ವಿರಾಜಪೇಟೆ: ವಿರಾಜಪೇಟೆ ಜೈನರ ಬೀದಿ ಯಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಬಸವೇಶ್ವರ ದೇವಾ ಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ಶ್ರದ್ಧ ಭಕ್ತಿಯಿಂದ ಆಚರಿಸಲಾಯಿತು.
ಏಪ್ರಿಲ್ 27ರಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಪೂಜಾ ವಿಧಿ ವಿಧಾನಗಳೊಂದಿಗೆ ಮಹಾ ಸುದರ್ಶನಹೋಮ, ವಾಸ್ತು ಹೋಮ, ವಾಸ್ತು ಬಲಿದಾನ, ಪ್ರಾಕಾರ ಬಲಿದಾನ ನಂತರ ರಾತ್ರಿ ಮಹಾ ಪೂಜೆಯ ಬಳಿಕ ಪ್ರಸಾದ ವಿನಿಯೋಗ ನಡೆಯಿತು.
ಇಂದು ಅಷ್ಟಬಂಧ ಬ್ರಹ್ಮ ಕಲಶೋತ್ಸವವು ವೇದಮೂರ್ತಿ ಪಂಡರೀಶ ಅರಳಿತ್ತಾಯ ತಂತ್ರಿ ಅವರ ನೇತೃತ್ವದಲ್ಲಿ ಪುಣ್ಯ ಕಾರ್ಯಕ್ರಮಗಳು ನಡೆದು. ಬೆಳಿಗ್ಗೆ ದ್ವಾದಶ ನಾಳಿಕೇರ ಗಣ ಹೋಮ, ಪ್ರತಿಷ್ಠಾ ಹೋಮ, ಪ್ರತಿಷ್ಠ ಕಲಶಾಭಭಿಷೇಕ, ಅಷ್ಟ ಚತ್ವಾರಿ ಕಲಶ ಪೂಜೆ, ಅಷ್ಟಬಂಧ ಲೇಪನ ಬ್ರಹ್ಮಕಲಶಾಭಿಷೇಕ, ಮಹಾಪೂಜಾ ಸೇವೆ, ನಂತರ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭ ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಜಿ.ಕಾಮತ್, ಸದಸ್ಯರಾದ ರವಿಂದ್ರ ಕಾಮತ್, ಜೆ.ಎನ್. ಪುಷ್ಪರಾಜ್, ಸಂಪತ್ ಕುಮಾರ್, ಚಂದ್ರ ಪ್ರಸಾದ್ ಹಾಗೂ ಮುಂತಾದವರು ಹಾಜರಿದ್ದರು. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಿಂದಲು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.