ಡಾ. ಹೆಚ್.ಸಿ. ಮಹದೇವಪ್ಪರನ್ನು ಎಂಎಲ್‍ಸಿ ಮಾಡಿ, ಸಚಿವ ಸ್ಥಾನ ನೀಡುವಂತೆ ಆಗ್ರಹ
ಮೈಸೂರು

ಡಾ. ಹೆಚ್.ಸಿ. ಮಹದೇವಪ್ಪರನ್ನು ಎಂಎಲ್‍ಸಿ ಮಾಡಿ, ಸಚಿವ ಸ್ಥಾನ ನೀಡುವಂತೆ ಆಗ್ರಹ

May 25, 2018

ತಿ.ನರಸೀಪುರ: ಜಿಲ್ಲೆಯಲ್ಲಿನ ಪಕ್ಷದ ಸಂಘಟನೆಯ ಹಿತದೃಷ್ಠಿಯಿಂದ ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಲ್ಲೇಶ ಚುಂಚನಹಳ್ಳಿ ಕಾಂಗ್ರೆಸ್ ಹೈಕಮಾಂಡನ್ನು ಆಗ್ರಹಿಸಿದರು.

ಪಟ್ಟಣದಲ್ಲಿ ಗುರುವಾರ ಕರೆಯ ಲಾಗಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯ ಹಿತದೃಷ್ಠಿಯಿಂದ ನೂತನ ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ ಅವರಿಂದ ತೆರವಾಗುವ ವಿಧಾನ ಪರಿಷತ್ ಸದಸ್ಯತ್ವಕ್ಕೆ ಮತ್ತೋರ್ವ ದಲಿತ ನಾಯಕ ಡಾ.ಹೆಚ್.ಸಿ. ಮಹದೇವಪ್ಪ ಅವರನ್ನು ನಾಮ ನಿರ್ದೇ ಶನ ಮಾಡಬೇಕು. ಮೈಸೂರು ಜಿಲ್ಲೆಗೆ ಪ್ರಾಮು ಖ್ಯತೆ ನೀಡಲು ಮಹದೇವಪ್ಪ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನವನ್ನು ನೀಡ ಬೇಕೆಂದು ಒತ್ತಾಯಿಸಿದರು. ಮಹದೇವಪ್ಪ ಅವರನ್ನು ವಿಧಾನ ಪರಿಷತ್‍ಗೆ ಆಯ್ಕೆ ಮಾಡುವುದು ಹಾಗೂ ಸಚಿವ ಸ್ಥಾನ ನೀಡುವ ಸಂಬಂಧ ಪಕ್ಷದ ವರಿಷ್ಠರು ಹಾಗೂ ನಾಯಕರನ್ನು ಬೇಟಿ ಮಾಡಿ ಮನವಿ ಪತ್ರವನ್ನು ಸಲ್ಲಿಸಲಾಗುವುದು ಎಂದು ಮಲ್ಲೇಶ ಚುಂಚನಹಳ್ಳಿ ತಿಳಿಸಿದರು.

ಕರಾದಸಂಸ ತಾಲ್ಲೂಕು ಸಂಚಾಲಕ ಯರಗನಹಳ್ಳಿ ಸುರೇಶ ಮಾತನಾಡಿ, ಲೋಕೋಪಯೋಗಿ ಸಚಿವರಾಗಿದ್ದ ಡಾ.ಹೆಚ್.ಸಿ.ಮಹದೇವಪ್ಪ ಅವರು ಹಲ ವಾರು ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡಿ ದ್ದರೂ ಸಾಮಾನ್ಯ ಜನರಿಗೆ ಸಿಗಲ್ಲವೆಂಬ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಜನರನ್ನು ದಿಕ್ಕು ತಪ್ಪಿಸಿ ಸೋಲಿಸಲಾಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ತಾಲ್ಲೂಕು ಸಂಘ ಟನಾ ಸಂಚಾಲಕ ವಾಟಾಳ್ ನಾಗರಾಜು, ನಂಜನಗೂಡು ಸಂಚಾಲಕ ದೇವರಸನ ಹಳ್ಳಿ ಪುಟ್ಟಸ್ವಾಮಿ, ಮುಖಂಡರಾದ ತೊಟ್ಟ ವಾಡಿ ರಾಚಪ್ಪ, ರವಿ, ಎಂ.ಮಲ್ಲಯ್ಯ, ಮಾದೇಶ, ಚಿನ್ನಸ್ವಾಮಿ, ಮಾದಿಗಹಳ್ಳಿ ರಾಮು, ಪಿ.ಮಹದೇವಸ್ವಾಮಿ, ಗಂಗಾ ಧರ, ಯಾಕನೂರು ಮಹದೇವಸ್ವಾಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »