ಕಡಗದಾಳುನಲ್ಲಿ ಅಪ್ಪಚ್ಚುರಂಜನ್‍ಗೆ ತರಾಟೆ
ಕೊಡಗು

ಕಡಗದಾಳುನಲ್ಲಿ ಅಪ್ಪಚ್ಚುರಂಜನ್‍ಗೆ ತರಾಟೆ

May 1, 2018

ಮಡಿಕೇರಿ: ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಅವರನ್ನು ಕಡಗದಾಳುವಿನ ಸಂಘಪರಿವಾರದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಕ್ಷೇತ್ರದ ಅಭ್ಯರ್ಥಿಯಾಗಿ ಅಪ್ಪಚ್ಚು ರಂಜನ್ ಶುಕ್ರವಾರದಂದು ಕಡಗದಾಳುವಿನಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಈ ಸಂದರ್ಭ ಅಲ್ಲಿನ ಸಂಘ ಪರಿವಾರದ ಕಾರ್ಯಕರ್ತರು ರಂಜನ್ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ತೀವ್ರ ಮಾತಿನ ಚಕಮಕಿ ನಡೆದಿದೆ. ಸಂಘಪರಿವಾರದಿಂದ ಅಧಿಕಾರ ಪಡೆದು ಬಳಿಕ ಸಂಘಕ್ಕೆ ಅಗೌರವ ತೋರುತ್ತಿದ್ದೀರಿ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಡಗದಾಳುವಿನ ಭದ್ರಕಾಳಿ ದೇವಾಲಯ ಸಮೀಪ ಸಭೆ ನಡೆಯುತ್ತಿದ್ದಾಗ ಈ ಘಟನೆ ನಡೆದಿದ್ದು, ರಂಜನ್ ಅವರ ಜೊತೆಗಿದ್ದ ಬಿಜೆಪಿ ಮುಖಂಡರು ಪರಿಸ್ಥಿತಿ ಯನ್ನು ತಿಳಿಗೊಳಿಸಿದರೆನ್ನಲಾಗಿದೆ. ಹಿಂದುತ್ವದ ಮೂಲಕ ಅಧಿಕಾರಕ್ಕೆ ಏರಿ ಬಳಿಕ ಹಿಂದು ಯುವಕರಿಗೆ ಅನ್ಯಾಯವಾದಾಗ ತಮ್ಮ ಪರ ನಿಲ್ಲಲಿಲ್ಲ. ಬಲ್ಲಾರಂಡ ಮಣ ಉತ್ತಪ್ಪ ಸಂಘಪರಿವಾರದ ಬಗ್ಗೆ ಅಗೌರವದ ಹೇಳಿಕೆ ನೀಡಿದಾಗ ಅದನ್ನು ಖಂಡಿಸಿಲ್ಲವೆಂದು ಸಂಘಪರಿವಾರದ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.

Translate »