ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ದ್ವಿಗುಣ ಅಭ್ಯರ್ಥಿ ಡಾ. ಹೆಚ್.ಸಿ. ಮಹದೇವಪ್ಪ
ಮೈಸೂರು

ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ದ್ವಿಗುಣ ಅಭ್ಯರ್ಥಿ ಡಾ. ಹೆಚ್.ಸಿ. ಮಹದೇವಪ್ಪ

May 1, 2018

ತಿ.ನರಸೀಪುರ: ರಾಜಕೀಯವಾಗಿ ಕೈ ಹಿಡಿದು ಅಧಿಕಾರ ಕೊಟ್ಟವರು ಕೆಲವು ವರ್ಷಗಳ ಕಾಲ ದೂರವಾಗಿ ಮುಖಂಡರು ಹಾಗೂ ಕಾರ್ಯಕರ್ತರು ಮರಳಿ ಪಕ್ಷಕ್ಕೆ ಬರುತ್ತಿದ್ದು, ಸಾರ್ವತ್ರಿಕ ವಿಧಾನಸಭಾ ಚುನಾವಣೆ ಯಲ್ಲಿ ಗೆಲ್ಲುವ ವಿಶ್ವಾಸ ದ್ವಿಗುಣಗೊಂಡಿದೆ ಎಂದು ಲೋಕೋಪಯೋಗಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ. ಮಹದೇವಪ್ಪ ಹೇಳಿದರು.

ಪಟ್ಟಣದ ಕಡ್ಲೆರಂಗಮ್ಮ ಬೀದಿಯಲ್ಲಿ ಪ.ಪಂ ಮಾಜಿ ಅಧ್ಯಕ್ಷ ಎನ್.ಎಸ್.ಬಸವರಾಜು ಸೇರಿದಂತೆ ಜೆಡಿಎಸ್ ಪಕ್ಷದಲ್ಲಿ ಗುರುತಿಸಿ ಕೊಂಡಿದ್ದ ಯುವ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಚುನಾವಣಾ ಪ್ರಚಾರದಲ್ಲಿ ಕ್ಷೇತ್ರದಾದ್ಯಂತ ವ್ಯಕ್ತವಾಗುತ್ತಿರುವ ಜನ ಬೆಂಬಲವನ್ನು ಕಂಡು 37 ವರ್ಷಗಳ ರಾಜಕೀಯ ಜೀವನ ಸಾರ್ಥಕ ಎಂಬ ಭಾವನೆ ಬರುತ್ತಿದೆ. ರಾಜಕೀಯದಲ್ಲಿ ಜನರಿಗಾಗಿ ಹೆಚ್ಚಿನ ಕೆಲಸವನ್ನು ಮಾಡಬೇಕೆಂಬ ಜವಾಬ್ದಾರಿ ಹೆಚ್ಚಾಗುತ್ತಿದೆ ಎಂದರು.

ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರೊಂದಿಗೆ ಜನಪರ ಹೋರಾಟಕ್ಕೆ ಹೆಗಲನ್ನು ಕೊಟ್ಟಿದ್ದೇನೆ. ರಾಜ್ಯದಲ್ಲಿರುವ ಹಿಂದುಳಿದ ವರ್ಗಗಳು ಹಾಗೂ ದಲಿತ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆಯನ್ನು ನೀಡಿದ್ದೇವೆ. ರಾಜಕೀಯ ಅಧಿಕಾರವನ್ನು ಜನರಿಗಾಗಿ ಬಳಕೆ ಮಾಡಿಕೊಂಡಿದ್ದೇವೆ. ತತ್ವ ಹಾಗೂ ಸಿದ್ಧಾಂತಗಳ ಅಡಿಯಲ್ಲಿ ರಾಜಕಾರಣವನ್ನು ಮಾಡಿದ್ದೇವೆ. ಮುಂದೆಯೂ ಎಲ್ಲಾ ವರ್ಗಗಳ ಬಡವರ ಕಲ್ಯಾಣಕ್ಕೆ ಬದ್ಧರಾಗಿ ಯೋಜನೆ ಗಳನ್ನು ರೂಪಿಸುತ್ತೇವೆ. ಈ ಬಾರಿಯೂ ಕಾಂಗ್ರೆಸ್ ಬೆಂಬಲಿಸಬೇಕೆಂದು ಮಹ ದೇವಪ್ಪ ಮನವಿ ಮಾಡಿದರು.

ಪಪಂ ಮಾಜಿ ಅಧ್ಯಕ್ಷ ಎನ್.ಎಸ್. ಬಸವ ರಾಜು, ಹಾಲಿ ಸದಸ್ಯೆ ಶಶಿಕಲಾ ಪ್ರಕಾಶ್ ಸೇರಿದಂತೆ ಜೆಡಿಎಸ್ ಹಿರಿಯ ಮುಖಂಡ ಎಲ್.ಮಹದೇವಪ್ಪ, ಯುವ ಮುಖಂಡ ರಾದ ಸೋಮುದಾದಾ, ಚೌಹಳ್ಳಿ ಮಲ್ಲೇಶ, ಮದಕರಿ ಬ್ರಿಗೇಡ್ ಅಧ್ಯಕ್ಷ ಪುರುಷೋತ್ತಮ್, ಸಿ.ಬಿ.ಮಹೇಶ, ಮರಿ ದೊಡ್ಡಯ್ಯ, ಸೂರಿ, ಬಿರೇಶ್, ಮೋಹನ, ಗಣೇಶ್‍ಗೌಡ, ನಟ ರಾಜು, ಹುಲಿಮರಿ ಚಂದ್ರು ಹಾಗೂ ಇನ್ನಿತ ರರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಮಾಜಿ ಶಾಸಕ ಎಸ್.ಕೃಷ್ಣಪ್ಪ, ಜಿ.ಪಂ ಸದಸ್ಯ ಮಂಜುನಾಥನ್, ತಾ.ಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಪುರಸಭೆ ಅಧ್ಯಕ್ಷ ಸಿ.ಉಮೇಶ್, ಪ.ಪಂ ಮಾಜಿ ಅಧ್ಯಕ್ಷರಾದ ಸುಧಾ ಗುರುಮಲ್ಲಪ್ಪ, ಬಸವಣ್ಣ, ಎನ್.ಮಹದೇವಸ್ವಾಮಿ, ಎನ್.ಪಿ. ಕನಕರಾಜು, ಗ್ರಾ.ಪಂ ಮಾಜಿ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ, ಲಕ್ಷ್ಮೀನಾರಾಯಣ, ನವೀನ್ ಬೋಸ್, ಹಿನಕಲ್ ನಂಜುಂಡ, ಮೃಗಾಲಯ ಪ್ರಾಧಿಕಾರ ನಿರ್ದೇಶಕಿ ಲತಾ ಜಗದೀಶ್, ಮುಖಂಡರಾದ ಬಿ.ಮಹದೇವ, ಅಂದಾನಿಗೌಡ, ಬಾದಾಮಿ ಮಂಜು, ಪುಳ್ಳಾರಿ ಗೌಡ, ಮಾದೇಶ, ಅಂಗಡಿ ಸಿದ್ದ, ಜೆ.ಅನೂಪ್ ಗೌಡ, ರಾಮರೆಡ್ಡಿ, ಶಿವರಾಂ, ನಿಲಸೋಗೆ ಬಸವರಾಜು, ದದ್ಧೂರಿ ಶೇಖರ್ ಹಾಗೂ ಇನ್ನಿತರರು ಹಾಜರಿದ್ದರು.

Translate »