ಆದಿವಾಸಿಗಳಿಂದ ಚುನಾವಣೆ ಬಹಿಷ್ಕಾರ ನಿರ್ಧಾರ
ಮೈಸೂರು

ಆದಿವಾಸಿಗಳಿಂದ ಚುನಾವಣೆ ಬಹಿಷ್ಕಾರ ನಿರ್ಧಾರ

April 26, 2018

ಹುಣಸೂರು: ತಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜಕೀಯ ಪಕ್ಷಗಳು ವಿಫಲವಾಗಿವೆ ಎಂದು ಆರೋಪಿಸಿ ತಾಲೂಕಿನ ಕೆಲವು ಹಾಡಿ ಆದಿವಾಸಿಗಳು ಪ್ರತಿಭಟನೆ ನಡೆಸಿ ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಬಹಿಷ್ಕರಿ ಸಲು ನಿರ್ಧರಿಸಿದ್ದಾರೆ.

ದೊಡ್ಡ ಹೆಜ್ಜೂರು, ನೇರಳೆಕುಪ್ಪೆ ಹಾಗೂ ಹೆಬ್ಬಾಳ ಹಾಡಿ ಆದಿವಾಸಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ತಮ್ಮ ಹಾಡಿಗಳಲ್ಲಿ ಚುನಾವಣಾ ಬಹಿಷ್ಕಾರದ ನಾಮಫಲಕ ಅಳವಡಿಸಿ ಪ್ರತಿಭಟನೆ ನಡೆಸಿದ್ದಾರೆ. ನಾಗರಹೊಳೆ ಅರಣ್ಯದಿಂದ ಸ್ಥಳಾಂತರಗೊಂಡ ಗಿರಿ ಜನರಿಗೆ ಭೂಮಿ ನೀಡಿಯೂ ಹಕ್ಕುಪತ್ರ ನೀಡಿಲ್ಲ. ಹೀಗಾಗಿ ಬ್ಯಾಂಕ್‍ಗಳಲ್ಲಿ ಸಾಲ ಸೌಲಭ್ಯಗಳು ಸಿಗುತ್ತಿಲ್ಲ. ಖಾಸಗಿಯಾಗಿ ಸಾಲ ಮಾಡಿ ಫಸಲು ತೆಗೆದು ಕಡಿಮೆ ಬೆಲೆಗೆ ಮಾರಾಟ ಮಾಡು ವಂತಾಗಿದೆ. ಸಮಸ್ಯೆಗಳನ್ನು ಬಗೆಹರಿಸಲು ಯಾರೂ ಮುಂದಾಗಿಲ್ಲ ಎಂದು ಆದಿವಾಸಿ ಗಳು ದೂರಿದ್ದಾರೆ. ಕಾಡಿನಿಂದ 150 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

Translate »