ಕಾರ್ಮಿಕರು ರಾಷ್ಟ್ರದ ಶಿಲ್ಪಿಗಳು: ಅಪ್ಪಚ್ಚು ರಂಜನ್
ಕೊಡಗು

ಕಾರ್ಮಿಕರು ರಾಷ್ಟ್ರದ ಶಿಲ್ಪಿಗಳು: ಅಪ್ಪಚ್ಚು ರಂಜನ್

March 2, 2019

ಮಡಿಕೇರಿ: ಕಾರ್ಮಿಕರು ರಾಷ್ಟ್ರದ ಶಿಲ್ಪಿಗಳು, ಕಾರ್ಮಿಕರಿಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ ಎಂದು ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕರ್ನಾ ಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾ ಜಿಕ ಭದ್ರತಾ ಮಂಡಳಿ ಹಾಗೂ ಕರ್ನಾ ಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕಾರ್ಮಿಕ ಸಮ್ಮಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಮಿಕರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಪಿಂಚಣಿ, ಹೆರಿಗೆ ಸೌಲಭ್ಯ, ಕಲಿಕೆ ಭಾಗ್ಯ, ಕಾರ್ಮಿಕ ಆರೋಗ್ಯ ಭಾಗ್ಯ, ಅಪಘಾತ ಪರಿಹಾರ, ಪ್ರಧಾನ ಮಂತ್ರಿಗಳ ಶ್ರಮಯೋಗಿ ಮನ್‍ದನ್ ಯೋಜನೆಗ ಳನ್ನು ಜಾರಿಗೊಳಿಸಿದ್ದು, ಅವುಗಳ ಪ್ರಯೋ ಜನ ಪಡೆದುಕೊಂಡು ಕಾರ್ಮಿಕರು ಆರ್ಥಿಕ ವಾಗಿ ಸಬಲರಾಗಬೇಕು ಎಂದರು.

ಕಟ್ಟಡ ಕಾರ್ಮಿಕರು ಜೀವ ಸುರಕ್ಷಾ ಸಾಧನಗಳನ್ನು ಅಳವಡಿಸಿಕೊಂಡು ಎಚ್ಚರ ದಿಂದ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕಾರ್ಮಿಕರನ್ನು ಸಮ್ಮಾನ ಕಾರ್ಯಕ್ರಮ ಶ್ಲಾಘನೀಯ. ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಕಾರ್ಮಿಕರ ಮಾಹಿತಿ ಪಡೆದು ಅವರಿಗೆ ಸರ್ಕಾ ರದ ಸೌಲಭ್ಯಗಳ ಮಾಹಿತಿ ಬೇಕು ಎಂದರು.

ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ತಾಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿದರು.ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕಾರ್ಮಿಕರು ಪ್ರಥಮವಾಗಿ ತಮ್ಮ ಹೆಸರು ಗಳನ್ನು ಸಂಬಂಧಿಸಿದ ಇಲಾಖೆಯಲ್ಲಿ ನೋಂದಾ ಯಿಸಿಕೊಳ್ಳಬೇಕು. ನೋಂದಣಿಯಾಗದೇ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ ಎಂದರು.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಟ್ಟಡ ಕಾರ್ಮಿಕರನ್ನು ನೋಂದಾಯಿಸ ಲಾಗುತ್ತಿದ್ದು, ಇದುವರೆಗೆ ಜಿಲ್ಲೆಯಲ್ಲಿ 4477 ಕಾರ್ಮಿಕರು ಹೆಸರು ನೋಂದಾಯಿಸಿದ್ದಾರೆ ಎಂದು ಕಾರ್ಮಿಕ ಇಲಾಖೆ ಅಧಿüಕಾರಿ ಎಂ.ಎಚ್.ರಾಮಕೃಷ್ಣ ಮಾಹಿತಿ ನೀಡಿದರು.

ಕಾರ್ಮಿಕರ ಮಕ್ಕಳಿಗೆ 1ನೇ ತರಗತಿ ಯಿಂದ ಸ್ನಾತಕೋತ್ತರ ಪದವಿವರೆಗೆ ರೂ.2 ಸಾವಿರಗಳಿಂದ 20 ಸಾವಿರವರೆಗೆ ಶೈಕ್ಷಣಿಕ ಧನ ಸಹಾಯವಿದೆ. ನೋಂದಾಯಿತ ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ 15 ಸಾವಿರ ರೂ., ಮಕ್ಕಳ ಮದುವೆಗೆ 50 ಸಾವಿರ ರೂ., ಧನ ಸಹಾಯ ಹಾಗೂ 60 ವರ್ಷ ಪೂರ್ಣಗೊಂಡಲ್ಲಿ ಮಾಸಿಕ 1000 ಪಿಂಚಣಿ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ 1200 ಜನ ಕಾರ್ಮಿಕರಿಗೆ ಧನ ಸಹಾಯ ಮಾಡಲಾಗಿದೆ. ಮತ್ತು ಅಸಂ ಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಅಸಂಘಟಿತ ವಲ ಯದಲ್ಲಿ ದುಡಿಯುತ್ತಿರುವ (ಗೃಹ ಕೆಲಸ, ಟೈಲರ್, ದೋಬಿ, ಕ್ಷೌರಿಕರು, ಅಕ್ಕಸಾಲಿ ಗರು, ಹಮಾಲಿಗಳು, ಕಮ್ಮಾರರು, ಕುಂಬಾ ರರು, ಚಿಂದಿ ಆಯುವವರು) ಈ ವಲಯ ದಲ್ಲಿ ದುಡಿಯುತ್ತಿರುವ ಕಾರ್ಮಿಕರಿಂದ ಸ್ಮಾರ್ಟ್ ಕಾರ್ಡ್‍ಗೆ 1074 ಅರ್ಜಿಗಳು ಬಂದಿದ್ದು, ಮಂಡಳಿಗೆ ಕಳುಹಿಸಲಾಗಿದೆ. ಸ್ಮಾರ್ಟ್ ಕಾರ್ಡ್ ಬಂದ ನಂತರ ವಿತರಿ ಸಲಾಗುವುದು ಎಂದು ಹೇಳಿದರು.

ವಿವಿಧ ವೃತ್ತಿಯಲ್ಲಿ ಕಾರ್ಯ ನಿರ್ವಹಿಸು ತ್ತಿರುವ ಕಾರ್ಮಿಕರ ಸೇವಾ ಅವಧಿ ಮತ್ತು ನೈಪುಣ್ಯತೆಯ ಆಧಾರದ ಮೇಲೆ ಪ್ರಥಮ ವಾಗಿ ಜಿಲ್ಲೆಯಲ್ಲಿ 9 ಜನ ಕಾರ್ಮಿಕರಿಗೆ 10 ಸಾವಿರಗಳ ಚೆಕ್, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಹಾಗೂ 78 ಜನ ಕಾರ್ಮಿಕರಿಗೆ 1 ಸಾವಿರ ಚೆಕ್, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ಹಾಗೂ ಹಾಗೂ 50 ಜನ ಕಾರ್ಮಿಕರಿಗೆ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸಂತ ಮೈಕಲ್ ಶಾಲಾ ವಿದ್ಯಾರ್ಥಿನಿ ಯರು ಪ್ರಾರ್ಥಿಸಿದರು, ಉದ್ಯೋಗ ವಿನಿ ಮಯ ಅಧಿಕಾರಿ ಸಿ.ಜಗನಾಥ್, ಕಾರ್ಮಿಕ ಅಧಿಕಾರಿ ಎಂ.ಎಚ್.ರಾಮಕೃಷ್ಣ ಅವರು ಮತ್ತಿತರರಿದ್ದರು.

Translate »