ದಲಿತ ಮತಗಳ ವಿಭಜನೆಗೆ ಅವಕಾಶ ಬೇಡ: ಹೆಚ್‍ಸಿಎಂ
ಮೈಸೂರು

ದಲಿತ ಮತಗಳ ವಿಭಜನೆಗೆ ಅವಕಾಶ ಬೇಡ: ಹೆಚ್‍ಸಿಎಂ

April 26, 2018

ತಿ.ನರಸೀಪುರ: ಪ್ರಸಕ್ತ ವಿಧಾನಸಭಾ ಚುನಾವಣೆ ಕೋಮುವಾದ ಮತ್ತು ಜಾತ್ಯಾತೀತವಾದದ ನಡುವೆ ನಡೆ ಯುತ್ತಿದೆ. ದಲಿತರು ಮತಗಳ ವಿಭಜನೆಗೆ ಅವಕಾಶವನ್ನು ನೀಡಬಾರದು ಎಂದು ಲೋಕೋಪಯೋಗಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹ ದೇವಪ್ಪ ಕಿವಿಮಾತು ಹೇಳಿದರು.

ತಾಲೂಕಿನ ಮಾಡ್ರಳ್ಳಿ ಗ್ರಾಮದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಪಾದಯಾತ್ರೆ ನಡೆಸಿ, ಮತಯಾಚಿಸಿದ ನಂತರ ದಲಿತ ಸಮುದಾಯದವರೊಂದಿಗೆ ಮಾತನಾಡಿ, ಬಿಜೆಪಿಯನ್ನು ಅಧಿಕಾರದಿಂದ ದೂರ ವಿಡಲು ದಲಿತರ ಮತ ವಿಭಜನೆಯಾಗ ಬಾರದು. ಆದ್ದರಿಂದ ಈ ಬಾರಿ ಜೆಡಿ ಎಸ್-ಬಿಎಸ್ಪಿ ಮೈತ್ರಿಕೂಟವನ್ನು ಬೆಂಬ ಲಿಸಬಾರದೆಂದು ಕರೆ ನೀಡಿದರು.

ಬಹುಜನರನ್ನು ರಾಜಕೀಯವಾಗಿ ಜಾಗೃತಿಗೊಳಿಸುವ ಚಳುವಳಿ ಮತ್ತು ಸಂಘಟನೆಯನ್ನು ಬಿಎಸ್ಪಿ ಮಾಡುತ್ತಿರು ವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಉತ್ತರ ಪ್ರದೇಶದಲ್ಲಿ ಸಿಎಂ ಆಗಿದ್ದ ಮಾಯಾವತಿ ಅವರು ಪ್ರಧಾನಮಂತ್ರಿಯಾದರೂ ಸ್ವಾಗತಿಸು ತ್ತೇವೆ. ರಾಜ್ಯದಲ್ಲಿ ರೈತರು, ಎಲ್ಲಾ ವರ್ಗದ ಬಡವರು, ಅಲ್ಪ ಸಂಖ್ಯಾತರು ಹಾಗೂ ದಲಿತರ ಪರವಾಗಿ ಕೆಲಸವನ್ನು ಮಾಡುತ್ತಿ ರುವ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಜಾತ್ಯಾತೀತ ನೆಲಗಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತನೆ ಮಾಡಬೇಕೆಂದು ಮನವಿ ಮಾಡಿದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಎಸ್. ಶಿವಮೂರ್ತಿ, ಮಾಜಿ ಪ್ರಧಾನ ಎಂ.ಡಿ. ಬಸವರಾಜು, ಜಿ.ಪಂ ಸದಸ್ಯ ಮಂಜು ನಾಥನ್, ಮಾಜಿ ಸದಸ್ಯೆ ಎಂ.ಸುಧಾ ಮಹದೇವಯ್ಯ, ತಾ.ಪಂ ಮಾಜಿ ಸದಸ್ಯ ಕೆ.ಜಿ.ವೀರಣ್ಣ, ಮೂಗೂರು ಡೈರಿ ಕಾರ್ಯದರ್ಶಿ ಎಂ.ನಾಗೇಂದ್ರ, ಗ್ರಾ.ಪಂ ಸದಸ್ಯ ರಾದ ಎಂ.ಪಿ.ನಿಂಗಪ್ಪ, ಎಂ.ಬಿ.ಸಾಗರ್, ಮೃಗಾಲಯ ಪ್ರಾಧಿ ಕಾರದ ನಿರ್ದೇಶಕಿ ಲತಾ ಜಗದೀಶ್, ಪುರಸಭಾ ಸದಸ್ಯ ರಾಘವೇಂದ್ರ, ಗುತ್ತಿಗೆದಾರ ಮೊಹಮ್ಮದ್ ಆಸಿಫ್, ಮುಖಂಡರಾದ ಟಿ.ಬೆಟ್ಟಹಳ್ಳಿ ನಂಜಮ್ಮಣ ್ಣ, ಕೇತಹಳ್ಳಿ ಸಿದ್ಧಶೆಟ್ಟಿ, ಜೆ.ಅನೂಪ್‍ಗೌಡ, ದಯಾನಂದ, ಡಾ.ಕೆ.ಎನ್. ಬಸವ ರಾಜು, ಸಿ.ಮಹದೇವ, ಎಂ.ಮಹೇಶ ಹಾಗೂ ಇನ್ನಿತರರು ಹಾಜರಿದ್ದರು.

Translate »