ನಂಜನಗೂಡಿಗೆ ಡಾ.ಹೆಚ್.ಸಿ.ಮಹದೇವಪ್ಪ ಭೇಟಿ  ಬಸವ ಭವನದ ಕಾಮಗಾರಿ ವೀಕ್ಷಣೆ
ಮೈಸೂರು

ನಂಜನಗೂಡಿಗೆ ಡಾ.ಹೆಚ್.ಸಿ.ಮಹದೇವಪ್ಪ ಭೇಟಿ  ಬಸವ ಭವನದ ಕಾಮಗಾರಿ ವೀಕ್ಷಣೆ

October 30, 2018

ನಂಜನಗೂಡು:  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿ.ನರಸೀ ಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತ ನಂತರ ಹಲವು ತಿಂಗಳ ಕಾಲ ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರು ಭಾನುವಾರ ಮೈಸೂರಿ ನಲ್ಲಿ ಅಭಿಮಾನಿಗಳು ನಂಜನಗೂಡಿಗೆ ಆಗಮಿಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಭೇಟಿ ನೀಡಿ ನಂಜನಗೂಡು ಕಾಂಗ್ರೆಸ್ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ನಗರಕ್ಕೆ ಆಗಮಿಸುತ್ತಿದ್ದಂತೆಯೇ ಹುಲ್ಲಹಳ್ಳಿ ರಸ್ತೆಯಲ್ಲಿ ನೂರಾರು ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ನಂತರ ಅವರು ಮುಡಾ ಬಡಾವಣೆಯಲ್ಲಿ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಬಸವ ಭವನದ ಕಾಮಗಾರಿ ವೀಕ್ಷಿಸಿದರು. ಸಂಬಂಧಪಟ್ಟ ಗುತ್ತಿಗೆದಾರರಿಗೆ ಇಲ್ಲಿನ ಬಸವ ಭವನದ ಕಾಮಗಾರಿಯ ಗುಣ ಮಟ್ಟ ಕಾಪಾಡಿಕೊಳ್ಳುವಂತೆ ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಅಧಿಕಾರವಿರಲಿ, ಬಿಡಲಿ ನನ್ನ ತವರಾದ ನಂಜನಗೂಡು ತಾಲೂಕಿನ ಅಭಿವೃದ್ಧಿಗೆ ಸಂಪೂರ್ಣ ಗಮನ ಹರಿಸುತ್ತೇನೆ. ನಾನು ಸಚಿವನಾಗಿದ್ದಾಗ ನಾನು ಹುಟ್ಟಿದ ಊರಿನ ಋಣ ತೀರಿಸಬೇಕೆಂಬ ದೃಷ್ಟಿಯಿಂದ ನೂರಾರು ಕೋಟಿ ರೂ.ಗಳ ಅನುದಾನವನ್ನು ನೀಡಿ ಈ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿರುವು ದಾಗಿ ತಿಳಿಸಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ಬಸವ ಭವನ ಇ¯್ಲದಿರುವುದು ನನ್ನ ಗಮನಕ್ಕೆ ಬಂತು. ಅಲ್ಲದೆ ಈ ಎರಡೂ ಜಿಲ್ಲೆಗಳ ಮುಖಂಡರು ಗಳ ಮನವಿ ಮತ್ತು ಒತ್ತಾಯವು ಸರ್ಕಾರ ದಲ್ಲಿತ್ತು. ಇದನ್ನು ಮನಗಂಡು ನಾನು ನಂಜನ ಗೂಡು ನಗರದ ಮುಡಾ ಬಡಾವಣೆಯಲ್ಲಿ ಸುಂದರವಾದ ಪರಿಸರ ಹೊಂದಿರುವ ನಿವೇ ಶನದಲ್ಲಿ ಹೈಟೆಕ್ ಬಸವ ಭವನ ನಿರ್ಮಾಣ ಮಾಡಲು ಸರ್ಕಾರದಿಂದ ಈಗಾಗಲೇ ಎರಡು ಕೋಟಿ ರೂ ಗಳನ್ನು ಮಂಜೂರು ಮಾಡಿಸಿದ್ದು, ಈಗ ಕಾಮಗಾರಿ ಭರದಿಂದ ನಡೆಯುತ್ತಿದ್ದು ಇಲ್ಲಿ ಸುಂದರವಾದ ಬಸವ ಭವನ ನಿರ್ಮಾಣವಾಗಲಿದೆ ಎಂದರು.

ಈಗ ನಡೆಯುತ್ತಿರುವ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅವಕಾಶವಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಹೊಂದಾಣಿಕೆ ಯಿಂದ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದರು. ಮುಂಬರುವ ದಿನಗಳಲ್ಲಿ ನಂಜನಗೂಡು ತಾಲೂಕು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಒತ್ತು ನೀಡುತ್ತೇನೆ ಎಂದರು.
ಸಿದ್ದರಾಮಯ್ಯನವರ ಜೊತೆ ಚೆನ್ನಾಗಿದ್ದೇನೆ: ನನ್ನ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಂಧವ್ಯ ಎಂದೆಂದಿಗೂ ಚೆನ್ನಾಗಿದೆ. ಯಾವುದೇ ಅನುಮಾನ ಬೇಡ, ಬಿಜೆಪಿಗೆ ಸೇರುವ ಪ್ರಶ್ನೆಯೇ ಇಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು

ಕಾಂಗ್ರೆಸ್ ಮುಖಂಡ ದೇವನೂರು ಬುಲೆಟ್ ಮಹದೇವಪ್ಪ, ತರಗನಹಳ್ಳಿ ನಂಜುಂಡ ಸ್ವಾಮಿ, ಹಾಲತ್ತೂರುಹುಂಡಿ ನಂಜುಂಡಸ್ವಾಮಿ, ಧರ್ಮದರ್ಶಿ ಗಿರೀಶ್, ಕಳಲೆ ಬೈರನಾಯಕ, ಚೋಳರಾಜು, ಹುಳಿಮಾವು ಮಹದೇವ ಸ್ವಾಮಿ, ಪಟೇಲ್ ಮಹದೇವಪ್ಪ, ಕೆ.ಬಿ ಸ್ವಾಮಿ, ಎ.ಮಂಜುನಾಥ್, ಗೌ|| ನಾಗಣ್ಣ, ದೇವನೂರು ಮಹದೇವಪ್ಪ, ವೀರಶೈವ ಮಹಾಸಭಾದ ಅಧ್ಯಕ್ಷ ಹಗಿವಾಳು ಚೆನ್ನಪ್ಪ, ನಂಜಮ್ಮಣಿ ಗುರುಮಲ್ಲಪ್ಪ, ದೇವನೂರು ಕೆ.ಜಿ.ಶಿವಯ್ಯ, ಹಲ್ಲರೆ ಮಹೇಶ್,ಕಲೀಲ್, ರಾಂಪುರ ಪಟೇ¯ರು, ಕಡಜಟ್ಟಿ ಶಿವ ಕುಮಾರ್,ಪಾಪಣ್ಣ, ಮಹೇಶ್, ಹಿಮ್ಮಾವು ಕೆಂಪಣ್ಣ,ಯಾಲಹಳ್ಳಿ ನಾಗೇಂದ್ರ, ಕಪ್ಪಸೋಗೆ ಮಹೇಶ್, ಕಣೇನೂರು ಪ್ರಭು,ಕವಲಂದೆ ಫಾಯಜ್,ಗಟ್ಟವಾಡಿಪುರ ಬಸವಣ್ಣ, ಬಸವಪುರ ಗುರುಸಿದ್ದಪ್ಪ,ಹೆಜ್ಜಿಗೆ ರವಿ, ಕೃಷ್ಣ, ರಘು ಮತ್ತಿತರರು ಉಪಸ್ಥಿತರಿದ್ದರು.

ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ನಂಜನಗೂಡು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿಯಿಂದ ಭೇಟಿ ಕೊಟ್ಟಿರುವುದು ಸ್ವಾಗತಾರ್ಹ. ಆದರೆ ಸ್ಥಳೀಯ ಶಾಸಕನಾದ ನನ್ನ ಗಮನಕ್ಕೆ ತಂದು ಅಭಿವೃದ್ಧಿ ಪರಿ ಶೀಲನೆಗೆ ತಿಳಿಸಿದ್ದರೆ ನಾನು ಮಾಜಿ ಸಚಿವರಿಗೆ ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದೆ ಎಂದು ಶಾಸಕ ಬಿ.ಹರ್ಷವರ್ಧನ್ ಪ್ರತಿಕ್ರಿಯಿಸಿದ್ದಾರೆ.

Translate »