ಉದ್ಯೋಗಾವಕಾಶಗಳನ್ನು ಸೃಷ್ಟಿಸದ ಸಚಿವರು ಡಾ. ಹೆಚ್.ಸಿ. ಮಹದೇವಪ್ಪ ವಿರುದ್ಧ ಎಸ್. ಶಂಕರ್ ಆರೋಪ
ಮೈಸೂರು

ಉದ್ಯೋಗಾವಕಾಶಗಳನ್ನು ಸೃಷ್ಟಿಸದ ಸಚಿವರು ಡಾ. ಹೆಚ್.ಸಿ. ಮಹದೇವಪ್ಪ ವಿರುದ್ಧ ಎಸ್. ಶಂಕರ್ ಆರೋಪ

April 27, 2018

ತಿ.ನರಸೀಪುರ: ಬೆಳೆಗೆ ನೀರನ್ನೂ ಬಿಡದೆ, ಮರಳು ಗಣ ಗಾರಿಕೆಗೆ ನಿರ್ಬಂಧ ಹೇರಿ ಕೂಲಿ ಕಿತ್ತು ಕೊಂಡ ಸಚಿವ ಡಾ.ಹೆಚ್..ಸಿ.ಮಹದೇವಪ್ಪ, ಮೂರು ದಶಕಗಳ ಕಾಲ ರಾಜಕೀಯ ಅಧಿಕಾರ ಪಡೆದಿದ್ದರೂ ಯುವ ಸಮು ದಾಯಕ್ಕೆ ಉದ್ಯೋಗವಕಾಶಗಳನ್ನು ಸೃಷ್ಟಿಸಲಿಲ್ಲ. ಈ ಚುನಾವಣೆಯಲ್ಲಿ ಅವರು ಠೇವಣ ಯನ್ನು ಕಳೆದುಕೊಂಡು ಸೋಲು ವುದು ಖಚಿತ ಎಂದು ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಹೇಳಿದರು.

ತಾಲೂಕಿನ ವಾಟಾಳು ಗ್ರಾಮದಲ್ಲಿರುವ ಸೂರ್ಯಸಿಂಹಾಸನ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿ ಪ್ರಭಾವಿ ಸಚಿವರಾಗಿದ್ದ ಮಹದೇವಪ್ಪ ಅವರಿಗೆ ಒಂದು ತಾಂತ್ರಿಕ ಶಿಕ್ಷಣ ಅಥವಾ ವೈದ್ಯಕೀಯ ಕಾಲೇಜನ್ನು ಸ್ಥಳೀಯವಾಗಿ ತೆರೆಯಲು ಸಾಧ್ಯವಾಗಿಲ್ಲ. ಕನಿಷ್ಠ ನಾಲೆಗಳಿಗೆ ನೀರನ್ನೂ ಹರಿಸದೆ ರೈತರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದರು ಎಂದು ಆರೋಪಿಸಿದರು.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಿನಿಮಾ ನಟರನ್ನು ಕರೆಸಿ, ಜನರನ್ನು ಸೇರಿಸಿದ್ದರೂ ಸುದೀರ್ಘ ರಾಜಕೀಯ ಅಧಿಕಾರ ನಡೆಸಿದ ಮಹದೇವಪ್ಪ ಅವರನ್ನು ನೋಡಿ ಜನ ಬರಲಿಲ್ಲ. ಸಿನಿಮಾ ನಟ ನಟಿ ಯನ್ನು ನೋಡಲು ಬಂದಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಒಳ ಒಪ್ಪಂದ ಮಾಡಿ ಕೊಂಡಿರುವುದು ಕ್ಷೇತ್ರದ ಜನತೆಗೆ ತಿಳಿದಿರುವ ವಿಚಾರವಾಗಿದೆ. ಎಲ್ಲಾ ವರ್ಗದ ಜನರು ಬಿಜೆಪಿ ಬೆಂಬಲಿಸಲಿದ್ದಾರೆ ಎಂದರು.

ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪ ಗೌಡ ಮಾತನಾಡಿ, ಬನ್ನೂರು ಭಾಗದ ಒಕ್ಕಲಿಗ ಸಮುದಾಯದವರು ಈ ಬಾರಿ ಬಿಜೆಪಿ ಬೆಂಬಲಿಸಿ ಎಸ್.ಶಂಕರ್ ಗೆಲುವಿಗೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ. ಕಾಂಗ್ರೆಸ್ ಜನವಿರೋಧಿ ಧೋರಣೆ ಹಾಗೂ ಜೆಡಿಎಸ್‍ನ ನಿರ್ಲಕ್ಷ್ಯಕ್ಕೆ ತಕ್ಕ ಪಾಠ ಕಲಿಸಲು ಜನರು ತೀರ್ಮಾ ನಿಸಿದ್ದಾರೆ ಎಂದು ತಿಳಿಸಿದರು.

ಗ್ರಾ.ಪಂ ಅಧ್ಯಕ್ಷ ಎಸ್.ಬಿ.ಮರಿನಂಜಪ್ಪ, ವಕೀಲರಾದ ತೊಟ್ಟವಾಡಿ ಮಹದೇವಸ್ವಾಮಿ, ಬಿ.ಎಸ್.ರಂಗನಾಥ್, ಪುರಸಭೆ ಮಾಜಿ ಸದಸ್ಯ ಎಸ್.ಸಿದ್ದೇಗೌಡ, ಎಪಿಎಂಸಿ ಸದಸ್ಯ ಸಾಲೂರುಸ್ವಾಮಿ, ಮುಖಂಡರಾದ ಕಲಿಯೂರು ವೆಂಕಟೇಶ್, ಗೌಡ್ರು ಪ್ರಕಾಶ್, ನಟರಾಜು, ಅತ್ತಹಳ್ಳಿ ಶ್ರೀನಿವಾಸ್, ವಾಟಾಳ್ ನಂಜುಂಡ, ಸಿದ್ದೇಶ್, ರಾಚಯ್ಯ, ರವಿ, ನಾಗ ಹಾಗೂ ಇನ್ನಿತರರು ಹಾಜರಿದ್ದರು.

Translate »