ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಜನರಿಗೆ ಭ್ರಮನಿರಶನ ಬಿರುನಾಣ ಯಲ್ಲಿ ಜೆಡಿಎಸ್ ಬಹಿರಂಗ ಸಭೆ
ಕೊಡಗು

ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಜನರಿಗೆ ಭ್ರಮನಿರಶನ ಬಿರುನಾಣ ಯಲ್ಲಿ ಜೆಡಿಎಸ್ ಬಹಿರಂಗ ಸಭೆ

May 1, 2018

ಗೋಣ ಕೊಪ್ಪಲು: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ಆಡಳಿತದಿಂದ ಮತದಾರ ರೋಸಿ ಹೋಗಿದ್ದು ಈ ಬಾರಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದತ್ತ ಮತದಾರನ ಒಲವು ಹೆಚ್ಚಾಗಿದೆ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.

ದ.ಕೊಡಗಿನ ಬಿರುನಾಣ ಬಸ್ ನಿಲ್ದಾಣದಲ್ಲಿ ಆಯೋಜನೆಗೊಂಡಿದ್ದ ಜೆಡಿಎಸ್ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದಿಂದ ಆರಿಸಿಹೋದ ಶಾಸಕರು ಅಭಿವೃದ್ಧಿಗೆ ಶ್ರಮಿಸಲಿಲ್ಲ. ಸಂಸದರು ಕೂಡ ಕ್ಷೇತ್ರದ ಬಗ್ಗೆ ಕಾಳಜಿ ವಹಿಸಲಿಲ್ಲ. ಈ ಭಾಗದಲ್ಲಿ ರೈತ ಆತ್ಮಹತ್ಯೆ ಆದಾಗ ನೊಂದ ಕುಟುಂಬಕ್ಕೆ ಕನಿಷ್ಟ ಸ್ಪಂದಿಸುವ ಕೆಲಸ ಮಾಡಲಿಲ್ಲ. ಮತ ಪಡೆದು ಹೋದ ಜನಪ್ರತಿನಿಧಿಗಳು ಗ್ರಾಮೀಣ ಭಾಗಕ್ಕೆ ಕೆಲಸ ಮಾಡಲಿಲ್ಲ ಎಂದು ಆರೋಪಿಸಿದರು.

ವಿಯೇಟ್ನಾಂ ಕರಿಮೆಣಸು ವಿಚಾರ ದಲ್ಲಿ ಬಿಜೆಪಿ ರೈತ, ಬೆಳೆಗಾರರೊಂದಿಗೆ ಚೆಲ್ಲಾಟವಾಡಿದೆ. ಸೂಕ್ತ ಬೆಲೆ ಇಲ್ಲದೆ ಬೆಳೆಗಾರ ಕಂಗಾಲಾಗಿದ್ದಾನೆ. ಅನ್ನದಾತ ಅನಾಥವಾಗಿದ್ದು, ಈ ಬಾರಿ ಬದಲಾವಣೆ ತರಲೇಬೇಕೆಂದು ಸಂಕೇತ್ ಪೂವಯ್ಯ ಮನವಿ ಮಾಡಿದರು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ತಾರ್ಕಿಕ ಅಂತ್ಯ ದವರೆಗೂ ಹೋರಾಟ ನಡೆಸಿ ಸಿಬಿಐ ತನಿಖೆಗೆ ಒತ್ತಾಯಿಸಲು ಜೆಡಿಎಸ್ ಅಧಿ ಕಾರ ಇಲ್ಲದಿದ್ದರೂ ನ್ಯಾಯಕ್ಕಾಗಿ ಹೋರಾಟ ನಡೆಸಿದೆ. ಬೆಳೆಗಾರರ, ಕಾರ್ಮಿಕರ, ರೈತರ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸರ್ಕಾರದ ವಿರುದ್ದ ಧ್ವನಿ ಎತ್ತಿದ್ದೇವೆ. ಮುಂದೆ ಎಲ್ಲರಿಗೂ ಒಳ್ಳೆಯದಾಗುವ ಕಾಲ ಸಮೀಪಿಸುತ್ತಿದೆ ಎಂದರು.

ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಮಾತ ನಾಡಿ, ಬೆಳೆಗಾರರು ನೊಂದು ಹೋರಾಟ ರೂಪಿಸಿದಾಗ ಮುಂಚೂಣ ವಹಿಸಬೇಕಾ ಗಿದ್ದ ಈ ಕ್ಷೇತ್ರದ ಬಿಜೆಪಿ ಶಾಸಕರು ಹೋರಾಟಕ್ಕೆ ಸ್ಪಂದಿಸಲಿಲ್ಲ. ಸಂಸದರು ಕೂಡ ಬೆಳೆಗಾರರ ಸಮಸ್ಯೆಗೆ ಸ್ಪಂದಿಸು ವಲ್ಲಿ ವಿಫಲರಾಗಿದ್ದರು. ಈ ಬಾರಿ ಕುಮಾರಸ್ವಾಮಿಯವರ ಸರ್ಕಾರ ರೈತರ ಪರ ಇರುವುದರಿಂದ ಕಾಫಿ ಬೆಳೆಗಾರರ, ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಖುದ್ದು ನನ್ನೊಂದಿಗೆ ಮತಾನಾಡಿರುವುದರಿಂದ ರೈತರ ಸಾಲ ಮನ್ನಾದ ಬಗ್ಗೆ ವಿಶ್ವಾಸ ಮೂಡಿದೆ. ಯಾವುದೇ ಆಮಿಷಗಳಿಗೆ ಒಳಗಾಗದೇ ಈ ಬಾರಿ ಸಂಕೇತ್ ಪೂವಯ್ಯನವರನ್ನು ಹೆಚ್ಚಿನ ಬಹುಮತದಿಂದ ಆರಿಸಿ ಕಳುಹಿಸು ವಂತೆ ಮನವಿ ಮಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವಿರಾಜ ಪೇಟೆ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಎಸ್.ಎಚ್. ಮತೀನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾ ಮಹಿಳಾ ಆಧ್ಯಕ್ಷೆ ಅಜ್ಜಮಾಡ ಮುತ್ತಮ್ಮ, ಬಿರುನಾಣ ಜೆಡಿಎಸ್ ಸ್ಥಾನೀಯ ಅಧ್ಯಕ್ಷ ಕರ್ತಮಾಡ ಅಧ್ಯಕ್ಷ ನರೇಂದ್ರ, ಕಾರ್ಮಿಕ ಜಿಲ್ಲಾಧ್ಯಕ್ಷ ಪರಮಾಲೆ ಗಣೇಶ್, ಯುವ ಜೆಡಿಎಸ್‍ನ ಅಧ್ಯಕ್ಷ ಅಮ್ಮಂಡ ವಿವೇಕ್ ಮುಖಂಡರು ಗಳಾದ ಚೋನಿರ ಸಜನ್ ಉತ್ತಪ್ಪ, ಉಳು ವಂಗಡ ದತ್ತ, ನೆಲ್ಲಿರ ಉತ್ತಯ್ಯ, ಬೊಳ್ಳೇರ ಮುತ್ತಣ್ಣ, ಬೆಳ್ಯಪ್ಪ, ಪೊನ್ನಪ್ಪ, ಅಪ್ಪಣ್ಣ, ಕಿರಣ್ ಕೋಗಿಲೆವಾಡಿ, ಬೊಟ್ಟಂಗಡ ತಮ್ಮು ಮುಂತಾದವರು ಹಾಜರಿದ್ದರು.

Translate »