ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಮತಯಾಚನೆ
ಮೈಸೂರು

ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಮತಯಾಚನೆ

May 1, 2018

ನಂಜನಗೂಡು: ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ತ್ಯಾಗರಾಜ ಕಾಲೋನಿ ಮತ್ತು ಈದಿಗಾ ಬಡಾವಣೆಯಲ್ಲಿ ಮತಯಾಚಿಸಿದರು.

ಅವರು ಈ ಸಂದರ್ಭದಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನುಡಿದಂತೆ ನಡೆದಿದ್ದು ಚುನಾವಣೆ ಸಮಯದಲ್ಲಿ ನೀಡಿದ್ದ 165 ಭರವಸೆ ಗಳಲ್ಲಿ 160 ಭರವಸೆಗಳನ್ನು ಪೂರೈಸಿದ್ದಾರೆ ಎಂದರು. ನಂಜನಗೂಡು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ದಾಖಲೆ ಪ್ರಮಾಣದ ಹಣ ಬಿಡುಗಡೆ ಮಾಡಿದರು. ನಗರದ ಎಲ್ಲಾ ವಾರ್ಡುಗಳ ಅಭಿವೃದ್ಧಿಗೆ ಕೋಟ್ಯಾಂತರ ರೂಗಳನ್ನು ಖರ್ಚುಮಾಡಿ ರಸ್ತೆ-ಚರಂಡಿ, ಮತ್ತು ಕುಡಿಯುವ ನೀರು ಮುಂತಾ ದವುಗಳಿಗೆ ಮೊದಲನೇ ಆದ್ಯತೆ ನೀಡುತ್ತಿರು ವುದಾಗಿ ತಿಳಿಸಿದರು. ಮತ್ತೊಮ್ಮೆ ತನ್ನನ್ನು ಆಶೀರ್ವದಿಸಬೇಕೆಂದು ಮನವಿ ಮಾಡಿದರು

ಪಾದಯಾತ್ರೆಯಲ್ಲಿ ನಗರ ಸಭಾ ಅಧ್ಯಕ್ಷೆ ಪುಷ್ಪಲತಾ ಕಮಲೇಶ್, ಕೆಪಿಸಿಸಿ ಸದಸ್ಯ ಅಕ್ಬರ್ ಆಲೀಂ, ದಿ|| ಮಾಜಿ ಸಚಿವ ಎಂ. ಮಹದೇವು ಪುತ್ರ ವಿದ್ಯಾಲಂಕಾರ್, ಮೈಸೂರು ಜಿಲ್ಲಾ ಉಪಾಧ್ಯಕ್ಷ ಎಸ್.ಜಗ ದೀಶ್, ಹಗಿನವಾಳು ಬಸವಣ್ಣ, ತಾಪಂ ಸದಸ್ಯ ಹೆಚ್.ಎಸ್. ಮೂಗಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಭಾಗ್ಯ, ಪ್ರಮೀಳಾ, ಪ್ರದೀಪ್, ನೇರಳೆ ವಿರೇಂದ್ರ, ಹರತಲೆ ಸುರೇಶ, ಮಾಜಿ ಪುರಸಭಾ ಉಪಾಧ್ಯಕ್ಷ ಎನ್ ಇಂದ್ರ, ವಕೀಲ ಮುರಳೀಧರ್, ನಾಗರಾಜಯ್ಯ, ಸಯ್ಯದ್ ನಾಸಿರ್, ನಗರ ಸಭಾ ಸದಸ್ಯರಾದ ರಾಜೇಶ್, ಸುಂದರ್ ರಾಜ್, ದೊಡ್ಡಮಾದಯ್ಯ, ಡಿ.ಎಂ.ರಾಜು, ಚೋಳರಾಜು, ಮಹದೇವು, ಮಂಜುನಾಥ್, ದೇಬೂರು ಸಿದ್ದಲಿಂಗಪ್ಪ, ಎನ್.ವಿ.ತಿಮ್ಮೇ ಗೌಡ, ಗೌಡಿಕೆ ನಾಗಣ್ಣ, ಎ.ಮಂಜುನಾಥ್, ಹಿಂದುಳಿದ ವರ್ಗದ ಮುಖಂಡ ಹುಂಡಿ ಜೆ. ನಾಗರಾಜು, ಗಿರೀಶ್, ಪುರಸಭಾ ಮಾಜಿ ಅಧ್ಯಕ್ಷರು ಗಳಾದ ಶ್ರೀಧರ್, ಪಿ.ಶ್ರೀನಿವಾಸ, ದೊರೆಸ್ವಾಮಿ, ಮುಹಿರ್ ಅಹಮ್ಮದ್, ಸಿ.ಎಂ.ಶಂಕರ್, ಅಶೋಕ ಪುರಂ ರ್ಯಾಂಬೋ ಮಹದೇವು, ದೇವರಾಜು, ಸ್ವಾಮಿ, ಕೂಡ್ಲಾಪುರ ರಾಜು, ಅಬ್ದುಲ್ ಖಾದರ್, ನೂರ್ ಅಹಮ್ಮದ್, ಅನ್ಸರ್ ಅಹಮ್ಮದ್, ಪರ್ವೀಜ್, ಮುನ್ನಾವರ್, ಬಾಬುಮುನ್ನ, ಅಜ್ಗರ್ ಅಹಮ್ಮದ್, ಸುಹೇಲ್, ಅಬ್ದುಲ್ ಘನಿ, ಜಾಬಿ, ಮುಜೀಬ್, ನಿಜಾಮ್ ಮತ್ತಿ ತರ ಪ್ರಮುಖರುಗಳು ಭಾಗವಹಿಸಿದ್ದರು.

Translate »