ಹೆಗ್ಗಡೆ ಸಮಾಜದ ಕ್ರೀಡಾಕೂಟಕ್ಕೆ ಚಾಲನೆ
ಕೊಡಗು

ಹೆಗ್ಗಡೆ ಸಮಾಜದ ಕ್ರೀಡಾಕೂಟಕ್ಕೆ ಚಾಲನೆ

May 1, 2018

ವಿರಾಜಪೇಟೆ: ಗ್ರಾಮೀಣ ಪ್ರದೇಶದ ಹೆಗ್ಗಡೆ ಸಮಾಜದ ಯುವಕರು ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಯು ಭಾಗವಹಿ ಸುವಂತಾಗಬೇಕು ಎಂದು ರಾಜ್ಯ ಅಗ್ನಿಶಾಮಕದಳದ ನಿರ್ದೇಶಕ-ತುರ್ತು ಸೇವೆಯ ನಿರ್ದೇಶಕ ಕೊಪ್ಪಂಡ ಯು. ರಮೇಶ್ ಹೇಳಿದರು.

ಕೊಡಗು ಹೆಗ್ಗಡೆ ವಿದ್ಯಾಭಿವೃದ್ದಿ ಸಂಘ ಮತ್ತು ಸಮಾಜದ ವತಿಯಿಂದ ವಿರಾಜ ಪೇಟೆ ಜೂನಿಯರ್ ಕಾಲೇಜು ಮೈದಾನ ದಲ್ಲಿ ಆಯೋಜಿಸಲಾಗಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸಮುದಾ ಯದ ಜನಸಂಖ್ಯೆ ಕಡಿಮೆಯಾದರೂ ಹೆಗ್ಗಡೆ ಜನಾಂಗದವರು ಕ್ರೀಡೆಯಲ್ಲಿ ರಾಜ್ಯ-ರಾಷ್ಟ್ರಮಟ್ಟದಲ್ಲಿಯು ಹೆಸರು ಗಳಿಸಿರುವುದು ಶ್ಲಾಘನೀಯ. ಮುಂದೆಯೂ ಕ್ರೀಡೆಗೆ ಹೆಚ್ಚು ಒತ್ತು ನೀಡುವಂತಾಗಬೇಕು ಎಂದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ವ್ಯವಸ್ಥಾಪಕ ಪೊಕ್ಕಳಿಚಂಡ ಕೆ. ಪೊನ್ನಪ್ಪ ಕ್ರೀಡಾ ಕೂಟದ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ, ಯುವಕರು ಪಾಠದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆ ಗಳಲ್ಲೂ ಭಾಗವಹಿಸಬೇಕು.ಳಾದ ಕ್ರೀಡೆ ಯಿಂದ ಮನೋವಿಕಾಸ ಉತ್ತೇಜನ ದೊರೆ ಯುತ್ತದೆ. ಆಟದಿಂದ ಮನಸ್ಸು ಚುರುಕು ಗೊಳ್ಳುವುದರೊಂದಿಗೆ ಏಕಾಗ್ರತೆ ಹಾಗೂ ಶಿಸ್ತನ್ನು ಬೆಳಸಿಕೊಳ್ಳಬಹುದು. ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿರು ವಂತೆ ಕ್ರೀಡೆಗೂ ಪ್ರೋತ್ಸಾಹ ನೀಡು ವಂತಾಗಬೇಕು ಎಂದರು.

ಹೆಗ್ಗಡೆ ಸಮಾಜದ ಉಪಾಧ್ಯಕ್ಷ ಕೊರ ಕುಟ್ಟೀರ ಸ.ರಾ.ಚಂಗಪ್ಪ ಪ್ರಾಸ್ತವಿಕವಾಗಿ ಮಾತನಾಡಿ, ನಮ್ಮ ಜನಾಂಗ ಆರ್ಥಿಕ ವಾಗಿ ಹಿಂದುಳಿದ ಜನಾಂಗವಾಗಿದ್ದು, ಸಮಾಜದ ಕ್ರೀಡೋತ್ಸವಕ್ಕೆ ಸರ್ಕಾರದಿಂದ ಅನುದಾನ ನೀಡುವಂತೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದ್ದು, ಇತರ ಸಮುದಾ ಯಕ್ಕೆ ನೀಡುವಂತಹ ಸಹಾಯ ಧನ ವನ್ನು ನಮಗೂ ನೀಡುವಂತೆ ಒತ್ತಾಯಿಸಿ ಕ್ರೀಡೆಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಸರ್ಕಾರಕ್ಕೆ ನೀಡಲಾಗಿದೆ ಎಂದರು.

ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಂಞ ರಂಡ ಜಿ.ಅಯ್ಯಪ್ಪ ಅವರು ಧ್ವಜಾರೋಹಣ ಮಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಬಾಂಧವರು ಕ್ರೀಡೆಯಲ್ಲಿ ಇನ್ನು ಹೆಚ್ಚು ಮುಂದೆ ಬರು ವಂತಾಗಬೇಕು ಎಂದರು. ಸ.ರಾ. ಚಂಗಪ್ಪ ಸ್ವಾಗತಿಸಿದರೆ. ಸಮಾಜದ ಕ್ರೀಡಾ ಸಮಿತಿಯ ಸಂಚಾಲಕ ಪಡಿಂಞರಂಡ ಪ್ರಭುಕುಮಾರ್ ನಿರೂಪಿಸಿದರು. ಕೊಡಗು ಜಿಲ್ಲೆಯಾ ದ್ಯಂತ 10 ವಲಯಗಳು ಸಮುದಾಯದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.

Translate »