ಮೈಸೂರಲ್ಲಿ ಮಾಯಾವತಿ ಅವರಿಗೆ ಜಿಟಿಡಿ ಆತ್ಮೀಯ ಸ್ವಾಗತ
ಮೈಸೂರು

ಮೈಸೂರಲ್ಲಿ ಮಾಯಾವತಿ ಅವರಿಗೆ ಜಿಟಿಡಿ ಆತ್ಮೀಯ ಸ್ವಾಗತ

April 26, 2018

ಮೈಸೂರು: `ಕುಮಾರ ಪರ್ವ’ ಚುನಾವಣಾ ಬಹಿರಂಗ ಸಭೆ ಯಲ್ಲಿ ಪಾಲ್ಗೊಳ್ಳಲೆಂದು ಮೈಸೂರಿಗೆ ಆಗ ಮಿಸಿದ ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಉತ್ತರ ಪ್ರದೇ ಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರನ್ನು ಜೆಡಿಎಸ್ ಅಭ್ಯರ್ಥಿಗಳು ಹೋಟೆಲ್ ರ್ಯಾಡಿಸನ್ ಬ್ಲ್ಯೂ ಪ್ಲಾಜಾದಲ್ಲಿ ಇಂದು ಪುಷ್ಪಗುಚ್ಛ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.

ಮಧ್ಯಾಹ್ನ 12.30 ಗಂಟೆ ವೇಳೆಗೆ ವಿಶೇಷ ವಿಮಾನದಲ್ಲಿ ಮೈಸೂರಿನ ಮಂಡ ಕಳ್ಳಿ ವಿಮಾನ ನಿಲ್ದಾಣಕ್ಕೆ ಮಾಯಾವತಿ ಅವರು ಆಗಮಿಸಿದರು. ಅವರನ್ನು ಬರ ಮಾಡಿಕೊಳ್ಳಲು ಮೇಯರ್ ಬಿ. ಭಾಗ್ಯ ವತಿ, ಉಪಮೇಯರ್ ಎಂ.ಇಂದಿರಾ, ಜೆಡಿಎಸ್ ಅಭ್ಯರ್ಥಿಗಳಾದ ಶಾಸಕ ಜಿ.ಟಿ.ದೇವೇಗೌಡ, ಸಾರಾ ಮಹೇಶ್, ಅಬ್ದುಲ್ಲಾ, ಪ್ರೊ. ಕೆ.ಎಸ್. ರಂಗಪ್ಪ, ಕೆ.ವಿ. ಮಲ್ಲೇಶ್, ಎನ್. ಮಹೇಶ್, ನಗರ ಜೆಡಿಎಸ್ ಅಧ್ಯಕ್ಷ ಕೆ.ಟಿ. ಚೆಲುವೇಗೌಡ ಹಾಗೂ ಪ್ರಮುಖರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾದಿದ್ದರು.

ಆದರೆ ಬೆಂಗಾವಲು ಹಾಗೂ ಭದ್ರತಾ ಸಿಬ್ಬಂದಿ, ಸುರಕ್ಷತೆ ದೃಷ್ಟಿಯಿಂದ ಮಾಯಾವತಿ ಅವರು ವಿಮಾನದಿಂದ ಇಳಿಯುತ್ತಿದ್ದಂತೆಯೇ ನೇರವಾಗಿ ರ್ಯಾಡಿ ಸನ್ ಬ್ಲ್ಯೂ ಹೋಟೆಲಿಗೆ ಕರೆದೊಯ್ದರು. ಕಾದಿದ್ದ ನಾಯಕರಿಗೆ ಅಲ್ಲಿಗೆ ಬಂದು ಸ್ವಾಗತಿಸುವಂತೆ ಸಲಹೆ ನೀಡಿದ ಹಿನ್ನೆಲೆ ಯಲ್ಲಿ ಜಿ.ಟಿ.ದೇವೇಗೌಡ ನೇತೃತ್ವದ ಜೆಡಿಎಸ್ ಮತ್ತು ಬಿಎಸ್‍ಪಿ ಅಭ್ಯರ್ಥಿಗಳು ತಕ್ಷಣ ರ್ಯಾಡಿಸನ್ ಬ್ಲ್ಯೂ ಹೋಟೆಲಿಗೆ ಬಂದು ಪುಷ್ಪಗುಚ್ಛ ನೀಡುವ ಮೂಲಕ ಮಾಯಾವತಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ನಂತರ ಮಧ್ಯಾಹ್ನ 3.30 ಗಂಟೆ ವೇಳೆಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೂ ಆದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಹ ರ್ಯಾಡಿಸನ್À ಬ್ಲ್ಯೂ ಪ್ಲಾಜಾ ಹೋಟೆಲಿನಲ್ಲಿ ಮಾಯಾ ವತಿ ಅವರನ್ನು ಭೇಟಿ ಮಾಡಿ ಮೈಸೂರಿಗೆ ಸ್ವಾಗತಿಸಿದ ನಂತರ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ `ಕುಮಾರ ಪರ್ವ’ ಸಮಾವೇಶಕ್ಕೆ ಕರೆದೊಯ್ದರು.

ಮಾಯಾವತಿ ಅವರೊಂದಿಗೆ ಸಂಸದ ಅಶೋಕ ಸಿದ್ದಾರ್ಥ, ಜಿ.ಪಿ. ಉಪಾಸಕ್ ಮತ್ತು ರಾಜ್ಯ ಸಭಾ ಸದಸ್ಯ ಸತೀಶಚಂದ್ರ ಮಿಶ್ರಾ ಸಹ ಆಗಮಿಸಿದ್ದರು. ಹೋಟೆಲಿ ನಲ್ಲಿ ಜೆಡಿಎಸ್ ಮತ್ತು ಬಿಎಸ್‍ಪಿ ಚುನಾ ವಣಾ ತಂತ್ರ ಕುರಿತು ಮುಖಂಡರೊಂ ದಿಗೆ ಸಭೆ ನಡೆಸಿದರು.

ಮೈಸೂರಿಗೆ ಮಾಯಾವತಿ ಅವರದು ಮೂರನೇ ಭೇಟಿಯಾಗಿದ್ದು, 2008ರಲ್ಲಿ ವಿಧಾನ ಸಭಾ ಚುನಾವಣಾ ಪ್ರಚಾರದಲ್ಲಿ ಬಿಎಸ್‍ಪಿ ಅಭ್ಯರ್ಥಿಗಳ ಪರ ಮೈಸೂರಿನ ಪುರಭವನದಲ್ಲಿ ನಡೆದ ಭಾರೀ ಬಹಿ ರಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು, 2013ರ ವಿಧಾನ ಸಭೆ ಚುನಾವಣೆಯಲ್ಲೂ ಚಾಮರಾಜ ನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಬಿಎಸ್‍ಪಿ ಅಭ್ಯರ್ಥಿ ಎನ್. ಮಹೇಶ್ ಪರ ಚುನಾವಣಾ ಪ್ರಚಾರ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಮಾಯಾವತಿ ಆಗ ಮನದ ಹಿನ್ನೆಲೆಯಲ್ಲಿ ಮೈಸೂರಿನ ಮಂಡ ಕಳ್ಳಿ ವಿಮಾನ ನಿಲ್ದಾಣದಲ್ಲಿ ಭಾರೀ ಭದ್ರತೆ ಮಾಡಲಾಗಿತ್ತು. ಅದೇ ರೀತಿ ರ್ಯಾಡಿಸನ್ ಬ್ಲ್ಯೂ ಪ್ಲಾಜಾ ಹೋಟೆಲಿನಲ್ಲಿ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಿ ನಜರ್‍ಬಾದ್ ಠಾಣೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.

Translate »