ಮೋದಿ, ಶಾ ಎಷ್ಟೇ ಪ್ರಚಾರ ನಡೆಸಿದರೂ ಯಾವುದೇ ಪರಿಣಾಮ ಬೀರದು
ಮೈಸೂರು

ಮೋದಿ, ಶಾ ಎಷ್ಟೇ ಪ್ರಚಾರ ನಡೆಸಿದರೂ ಯಾವುದೇ ಪರಿಣಾಮ ಬೀರದು

April 26, 2018

ಮೈಸೂರು: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿ ಎಷ್ಟೇ ಪ್ರಚಾರ ನಡೆಸಿದರೂ ರಾಜ್ಯ ದಲ್ಲಿ ಅದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಅಭಿಪ್ರಾಯಪಟ್ಟರು.

ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಬುಧವಾರ ಮೈಸೂ ರಿಗೆ ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತ ನಾಡಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್, ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಇನ್ನಿತರರು ಪಕ್ಷದ ಪರ ಪ್ರಚಾರ ಕೈಗೊಳ್ಳಲಿ ದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‍ಗೆ ಜನರು ಮತ್ತೊಮ್ಮೆ ಆಶೀರ್ವದಿಸಲಿದ್ದಾರೆ ಎಂದರು.

ರಾಹುಲ್‍ಗಾಂಧಿ ಅವರು ನಾಳೆ (ಏ.26) ಕುಮಟಾ, ಹೊನ್ನಾವರದಲ್ಲಿ ಪ್ರಚಾರ ನಡೆಸಿ, ಮುರುಡೇಶ್ವರದಲ್ಲಿ ತಂಗಲಿದ್ದು, ಮರು ದಿನ ಮಂಗಳೂರು, ಬಂಟ್ವಾಳ, ಧರ್ಮಸ್ಥಳ, ಗೋಣ ಕೊಪ್ಪ, ಪಿರಿಯಾಪಟ್ಟಣಗಳಲ್ಲಿ ಪ್ರಚಾರ ನಡೆಸಿ, ಮೈಸೂರು ಮೂಲಕ ವಾಪಸಾಗಲಿದ್ದಾರೆ ಎಂದೂ ಹೇಳಿದರು.

ಚಾಮುಂಡೇಶ್ವರಿಯಲ್ಲಿ ತಮ್ಮ ಪ್ರಚಾರ ಇಂದಿಗೆ ಮುಗಿಯಲಿದ್ದು, ಮತ್ತೆ ಬರುವ ಅಗತ್ಯವಿಲ್ಲ. ಬಾದಾಮಿಗೂ ಒಂದು ದಿನ ಪ್ರಚಾರಕ್ಕೆ ಹೋಗಲಿದ್ದೇನೆ. ಈಗಾಗಲೇ 150 ಕ್ಷೇತ್ರಗಳಲ್ಲಿ ಪ್ರಚಾರ ನಡೆದಿದ್ದು, ರಾಜ್ಯದ ಉಳಿದ ಕಡೆಗಳಲ್ಲಿ ಪ್ರಚಾರದಲ್ಲಿ ಭಾಗವಹಿಸಲಿದ್ದೇನೆ ಎಂದರು.

ಮಾಯಾವತಿ ಮೈಸೂರು ಭೇಟಿ ಕುರಿತು ಮಾತನಾಡಿದ ಅವರು, ಕರ್ನಾಟಕದ ದಲಿತರು ಯಾವತ್ತೂ ಕಾಂಗ್ರೆಸ್ ಜೊತೆಗೇ ಇದ್ದಾರೆ ಎಂದರು. ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ್ದು, ನಮಗೆ ಅನುಕೂಲವಾಯಿತು ಎಂದೇನೂ ಇಲ್ಲ. ಯಡಿಯೂರಪ್ಪ ನಿಂತಿದ್ರೂ ಅಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಅನೇಕ ಬಾರಿ ಹೇಳಿದ್ದೇನೆ ಎಂದು ಪುನರುಚ್ಚರಿಸಿದರು.

ಅಪ್ಪ-ಮಕ್ಕಳಿಗೆ ಟಿಕೆಟ್ ಕೊಡಬಾರದು ಎಂಬ ಕಾರಣಕ್ಕೆ ವರುಣಾದಲ್ಲಿ ವಿಜ ಯೇಂದ್ರಗೆ ಟಿಕೆಟ್ ನೀಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಬಿಎಸ್‍ವೈ ಪುತ್ರ ರಾಘವೇಂದ್ರಗೆ ಟಿಕೆಟ್ ಕೊಟ್ಟಿದ್ದರು. ನಾಗಠಾಣಾದಲ್ಲಿ ಕಾರ್ಜೋಳ ಮಗ ಸ್ಪರ್ಧಿಸಿಲ್ಲವೇ? ಬಿಜೆಪಿ ನಾಯಕರ ಮಾತುಗಳು ಮಹತ್ವ ಕಳೆದು ಕೊಂಡಿದೆ. ಜನರ ಮುಂದೆ ನಗೆಪಾಟಲಿಗೆ ಈಡಾಗಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.

ಚುನಾವಣಾ ಪೂರ್ವ ಸಮೀಕ್ಷೆಗಳ ಕುರಿತು ಪ್ರತಿಕ್ರಿಯಿಸಿ ಅವರು, ಇವೆಲ್ಲ ವನ್ನು ನಾನು ನಂಬುವುದಿಲ್ಲ. ಕೇವಲ ನಾಲ್ಕು ಸಾವಿರ ಜನರನ್ನು ಸಂದರ್ಶಿಸಿ ಹೇಳುವ ಫಲಿತಾಂಶ ನಂಬಲಾಗದು. ರಾಜ್ಯದ ನಾಡಿಮಿಡಿತ ಅರ್ಥ ಮಾಡಿ ಕೊಳ್ಳುವ ಶಕ್ತಿ ಇದೆ. ಕಾಂಗ್ರೆಸ್ ಹೆಚ್ಚು ಸ್ಥಾನ ಲಭಿಸಲಿದೆ ಎಂದರು.

ಚುನಾವಣಾ ಪ್ರಚಾರ ನಡೆಸಿದರೆಂದು ಪ್ರೊ.ಅರವಿಂದ ಮಾಲಗತ್ತಿ, ಪ್ರೊ. ಮಹೇಶ್ ಚಂದ್ರಗುರು ಅವರ ಅಮಾ ನತು ವಿಚಾರದ ಬಗ್ಗೆ, ಅವರು ನನ್ನ ಪರ ಪ್ರಚಾರ ಮಾಡಿಲ್ಲ. ಪ್ರಜಾಪ್ರಭುತ್ವದ ಉಳಿವಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಪ್ರಜಾಪ್ರಭುತ್ವ ಉಳಿಸಿ ಎಂದರೆ ತಪ್ಪೇನು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Translate »