ನಂಜನಗೂಡು ನ್ಯಾಯಾಲಯ ಆವರಣದಲ್ಲಿ ಶ್ರೀಗಂಧ ಕಳವಿಗೆ ಯತ್ನ
ಮೈಸೂರು

ನಂಜನಗೂಡು ನ್ಯಾಯಾಲಯ ಆವರಣದಲ್ಲಿ ಶ್ರೀಗಂಧ ಕಳವಿಗೆ ಯತ್ನ

May 1, 2018

ನಂಜನಗೂಡು: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಬೆಳೆದಿದ್ದ ಬೆಲೆ ಬಾಳುವ ಶ್ರೀಗಂಧ ಕಳವಿಗೆ ಯತ್ನಿಸಿದ ಖದೀಮರು ಅರ್ಧ ಕೊಯ್ದು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಭಾನುವಾರ ಮಧ್ಯರಾತ್ರಿ ಕಳ್ಳರು ನ್ಯಾಯಾಲಯದ ಆವ ರಣದ ಕಾಂಪೌಂಡ್ ಪಕ್ಕದಲ್ಲಿದ್ದ ಮರವನ್ನು ಕೊಯ್ದು ಸಾಗಿಸಲು ಯತ್ನಿಸಿದ್ದಾರೆ. ಅಷ್ಟರಲ್ಲಿ ರಾತ್ರಿ ಪಾಳಿಯಲ್ಲಿದ್ದ ಕಾವಲುಗಾರರು ಎಚ್ಚೆತ್ತ ಪರಿಣಾಮ ಕಳ್ಳರು ಕಡಿದ ಮರದ ಕೊಂಬೆಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

Translate »