Tag: Dr. H.C. Mahadevappa

ನಾವೆಲ್ಲಾ ಒಗ್ಗಟ್ಟಾಗಿದ್ದೇವೆ: ಡಾ.ಹೆಚ್.ಸಿ.ಮಹದೇವಪ್ಪ
ಮೈಸೂರು

ನಾವೆಲ್ಲಾ ಒಗ್ಗಟ್ಟಾಗಿದ್ದೇವೆ: ಡಾ.ಹೆಚ್.ಸಿ.ಮಹದೇವಪ್ಪ

March 25, 2019

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರು ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರು ನಾಮಪತ್ರ ಸಲ್ಲಿಸಿದ ನಂತರ ಜಿಲ್ಲಾಧಿಕಾರಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಜೆಡಿಎಸ್‍ನ ಸಚಿವ ಸಾ.ರಾ.ಮಹೇಶ್, ಮುಖಂಡ ಪ್ರೊ.ಕೆ.ಎಸ್.ರಂಗಪ್ಪ ಸೇರಿದಂತೆ ಹಲವು ನಾಯಕರು ಹಾಜರಿದ್ದುದು ನಾವು ಒಂದಾಗಿರುವುದಕ್ಕೆ ನಿದರ್ಶನವಾಗಿದೆ ಎಂದರು. ರಾಜ್ಯದಲ್ಲಿ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ….

ನಂಜನಗೂಡಿಗೆ ಡಾ.ಹೆಚ್.ಸಿ.ಮಹದೇವಪ್ಪ ಭೇಟಿ  ಬಸವ ಭವನದ ಕಾಮಗಾರಿ ವೀಕ್ಷಣೆ
ಮೈಸೂರು

ನಂಜನಗೂಡಿಗೆ ಡಾ.ಹೆಚ್.ಸಿ.ಮಹದೇವಪ್ಪ ಭೇಟಿ  ಬಸವ ಭವನದ ಕಾಮಗಾರಿ ವೀಕ್ಷಣೆ

October 30, 2018

ನಂಜನಗೂಡು:  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿ.ನರಸೀ ಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತ ನಂತರ ಹಲವು ತಿಂಗಳ ಕಾಲ ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರು ಭಾನುವಾರ ಮೈಸೂರಿ ನಲ್ಲಿ ಅಭಿಮಾನಿಗಳು ನಂಜನಗೂಡಿಗೆ ಆಗಮಿಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಭೇಟಿ ನೀಡಿ ನಂಜನಗೂಡು ಕಾಂಗ್ರೆಸ್ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ನಗರಕ್ಕೆ ಆಗಮಿಸುತ್ತಿದ್ದಂತೆಯೇ ಹುಲ್ಲಹಳ್ಳಿ ರಸ್ತೆಯಲ್ಲಿ ನೂರಾರು ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ನಂತರ ಅವರು ಮುಡಾ ಬಡಾವಣೆಯಲ್ಲಿ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ…

ಡಾ. ಹೆಚ್.ಸಿ. ಮಹದೇವಪ್ಪರನ್ನು ಎಂಎಲ್‍ಸಿ ಮಾಡಿ, ಸಚಿವ ಸ್ಥಾನ ನೀಡುವಂತೆ ಆಗ್ರಹ
ಮೈಸೂರು

ಡಾ. ಹೆಚ್.ಸಿ. ಮಹದೇವಪ್ಪರನ್ನು ಎಂಎಲ್‍ಸಿ ಮಾಡಿ, ಸಚಿವ ಸ್ಥಾನ ನೀಡುವಂತೆ ಆಗ್ರಹ

May 25, 2018

ತಿ.ನರಸೀಪುರ: ಜಿಲ್ಲೆಯಲ್ಲಿನ ಪಕ್ಷದ ಸಂಘಟನೆಯ ಹಿತದೃಷ್ಠಿಯಿಂದ ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಲ್ಲೇಶ ಚುಂಚನಹಳ್ಳಿ ಕಾಂಗ್ರೆಸ್ ಹೈಕಮಾಂಡನ್ನು ಆಗ್ರಹಿಸಿದರು. ಪಟ್ಟಣದಲ್ಲಿ ಗುರುವಾರ ಕರೆಯ ಲಾಗಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯ ಹಿತದೃಷ್ಠಿಯಿಂದ ನೂತನ ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ ಅವರಿಂದ ತೆರವಾಗುವ ವಿಧಾನ…

ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ದ್ವಿಗುಣ ಅಭ್ಯರ್ಥಿ ಡಾ. ಹೆಚ್.ಸಿ. ಮಹದೇವಪ್ಪ
ಮೈಸೂರು

ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ದ್ವಿಗುಣ ಅಭ್ಯರ್ಥಿ ಡಾ. ಹೆಚ್.ಸಿ. ಮಹದೇವಪ್ಪ

May 1, 2018

ತಿ.ನರಸೀಪುರ: ರಾಜಕೀಯವಾಗಿ ಕೈ ಹಿಡಿದು ಅಧಿಕಾರ ಕೊಟ್ಟವರು ಕೆಲವು ವರ್ಷಗಳ ಕಾಲ ದೂರವಾಗಿ ಮುಖಂಡರು ಹಾಗೂ ಕಾರ್ಯಕರ್ತರು ಮರಳಿ ಪಕ್ಷಕ್ಕೆ ಬರುತ್ತಿದ್ದು, ಸಾರ್ವತ್ರಿಕ ವಿಧಾನಸಭಾ ಚುನಾವಣೆ ಯಲ್ಲಿ ಗೆಲ್ಲುವ ವಿಶ್ವಾಸ ದ್ವಿಗುಣಗೊಂಡಿದೆ ಎಂದು ಲೋಕೋಪಯೋಗಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ. ಮಹದೇವಪ್ಪ ಹೇಳಿದರು. ಪಟ್ಟಣದ ಕಡ್ಲೆರಂಗಮ್ಮ ಬೀದಿಯಲ್ಲಿ ಪ.ಪಂ ಮಾಜಿ ಅಧ್ಯಕ್ಷ ಎನ್.ಎಸ್.ಬಸವರಾಜು ಸೇರಿದಂತೆ ಜೆಡಿಎಸ್ ಪಕ್ಷದಲ್ಲಿ ಗುರುತಿಸಿ ಕೊಂಡಿದ್ದ ಯುವ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಚುನಾವಣಾ ಪ್ರಚಾರದಲ್ಲಿ ಕ್ಷೇತ್ರದಾದ್ಯಂತ ವ್ಯಕ್ತವಾಗುತ್ತಿರುವ…

ದೂರವಿದ್ದವರ ಪಕ್ಷ ಸೇರ್ಪಡೆ ಶಕ್ತಿ ತುಂಬಿದೆ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹದೇವಪ್ಪ ಅಭಿಮತ
ಮೈಸೂರು

ದೂರವಿದ್ದವರ ಪಕ್ಷ ಸೇರ್ಪಡೆ ಶಕ್ತಿ ತುಂಬಿದೆ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹದೇವಪ್ಪ ಅಭಿಮತ

April 27, 2018

ತಿ.ನರಸೀಪುರ: ಮುನಿಸಿಕೊಂಡು ದೂರವಿದ್ದವರೆಲ್ಲರೂ ಪಕ್ಷಕ್ಕೆ ಮರಳಿ, ನನಗೆ ರಾಜಕೀಯ ಸ್ಥೈರ್ಯ ವನ್ನು ತುಂಬುತ್ತಿರುವುದನ್ನು ನೋಡಿದರೆ 1985 ರಲ್ಲಿನ ಮೊದಲ ಚುನಾವಣೆಯಲ್ಲಿ ನನ್ನ ಕೈ ಹಿಡಿದು ಗೆಲ್ಲಿಸಿದ ಪರಿ ನೆನಪಾ ಗುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು. ತಾಲೂಕಿನ ಎಂ.ಸೀಹಳ್ಳಿ ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿ ಬಿಜೆಪಿ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಕೆಲವು ವರ್ಷಗಳಿಂದ ನಾನಾ ಕಾರಣ ಗಳಿಗೆ ದೂರವಾಗಿದ್ದ ಮುಖಂಡರೆಲ್ಲರೂ ಕಾಂಗ್ರೆಸ್‍ಗೆ ಮರಳುವ ಮೂಲಕ ಶಕ್ತಿ ಯನ್ನು ಇಮ್ಮಡಿಗೊಳಿಸುವ ಕೆಲಸವನ್ನು…

ಉದ್ಯೋಗಾವಕಾಶಗಳನ್ನು ಸೃಷ್ಟಿಸದ ಸಚಿವರು ಡಾ. ಹೆಚ್.ಸಿ. ಮಹದೇವಪ್ಪ ವಿರುದ್ಧ ಎಸ್. ಶಂಕರ್ ಆರೋಪ
ಮೈಸೂರು

ಉದ್ಯೋಗಾವಕಾಶಗಳನ್ನು ಸೃಷ್ಟಿಸದ ಸಚಿವರು ಡಾ. ಹೆಚ್.ಸಿ. ಮಹದೇವಪ್ಪ ವಿರುದ್ಧ ಎಸ್. ಶಂಕರ್ ಆರೋಪ

April 27, 2018

ತಿ.ನರಸೀಪುರ: ಬೆಳೆಗೆ ನೀರನ್ನೂ ಬಿಡದೆ, ಮರಳು ಗಣ ಗಾರಿಕೆಗೆ ನಿರ್ಬಂಧ ಹೇರಿ ಕೂಲಿ ಕಿತ್ತು ಕೊಂಡ ಸಚಿವ ಡಾ.ಹೆಚ್..ಸಿ.ಮಹದೇವಪ್ಪ, ಮೂರು ದಶಕಗಳ ಕಾಲ ರಾಜಕೀಯ ಅಧಿಕಾರ ಪಡೆದಿದ್ದರೂ ಯುವ ಸಮು ದಾಯಕ್ಕೆ ಉದ್ಯೋಗವಕಾಶಗಳನ್ನು ಸೃಷ್ಟಿಸಲಿಲ್ಲ. ಈ ಚುನಾವಣೆಯಲ್ಲಿ ಅವರು ಠೇವಣ ಯನ್ನು ಕಳೆದುಕೊಂಡು ಸೋಲು ವುದು ಖಚಿತ ಎಂದು ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಹೇಳಿದರು. ತಾಲೂಕಿನ ವಾಟಾಳು ಗ್ರಾಮದಲ್ಲಿರುವ ಸೂರ್ಯಸಿಂಹಾಸನ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ,…

ದಲಿತ ಮತಗಳ ವಿಭಜನೆಗೆ ಅವಕಾಶ ಬೇಡ: ಹೆಚ್‍ಸಿಎಂ
ಮೈಸೂರು

ದಲಿತ ಮತಗಳ ವಿಭಜನೆಗೆ ಅವಕಾಶ ಬೇಡ: ಹೆಚ್‍ಸಿಎಂ

April 26, 2018

ತಿ.ನರಸೀಪುರ: ಪ್ರಸಕ್ತ ವಿಧಾನಸಭಾ ಚುನಾವಣೆ ಕೋಮುವಾದ ಮತ್ತು ಜಾತ್ಯಾತೀತವಾದದ ನಡುವೆ ನಡೆ ಯುತ್ತಿದೆ. ದಲಿತರು ಮತಗಳ ವಿಭಜನೆಗೆ ಅವಕಾಶವನ್ನು ನೀಡಬಾರದು ಎಂದು ಲೋಕೋಪಯೋಗಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹ ದೇವಪ್ಪ ಕಿವಿಮಾತು ಹೇಳಿದರು. ತಾಲೂಕಿನ ಮಾಡ್ರಳ್ಳಿ ಗ್ರಾಮದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಪಾದಯಾತ್ರೆ ನಡೆಸಿ, ಮತಯಾಚಿಸಿದ ನಂತರ ದಲಿತ ಸಮುದಾಯದವರೊಂದಿಗೆ ಮಾತನಾಡಿ, ಬಿಜೆಪಿಯನ್ನು ಅಧಿಕಾರದಿಂದ ದೂರ ವಿಡಲು ದಲಿತರ ಮತ ವಿಭಜನೆಯಾಗ ಬಾರದು. ಆದ್ದರಿಂದ ಈ ಬಾರಿ ಜೆಡಿ ಎಸ್-ಬಿಎಸ್ಪಿ ಮೈತ್ರಿಕೂಟವನ್ನು ಬೆಂಬ…

ತಮ್ಮ ಅಧಿಕಾರಾವಧಿಯಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕರೋಹಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಹೆಚ್.ಸಿ. ಮಹದೇವಪ್ಪ
ಮೈಸೂರು

ತಮ್ಮ ಅಧಿಕಾರಾವಧಿಯಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕರೋಹಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಹೆಚ್.ಸಿ. ಮಹದೇವಪ್ಪ

April 26, 2018

ತಿ.ನರಸೀಪುರ: ಜನರು ಕೊಟ್ಟ ಅಧಿಕಾರದಿಂದ ತಮ್ಮ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಪಟ್ಟಣ ಮತ್ತು ನಗರ ಪ್ರದೇಶಗಳ ಸ್ವರೂಪವನ್ನು ನೀಡಿ ದ್ದೇನೆ. ಗ್ರಾಮೀಣ ಜನರ ಸಮಸ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಗೆಹರಿಸಲು ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿಯೂ ಕಾಂಗ್ರೆಸ್ ಪಕ್ಷವನ್ನು ಬೆಂಬ ಲಿಸಬೇಕು ಎಂದು ಸಚಿವ, ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹ ದೇವಪ್ಪ ಮನವಿ ಮಾಡಿದರು. ತಾಲೂಕಿನ ಕರೋಹಟ್ಟಿ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿ ಮಾತನಾಡಿ, ಸಾಮಾನ್ಯ ವರ್ಗಗಳ ಜನರು ವಾಸಿಸುವ ಬಡಾವಣೆಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಮಂಜೂರು…

ಬಿಜೆಪಿ, ಜೆಡಿಎಸ್‍ನಿಂದ ಸಿದ್ದರಾಮಯ್ಯನವರ ಮೇಲೆ ರಾಜಕೀಯ ದಾಳಿ ವಾಟಾಳು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಹೆಚ್.ಸಿ. ಮಹದೇವಪ್ಪ
ಮೈಸೂರು

ಬಿಜೆಪಿ, ಜೆಡಿಎಸ್‍ನಿಂದ ಸಿದ್ದರಾಮಯ್ಯನವರ ಮೇಲೆ ರಾಜಕೀಯ ದಾಳಿ ವಾಟಾಳು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಹೆಚ್.ಸಿ. ಮಹದೇವಪ್ಪ

April 25, 2018

ತಿ.ನರಸೀಪುರ: ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಬಡವರ ಪರವಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿ, ರಾಜಕೀಯ ದಾಳಿ ನಡೆಸುತ್ತಿ ದ್ದಾರೆ ಎಂದು ಲೋಕೋಪಯೋಗಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹ ದೇವಪ್ಪ ಹೇಳಿದರು. ತಾಲೂಕಿನ ವಾಟಾಳು ಗ್ರಾಮದಲ್ಲಿ ಮಂಗಳವಾರ ಪಾದಯಾತ್ರೆ ಮೂಲಕ ಮತಯಾಚಿಸಿ ಮಾತನಾಡಿ, ರೈತಪರ ಧ್ವನಿಯಾಗಿ, ಎಲ್ಲಾ ಬಡವರ ಪರವಾಗಿ ರುವ ಸಿದ್ದರಾಮಯ್ಯ ಅವರನ್ನು ಅಧಿಕಾರ ದಿಂದ ಕೆಳಗಿಳಿಸಿದರೆ ಬಡವರ ಮೇಲೆ ಸವಾರಿ ಮಾಡಬಹುದೆಂಬ ದುರುದ್ದೇಶ ಬಿಜೆಪಿ ಹಾಗೂ ಜೆಡಿಎಸ್‍ನದ್ದಾಗಿದೆ ಎಂದರು. ರಾಜ್ಯದಲ್ಲಿ ಬಿಜೆಪಿಯಾಗಲೀ, ಜೆಡಿಎಸ್ ಆಗಲಿ…

ತಿ.ನರಸೀಪುರ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹದೇವಪ್ಪ ನಾಮಪತ್ರ ಸಲ್ಲಿಕೆ
ಮೈಸೂರು

ತಿ.ನರಸೀಪುರ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹದೇವಪ್ಪ ನಾಮಪತ್ರ ಸಲ್ಲಿಕೆ

April 24, 2018

ತಿ.ನರಸೀಪುರ, ಏ.23(ಎಸ್‍ಕೆ)- ವಿಧಾನ ಸಭಾ ಚುನಾವಣೆ ರಂಗೇರುತ್ತಿದ್ದು, ಲೋಕೋ ಪಯೋಗಿ ಸಚಿವ ಡಾ.ಹೆಚ್.ಸಿ. ಮಹ ದೇವಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು. ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯಕ್ಕೆ ಆಗಮಿಸಿದ ಮಹದೇವಪ್ಪ ವಿಶೇಷ ಪೂಜೆ ಸಲ್ಲಿಸಿ, ನಂತರ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ತೆರೆದ ವಾಹನದಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಮಂಜುನಾಥ್ ಅವರಿಗೆ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿ, ಐದು ವರ್ಷಗಳ ಸಾಧನೆ ಮತ್ತು ಸ್ಥಿರ…

1 2
Translate »