ಕಾಂಗ್ರೆಸ್, ಬಿಜೆಪಿ ದೂರವಿಟ್ಟು ಜೆಡಿಎಸ್ ಸರ್ಕಾರ ರಚನೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಿಶ್ವಾಸ
ಮೈಸೂರು

ಕಾಂಗ್ರೆಸ್, ಬಿಜೆಪಿ ದೂರವಿಟ್ಟು ಜೆಡಿಎಸ್ ಸರ್ಕಾರ ರಚನೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಿಶ್ವಾಸ

April 30, 2018

ಮೈಸೂರು: ಈ ಚುನಾವಣೆಯಲ್ಲಿ ಜೆಡಿಎಸ್‍ಗೆ ಬಹುಮತ ಬರಬಹುದು ಅಥವಾ ಬರದೇ ಇರ ಬಹುದು. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿ ಯನ್ನು ದೂರವಿಟ್ಟು ನಾವೇ ಸರ್ಕಾರ ರಚಿಸು ತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮತ ನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್‍ಗೆ ಪೂರಕವಾದ ವಾತಾವರಣವಿದೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷ ಹೆಚ್ಚಿನ ಸ್ಥಾನಗಳಿಸಲಿದೆ. ಕಾಂಗ್ರೆಸ್ ಬಿಜೆಪಿಗಿಂತಲೂ ಹೆಚ್ಚಿನ ಸೀಟು ನಮಗೆ ಸಿಗಲಿದೆ. ಜೆಡಿ ಎಸ್‍ಗೆ ಬಹುಮತ ಲಭಿಸದಿದ್ದರೂ, ಸರ್ಕಾರ ವನ್ನು ನಮ್ಮ ಪಕ್ಷವೇ ಮುನ್ನಡೆಸಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ದೂರವಿಟ್ಟು ಬಿಎಸ್‍ಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಸಹಾಯದಿಂದ ಅಧಿಕಾರ ನಡೆಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಕೆಲವು ಸಂಸ್ಥೆಗಳು ಸಮೀಕ್ಷೆ ನಡೆಸಿ ಜೆಡಿಎಸ್ ಈ ಚುನಾವಣೆಯಲ್ಲಿ ಜೆಡಿಎಸ್ 36 ಅಥವಾ 38 ಅಥವಾ 40 ಸ್ಥಾನ ಪಡೆಯುತ್ತದೆ ವರದಿ ನೀಡಿವೆ. ನಾಲ್ಕಾಣ ಏಜೆನ್ಸಿಗಳಿಂದ ಸಮೀಕ್ಷೆ ನಡೆದಿದೆ. ಇಂತಹ ಸಮೀಕ್ಷೆಗಳ ವರದಿಗೆ ಪ್ರತಿಕ್ರಿಯಿಸುವುದಿಲ್ಲ. ಅಲ್ಲದೆ ಯಾವುದೇ ಸಂಸ್ಥೆ ನಡೆಸುವ ಚುನಾವಣಾ ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು. ರಾಜ್ಯದಲ್ಲಿ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಲಾ ಐದು ವರ್ಷ ಆಡಳಿತ ನಡೆಸಿವೆ. ಈ ಎರಡು ಪಕ್ಷಗಳು ತಮಗೆ ದೊರೆತಿದ್ದ ಅಧಿಕಾರಾ ವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಯಾವುದೇ ಆಸ್ಪದ ನೀಡಲಿಲ್ಲ ಎಂದು ದೂರಿದರು. ನಮ್ಮಿಂದ ಮಾತ್ರ ಮುಸ್ಲಿಂ ಸಮುದಾಯದ ಬೆಳವಣ ಗೆ ಸಾಧ್ಯ ಎಂದು ಕಾಂಗ್ರೆಸ್ ಹೇಳುತ್ತಿದೆ. ಅವರು ಮುಸ್ಲಿಂ ಸಮುದಾಯ ವನ್ನು ಗುತ್ತಿಗೆ ಪಡೆದಿದ್ದಾರಾ ಎಂದು ಪ್ರಶ್ನಿಸಿದ ಅವರು, ದತ್ತ ಪೀಠದ ಸಮಸ್ಯೆ ಉದ್ಭವಿಸಲು ಕಾಂಗ್ರೆಸ್ ನಾಯಕರೇ ಕಾರಣ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಯಾಗಿದ್ದ ವೇಳೆ ಈ ಸಮಸ್ಯೆ ಹುಟ್ಟಿ ಕೊಂಡಿತ್ತು ಎಂದು ತಿಳಿಸಿದರು.

ಜೆಡಿಎಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಬೆದರಿಕೆ ಹಾಕುತ್ತಿದೆ. ಭಟ್ಕಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ಹೆದರಿಸಿ ನಾಮಪತ್ರ ಹಿಂಪಡೆಯುವಂತೆ ಮಾಡಿದೆ. ಗೌರಿಬಿದನೂರಿನಲ್ಲಿ ಪಕ್ಷದ ಕಾರ್ಯಕರ್ತ ರಾಮರೆಡ್ಡಿಯನ್ನು ಕೊಲೆ ಮಾಡುವ ಮೂಲಕ ಜೆಡಿಎಸ್ ಕಾರ್ಯಕರ್ತರನ್ನು ಹೆದರಿಸುವ ಕೆಲಸ ನಡೆಯುತ್ತಿದೆ. ಅಲ್ಲದೆ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆರೋಪಿಸಿದ ಅವರು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಪ್ರಾದೇಶಿಕ ಪಕ್ಷದಲ್ಲೇ ಬೆಳೆದಿದ್ದಾರೆ. ಆದರೆ, ಈಗ ಪ್ರಾದೇಶಿಕ ಪಕ್ಷವನ್ನೇ ಕೊನೆಕಾಣ ಸಲು ಮುಂದಾಗಿದ್ದಾರೆ. ರಾಹುಲ್ ಗಾಂಧಿಗೆ ಏನೂ ಗೊತ್ತಿಲ್ಲ. ರಾಜ್ಯ ನಾಯಕರು ಚೀಟಿಯಲ್ಲಿ ಬರೆದುಕೊಡುವುದನ್ನು ಓದುತ್ತಿದ್ದಾರೆ ಎಂದು ಛೇಡಿಸಿದರು.

ರಾಜ್ಯದ ರಾಜಕೀಯ ಇತಿಹಾಸದಲ್ಲೆ ಕೆಪಿಸಿಸಿ ಅಧ್ಯಕ್ಷರು ಸೋತಿರಲಿಲ್ಲ. ಆದರೆ, ಕಳೆದ ಚುನಾವಣೆಯಲ್ಲಿ ಜಿ.ಪರಮೇಶ್ವರ್ ಸೋತರು. ಇದಕ್ಕೆ ಕಾರಣ ಏನು? ಎಂದು ಪ್ರಶ್ನಿಸಿದರಲ್ಲದೆ, ಚಿತ್ರ ನಟ ಅಂಬರೀಷ್ ಒಳ್ಳೆ ಸ್ನೇಹಿತರಾಗಿದ್ದಾರೆ. ಅವರು ನಮ್ಮ ಬಗ್ಗೆ ನಾಲ್ಕು ಒಳ್ಳೆ ಮಾತು ಆಡಿದ ಕೂಡಲೇ ಅವರು ಜೆಡಿಎಸ್‍ಗೆ ಬರುತ್ತಾರೆ ಎನ್ನು ವುದು ತಪ್ಪು. ಅವರನ್ನು ಮೊದಲು ರಾಜ ಕೀಯಕ್ಕೆ ಕರೆ ತಂದು ರಾಮನಗರದಿಂದ ಸ್ಪರ್ಧಿಸುವಂತೆ ಮಾಡಿದ್ದು ಕುಮಾರ ಸ್ವಾಮಿ. ಕಾವೇರಿ ವಿಚಾರವಾಗಿ ಕೇಂದ್ರದ ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದನ್ನು ಮೆಚ್ಚುತ್ತೇನೆ ಎಂದರು.

ಕಾಂಗ್ರೆಸ್ ಭ್ರಮೆ: ಜೆಡಿಎಸ್ ಬಿ ಟೀಂ ಎನ್ನುವುದು ಕಾಂಗ್ರೆಸ್ ಭ್ರಮೆಯಾಗಿದೆ. ನಾವು ಬಿ ಟೀಂ ಆಗಿದ್ದರೆ ನಾನೇಕೆ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರ ಮನೆಗೆ ಹೋಗ ಬೇಕಿತ್ತು ಎಂದು ಪ್ರಶ್ನಿಸಿದ ಅವರು, ನಮ್ಮ ಜತೆ ಮಾಯವತಿ, ಕೆ.ಚಂದ್ರಶೇಖರ್ ರಾವ್, ಚಂದ್ರಬಾಬು ನಾಯ್ಡು ಇದ್ದಾರೆ ಹೊರೆತು ನಾವು ಯಾವುದೇ ಎ ಮತ್ತು ಬಿ ಟೀಂ ಅಲ್ಲ ಎಂದು ಸ್ಪಷ್ಟಪಡಿಸಿ ದರಲ್ಲದೆ, ನಮ್ಮಪ್ಪ ನನಗೆ ಗೌಡ ಅಂತ ಹೆಸರಿಟ್ಟಿ ದ್ದಾರೆ. ಆದರೆ ನಾನು ಯಾವ ವರ್ಗಕ್ಕೆ ಮೋಸ ಮಾಡಿದ್ಧೇನೆ ಹೇಳಿ.? ಹಿಂದಿನ ಜನ್ಮದ ಪಾಪದ ಫಲವಾಗಿ ಈಗ ನನಗೆ ಬೆನ್ನಿಗೆ ಚೂರಿ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಈ ಜನ್ಮದಲ್ಲಿ ನಾನು ಯಾವ ಪಾಪ ಮಾಡಿಲ್ಲ ಎಂದು ಹೇಳಿದರು.

ನಿಮ್ಮಪ್ಪನಾಣೆ ಜೆಡಿಎಸ್ ಅಧಿಕಾರಕ್ಕೆ ಬರೋಲ್ಲ ಎಂಬ ಮುಖ್ಯಮಂತ್ರಿ ಸಿದ್ದ ರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ನಾನು ಅವರನ್ನು ಪ್ರೀತಿಯಿಂದ ಸಿದ್ದರಾಮು ಎಂದು ಕರೆಯು ತ್ತಿದ್ದೆ. ಅದಕ್ಕೆ ಅವರು ಕೊಡುತ್ತಿರುವ ಬೆಲೆ ಇದು ಎಂದು ಮಾರ್ಮಿಕವಾಗಿ ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಇದೀಗ ಆಣೆ ಕಾಲ ಹೋಯ್ತು. ಈಗ ಏನಿದ್ರು ನೋಟ್ ಕಾಲ ಎಂದು ಚುನಾವಣೆಯಲ್ಲಿ ಕಾಂಚಾಣ ಪ್ರಾಬಲ್ಯ ಮೆರೆಯುತ್ತಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.

ರಾಜ್ಯದಲ್ಲಿ ನಡೆಯುತ್ತಿರುವ ಐಟಿ ದಾಳಿ ಸಂಬಂಧ ಪ್ರತಿಕ್ರಿಸಿದ ಅವರು, ವರ್ಷಪೂರ್ತಿ ಒಂದಲ್ಲ ಒಂದು ಚುನಾವಣೆ ನಡೆಯುತ್ತಿರುತ್ತದೆ. ಐಟಿ ದಾಳಿ ತಪ್ಪು ಎಂದರೆ ಹೇಗೆ? ಐಟಿ ದಾಳಿಗೂ ರಾಜಕಾರಣಕ್ಕೂ, ಚುನಾ ವಣೆಗೂ ಸಂಬಂಧವಿಲ್ಲ ಎಂದು ವಿಶ್ಲೇಷಿಸಿದ ಅವರು, ಚಾಮುಂಡೇ ಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದ ರಾಮಯ್ಯರನ್ನು ಸೋಲಿಸಲು ನಮ್ಮ ಜ್ಯೂನಿಯರ್ ದೇವೇಗೌಡನೇ (ಜಿ.ಟಿ.ದೇವೇಗೌಡ) ಸಾಕು. ನಾನು ಪ್ರಚಾರಕ್ಕೆ ಹೋಗುವುದೇ ಬೇಡ. ನಮ್ಮ ಅಭ್ಯರ್ಥಿ ಜಿ.ಟಿ.ದೇವೇಗೌಡ ಸಿದ್ದರಾಮ ಯ್ಯರನ್ನು ಎದುರಿಸಲು ಸಮರ್ಥನಾಗಿದ್ಧಾನೆ ಎಂದ ಅವರು, ನೆನ್ನೆ ಅಡಗೂರು ಹೆಚ್.ವಿಶ್ವನಾಥ್ ಪರ ಹುಣಸೂರು, ಬಿಳಿಕೆರೆ ಭಾಗದಲ್ಲಿ ಪ್ರಚಾರ ಮಾಡಿದೆ. ಜನರಿಂದ ಉತ್ತಮ ಪ್ರೋತ್ಸಾಹ ದೊರೆ ಯಿತು. ಅಲ್ಲಿನ ಮೆರವಣ ಗೆಗಳಲ್ಲಿ ಶೇ.70 ರಷ್ಟು ಮಹಿಳೆಯರು ಸೇರಿದ್ದು ವಿಶೇಷವಾಗಿತ್ತು ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಟಿ. ದೇವೇಗೌಡ, ಚಾಮರಾಜ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರೊ.ಕೆ.ಎಸ್.ರಂಗಪ್ಪ ಇದ್ದರು.

Translate »