ಲಿ ವೆಂಕಟಯ್ಯನಛತ್ರ ಗ್ರಾಮದ ಗೇಟ್‍ನಿಂದ ವೆಂಕಟಯ್ಯನಛತ್ರಕ್ಕೆ ತೆರಳುತ್ತಿದ್ದರು. ಈ ವೇಳೆ ಬಿಸಲವಾಡಿ ಯಿಂದ ಚಾಮರಾಜನಗರಕ್ಕೆ ಬರುತ್ತಿದ್ದ ಜಲ್ಲಿಕಲ್ಲು ತುಂಬಿದ್ದ ಲಾರಿ ಬೈಕ್‍ಗೆ ಗ್ರಾಮದ ಗ್ರಾಪಂ ಕಾರ್ಯಾಲಯದ ಮುಂಭಾಗ ಮುಖಾಮುಖಿ ಡಿಕ್ಕಿ ಹೊಡೆದಿದೆ. ಇದರಿಂದ ಶಿವಮೂರ್ತಿ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ಆತ ಸ್ಥಳದಲ್ಲಿಯೇ ಮೃತಪಟ್ಟನು. ಮತ್ತೋರ್ವ ಶಿವು ಗಂಭೀರವಾಗಿ ಗಾಯ ಗೊಂಡಿದ್ದು, ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖ ಲಿಸಿ ದರೂ ಸಹ ಚಿಕಿತ್ಸೆ ಫಲ ಕಾರಿ ಆಗದೆ ಮೃತ ಪಟ್ಟನು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆಯುತ್ತಿ ದ್ದಂತೆಯೇ ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿ ಆಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ನೂರಾರು ಜನರು ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಿಸಲವಾಡಿ ಕಡೆಯಿಂದ ಚಾಮರಾಜ ನಗರಕ್ಕೆ ಪ್ರತಿನಿತ್ಯ ಲಾರಿಗಳು ವೇಗವಾಗಿ ಸಂಚರಿಸುತ್ತಿವೆ. ಅಧಿಕ ಭಾರ ಹೊತ್ತು ಲಾರಿಗಳು ಸಂಚ ರಿಸುತ್ತಿರುವುದರಿಂದ ಪದೇ ಪದೇ ಅಪಘಾತಗಳು ಸಂಭವಿಸು ತ್ತಿವೆ ಎಂದ ದೂರಿದರು. ನಂತರ ರಾಷ್ಟ್ರೀಯ ಹೆದ್ದಾರಿ 209ಗೆ ಆಗಮಿಸಿದ ನೂರಾರು ಜನರು, ರಸ್ತೆ ಮಧ್ಯದಲ್ಲಿ ಟೈರ್‍ಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸುತ್ತಾ ಘೋಷಣೆ ಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಇದರಿಂದ ಸ್ವಲ್ಪ ಹೊತ್ತು ಚಾಮರಾಜನಗರ- ತಮಿಳುನಾಡು ಹೆದ್ದಾರಿಯಲ್ಲಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಜಯ ಕುಮಾರ್, ಪ್ರತಿಭಟನಾಕಾರರ ಮನ ವೊಲಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಶವ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು.

Translate »