ಬನ್ನೂರು ಈಗ ಬಿಜೆಪಿ ಭದ್ರಕೋಟೆ: ಶಂಕರ್
ಮೈಸೂರು

ಬನ್ನೂರು ಈಗ ಬಿಜೆಪಿ ಭದ್ರಕೋಟೆ: ಶಂಕರ್

May 1, 2018

ಬನ್ನೂರು: ಜೆಡಿಎಸ್ ಭದ್ರ ಕೋಟೆಯಾಗಿದ್ದ ಬನ್ನೂರು ಹೋಬಳಿ ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ ನೇತೃತ್ವದಲ್ಲಿ ಬಿಜೆಪಿಮಯ ಆಗಿದ್ದು, ವಿಧಾನ ಸಭಾ ಚುನಾವಣೆಯಲ್ಲಿ ಇಲ್ಲಿನ ಮತದಾರರು ಕಮಲವನ್ನು ಆಯ್ಕೆ ಮಾಡಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಹೇಳಿದರು.

ತಾಲೂಕಿನ ಬನ್ನೂರು ಪಟ್ಟಣದ ಶ್ರೀ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಮುಖಂಡರಾದ ಬೀಡನಹಳ್ಳಿ ಗ್ರಾಮದ ಯೋಗಾನಂದ, ಮರೀಗೌಡ, ಸಂತೋಷ, ಹೊಂಬಾಳೆ, ವೆಂಕಟೇಗೌಡ ಹಾಗೂ ಇನ್ನಿತರರನ್ನು ಬಿಜೆಪಿ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಬನ್ನೂರು ಹೋಬಳಿಯಲ್ಲಿ ಜೆಡಿಎಸ್ ಪ್ರಾಬಲ್ಯ ಕುಗ್ಗಿದ್ದು, ಬಿಜೆಪಿ ಸಂಘಟನೆ ವಿಸ್ತಾರ ಗೊಂಡಿದೆ. ಸಮಸ್ತ ಒಕ್ಕಲಿಗ ಸಮುದಾಯಗಳ ಮತ ವನ್ನು ಪಡೆದುಕೊಂಡು ಬಿಜೆಪಿ ಚುನಾ ವಣೆಯಲ್ಲಿ ಅತ್ಯಧಿಕ ಮತಗಳ ಅಂತರ ದಲ್ಲಿ ಗೆಲ್ಲುವುದು ಬಹುತೇಕ ನಿಶ್ಚಿತವೆಂದು ಭವಿಷ್ಯ ನುಡಿದರು.

ಕ್ಷೇತ್ರದಾದ್ಯಂತ ಬಿಜೆಪಿಗೆ ಜನ ಬೆಂಬಲ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಬಿಜೆಪಿ ಸೇರಲು ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಮುಂದುವರೆಸಲು, ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲು ಜನರು ಉತ್ಸುಕರಾಗಿದ್ದಾರೆ. ನಮ್ಮ ದಶಕಗಳ ಕಾಲದ ಸಮಾಜ ಸೇವೆಗೆ ಈ ಬಾರಿ ಜನರು ಆಶೀರ್ವದಿಸಿ ಅಧಿಕಾರವನ್ನು ನೀಡಲಿ ದ್ದಾರೆ ಎಂದು ಎಸ್.ಶಂಕರ್ ತಿಳಿಸಿದರು.

ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪ ಗೌಡ ಮಾತಾಡಿದರು. ವಕೀಲ ತೊಟ್ಟವಾಡಿ ಮಹದೇವಸ್ವಾಮಿ, ವಿಎಸ್‍ಎಸ್‍ಎನ್ ಚಾಮೇಗೌಡ, ಮುಖಂಡರಾದ ಬಸವೇ ಗೌಡ, ನಾಗೇಂದ್ರ, ಬಿ.ಆರ್.ವೆಂಕಟೇಶ್, ಪ್ರವೀಣ್, ರಾಜು, ನವೀನ್, ಬಸವೇಗೌಡ, ಗೋವಿಂದ, ನಂದೀಶ, ಬಿ.ವೆಂಕಟೇಶ್, ಲೋಕೇಶ್, ಬನ್ನೂರು ಚೇತನ್, ಆನಂದ, ರಘು, ಬಸವರಾಜು, ಶಿವರಾಜು, ಶ್ರೀನಿ ವಾಸ, ಗೋವಿಂದೇಗೌಡ, ನಾಗೇಂದ್ರ, ಸಬೀನ, ಶೇಖರ, ಮನು, ಮಂಜ, ಸಣ್ಣ ಹಾಗೂ ಇನ್ನಿತರರು ಹಾಜರಿದ್ದರು.

Translate »