ಗ್ರಾಮಗಳಲ್ಲಿ ಕಾಂಗ್ರೆಸ್‍ನ ಪುಟ್ಟರಂಗಶೆಟ್ಟಿ ಮತ ಬೇಟೆ
ಚಾಮರಾಜನಗರ

ಗ್ರಾಮಗಳಲ್ಲಿ ಕಾಂಗ್ರೆಸ್‍ನ ಪುಟ್ಟರಂಗಶೆಟ್ಟಿ ಮತ ಬೇಟೆ

April 26, 2018

ಚಾಮರಾಜನಗರ: ವಿಧಾನಸಭಾ ಕ್ಷೇತ್ರದ ಚಂದಕವಾಡಿ ಹಾಗೂ ಹೆಬ್ಬಸೂರು ಗ್ರಾಪಂ ವ್ಯಾಪ್ತಿಗಳ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಬಿರುಸಿನ ಮತಯಾಚಿಸಿದರು.

ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಲು ಹೋದ ಸಂದರ್ಭದಲ್ಲಿ ಹಾರ ತುರಾಯಿಗಳು, ಬೆಲ್ಲದಾರತಿ ಮಾಡಿ ಅದ್ದೂರಿ ಸ್ವಾಗತ ಕೋರಿ ನಾವು ಈ ಬಾರಿಯೂ ನಿಮ್ಮ ಜಯಗಳಿಸಲು ಶ್ರಮಿಸುತ್ತೇವೆಂದು ಭರವಸೆ ನೀಡುವ ದೃಶ್ಯಗಳು ಸರ್ವೇ ಸಾಮಾನ್ಯ ವಾಗಿ ಕಾಣಬರುತ್ತಿದ್ದವು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಮೂರನೇ ಬಾರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು, ಕಳೆದ ಎರಡು ವರ್ಷ ಗಳಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ನಾನು ಮತ್ತು ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನನಗೆ ಮತ್ತು ನನ್ನ ಗೆಲುವಿಗೆ ಶ್ರೀರಕ್ಷೆಯಾಗಿವೆ ಎಂದರು.

ಮುಂದಿನ ಅವಧಿಗೆ ನನ್ನನ್ನು ಚುನಾಯಿಸುವ ಮೂಲಕ ನಿಮ್ಮಗಳ ಸೇವೆ ಮಾಡಲು ಸಹಕರಿಸಬೇಕೆಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಸಿದ್ದಪ್ಪಾಜಿ, ಉಪಾಧ್ಯಕ್ಷ ನಾಗ ನಾಯಕ, ಮುಖಂಡರಾದ ಬಸವರಾಜು, ಕಪಿನಿನಾಯಕ, ಕಮಲೇಶ್, ಅನ್ವರ್ ಪಾಷ, ನಂಜುಂಡಸ್ವಾಮಿ, ವೀರಭದ್ರಸ್ವಾಮಿ, ಮಲ್ಲಣ್ಣ, ಸೋಮೇಶ್ವರ್, ಬಂಗಾರು, ಸುಬ್ಬನಾಯಕ, ಶೇಷಣ್ಣ, ರಮೇಶ್, ಮಹೇಶ್, ಕಾಗಲವಾಡಿ ಚಂದ್ರು, ಕೋಡಿಮೋಳೆ ಗೋವಿಂದಶೆಟ್ಟಿ, ಪ್ರಕಾಶ್, ರಂಗಸ್ವಾಮಿ, ಸ್ವಾಮಿ, ಡಿಸಿಸಿ ಸದಸ್ಯ ನಾಗಯ್ಯ, ನಟರಾಜು, ನಾಗರಾಜು, ಮಾಜಿ ತಾಪಂ ಅಧ್ಯಕ್ಷ ಚಿಕ್ಕಮಹದೇವ್, ಸದಸ್ಯ ಆರ್.ಮಹದೇವ್, ಜಿಪಂ ಮಾಜಿ ಸದಸ್ಯರಾದ ಅರಕಲವಾಡಿ ಸೋಮನಾಯಕ, ಕಾವೇರಿ, ಶಿವಕುಮಾರ್, ಸೋಮಲಿಂಗಪ್ಪ, ಮಾಜಿ ಗ್ರಾಪಂ ಅಧ್ಯಕ್ಷ ಸಮೀತ್ ಕುಮಾರ್ ತಾಪಂ ಸದಸ್ಯ ಬಾಲಚಂದ್ರ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

Translate »