ತಮ್ಮ ಅಧಿಕಾರಾವಧಿಯಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕರೋಹಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಹೆಚ್.ಸಿ. ಮಹದೇವಪ್ಪ
ಮೈಸೂರು

ತಮ್ಮ ಅಧಿಕಾರಾವಧಿಯಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕರೋಹಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಹೆಚ್.ಸಿ. ಮಹದೇವಪ್ಪ

April 26, 2018

ತಿ.ನರಸೀಪುರ: ಜನರು ಕೊಟ್ಟ ಅಧಿಕಾರದಿಂದ ತಮ್ಮ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಪಟ್ಟಣ ಮತ್ತು ನಗರ ಪ್ರದೇಶಗಳ ಸ್ವರೂಪವನ್ನು ನೀಡಿ ದ್ದೇನೆ. ಗ್ರಾಮೀಣ ಜನರ ಸಮಸ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಗೆಹರಿಸಲು ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿಯೂ ಕಾಂಗ್ರೆಸ್ ಪಕ್ಷವನ್ನು ಬೆಂಬ ಲಿಸಬೇಕು ಎಂದು ಸಚಿವ, ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹ ದೇವಪ್ಪ ಮನವಿ ಮಾಡಿದರು.

ತಾಲೂಕಿನ ಕರೋಹಟ್ಟಿ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿ ಮಾತನಾಡಿ, ಸಾಮಾನ್ಯ ವರ್ಗಗಳ ಜನರು ವಾಸಿಸುವ ಬಡಾವಣೆಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಮಂಜೂರು ಮಾಡಿದ್ದು, ಚುನಾವಣೆಯ ನಂತರ ಕಾಮಗಾರಿ ಆರಂಭವಾಗಲಿದೆ. ಬಡವರಿಗೆ ಸೂರು ಕಲ್ಪಿಸಲು ಹೆಚ್ಚುವರಿಯಾಗಿ ಮತ್ತಷ್ಟು ವಸತಿ ಯೋಜನೆಗಳನ್ನು ಮಂಜೂರು ಮಾಡಲಾಗುವುದು ಎಂದರು.

ರಾಜಕೀಯವಾಗಿ ಕೈ ಹಿಡಿದ ಮೂಗೂರು ಹೋಬಳಿ ಜನರ ಬಗ್ಗೆ ಅಪಾರವಾದ ಗೌರವ ಹಾಗೂ ಅಭಿಮಾನವಿದೆ. ಜನರು ನೀಡಿದ ರಾಜಕೀಯ ಅಧಿಕಾರವನ್ನು ಜನರಿ ಗಾಗಿ ಮತ್ತು ಅಭಿವೃದ್ಧಿಗೆ ಬಳಸಿಕೊಂಡಿ ದ್ದೇನೆ. ಸರ್ಕಾರದ ಯೋಜನೆಗಳನ್ನು ಎಲ್ಲಾ ವರ್ಗದ ಜನರಿಗೆ ತಲುಪಿಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ರೈತಪರ ಮತ್ತು ಬಡವರ ಪರವಾಗಿ ಉತ್ತಮ ಯೋಜನೆ ಗಳನ್ನು ರೂಪಿಸಿದ್ದಾರೆ. ಇಂತಹ ಜನಪರ ಯೋಜನೆಗಳನ್ನು ಮುಂದುವರೆಸಲು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕೆಂದು ಡಾ.ಹೆಚ್.ಸಿ. ಮಹದೇವಪ್ಪ ಮನವಿ ಮಾಡಿದರು.

ಕರೋಹಟ್ಟಿ ಗ್ರಾಮ ಸೇರಿದಂತೆ ಕೇತಹಳ್ಳಿ, ತಲಕಾಡು ಹೋಬಳಿಯ ಗೆಡ್ಡೆಹುಂಡಿ ಗ್ರಾಮದಲ್ಲಿ ಮಹದೇವಪ್ಪ ಅವರು ಕಾರ್ಯಕರ್ತರು ಹಾಗೂ ಮುಖಂಡ ರೊಂದಿಗೆ ಪಾದಯಾತ್ರೆ ನಡೆಸಿ ಮತ ಯಾಚಿಸಿದರು. ಯುವ ಮುಖಂಡ ಸುನೀಲ್ ಬೋಸ್, ಜಿ.ಪಂ ಸದಸ್ಯ ಮಂಜುನಾಥನ್, ಮಾಜಿ ಪ್ರಧಾನ ಎಂ.ಡಿ.ಬಸವರಾಜು, ಕೆಪಿಸಿಸಿ ಉಪಾಧ್ಯಕ್ಷ ಹೊನ್ನನಾಯಕ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಎಸ್.ಶಿವ ಮೂರ್ತಿ, ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ಎಸ್ಸಿ/ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ಸೋಸಲೆ ಮಹದೇವಸ್ವಾಮಿ, ಗ್ರಾ.ಪಂ ಮಾಜಿ ಅಧ್ಯಕ್ಷ ಮಹೇಶ, ಮುಖಂಡರಾದ ಪಿ.ಪುಟ್ಟರಾಜು, ಶೇಷಾಧ್ರಿ ಯಾದವ್, ಕೇತಹಳ್ಳಿ ಮಹದೇವಪ್ಪ, ಸಿದ್ಧಶೆಟ್ಟಿ, ಮಧು, ಕನ್ನಡ ಪುಟ್ಟಸ್ವಾಮಿ, ಅಂದಾನಿ, ಲಕ್ಷ್ಮೀ ನಾರಾಯಣ, ಹದಿನಾರು ಶಿವಕುಮಾರ್, ಕರೋಹಟ್ಟಿ ನಾಗೇಶ ಹಾಗೂ ಇನ್ನಿತರರು ಹಾಜರಿದ್ದರು.

Translate »