ಎಚ್.ಡಿ.ಕೋಟೆ: ಡಿ.ಬಿ.ಕುಪ್ಪೆ ಗ್ರಾಮದ ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಪ್ರತಿಭಾ ಅವರನ್ನು ಇಲ್ಲೇ ಮುಂದುವರೆಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸುಂದರ್ ತಿಳಿಸಿದರು. ತಾಲೂಕಿನ ಗಡಿ ಭಾಗ ಡಿ.ಬಿ.ಕುಪ್ಪೆ ಗ್ರಾಮದ ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಪೋಷಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಮಮತಾರವರ ಮೌಖಿಕ ಆದೇಶದ ಮೇರೆಗೆ ತಾವು ಇಲ್ಲಿಗೆ ಬಂದಿದ್ದೇನೆ. ಅವರು ಸಮಸ್ಯೆ ಪರಿಹರಿಸುವಂತೆ ತಮಗೆ ತಿಳಿಸಿದ್ದರು. ಶಾಲೆಯ 8ನೇ ತರಗತಿ ಮಕ್ಕಳಿಗೆ ಶಾಲಾ ಲಾಗ್‍ಇನ್ ಬಳಸಿ, 8ನೇ ತರಗತಿ ಮಕ್ಕಳಿಗೆ ವರ್ಗಾವಣೆ ಪತ್ರ ಕೊಟ್ಟಿರುವ ಕ್ಷೇತ್ರ ಸಮನ್ವ ಯಾಧಿಕಾರಿ ಶಶಿಧರ್ ವಿರುದ್ಧ ಉಪ ನಿರ್ದೇ ಶಕರಿಗೆ ಪತ್ರ ಬರೆಯಲಾಗುವುದು ಎಂದರು.
ಮಾಜಿ ಶಾಸಕ ಬೆಂಬಲ: ಇಂದಿನ ಪ್ರತಿ ಭಟನೆಗೆ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಬೆಂಬಲ ಕೊಟ್ಟಿದ್ದು, ಪ್ರತಿಭಟನೆಯಲ್ಲಿ ಮುಖಂಡ ರಾದ ಶ್ಯಾಮಸುಂದರ್, ಶಿವರಾಜು ಬೆಳಗನ ಹಳ್ಳಿ, ಎಚ್.ಎಲ್.ರವೀಂದ್ರ ಮತ್ತು ಪಟೇಲ್ ರಾಜೇಗೌಡರವರೊಂದಿಗೆ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಅವರುಗಳು ಈ ಶಾಲೆಯಲ್ಲಿ ಪರಿಶಿಷ್ಟ ಪಂಗಡ ಮತ್ತು ಆದಿವಾಸಿ ಗಿರಿಜನ ಮಕ್ಕಳು ಮಾತ್ರ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶೇ.95ರಷ್ಟು ಪೋಷಕರು ಕೂಲಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ.
ಈ ಶಾಲೆ ಉತ್ತಮವಾಗಿ ನಡೆಯುತ್ತಿ ದ್ದುದು ತಮಗೆ ಹಿಂದಿನಿಂದಲೂ ತಿಳಿದಿತ್ತು. ಆದರೆ ಕ್ಷೇತ್ರ ಸಮನ್ವಯಾಧಿಕಾರಿ ಶಶಿಧರ್ ಮತ್ತು ಈ ಭಾಗದ ಸಿ.ಆರ್.ಪಿ ಮಾಡಿದ ಅವಘಡಗಳಿಂದ ಇಷ್ಟೊಂದು ರಾದ್ಧಾಂತ ನಡೆಯಲು ಕಾರಣವಾಯಿತು. ಅವರ ವಿರುದ್ಧವೂ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮ ತೆಗೆದುಕೊಳ್ಳಬೇಕು ಎಂದರು.
ಎಸ್‍ಡಿಎಂಸಿ ಅಧ್ಯಕ್ಷ ರಾಜು ಮಾತನಾಡಿ, 8 ನೇ ತರಗತಿ ಮಕ್ಕಳನ್ನು ಪ್ರೌಢಶಾಲೆಗೆ ವರ್ಗಾಯಿಸುವ ಸಂಬಂಧ ಮಾತನಾಡಲು, ಮುಖ್ಯ ಶಿಕ್ಷಕಿ ಪ್ರತಿಭಾ ಅವರೊಂದಿಗೆ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಗೆ ಹೋಗಿ ದ್ದಾಗ, ಶಶಿಧರ್‍ರವರು ಮುಖ್ಯ ಶಿಕ್ಷಕಿಯನ್ನು ನಿಂದಿಸಿದರು. ತಮಗೆ ಕೂಡ ಬೆದರಿಕೆ ಹಾಕಿ ಕಚೇರಿಯಿಂದ ಆಚೆ ಹೋಗುವಂತೆ ತಿಳಿಸಿದರು. ಇವರು ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಆಗ್ರಹಿಸಿದರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಮಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಡಿ.ಡಿ.ವೆಂಕಟೇಗೌಡ, ವೆಂಕಟೇಗೌಡ, ರಾಜು, ಸುಬ್ರಹ್ಮಣ್ಯ, ಸುಶೀಲ, ರಾಜಮ್ಮ, ಶಿಕ್ಷಣ ಇಲಾಖೆಯ ಬಿಆರ್‍ಪಿ ಮಹದೇವಯ್ಯ, ಶಿಕ್ಷಣ ಸಂಯೋಜಕರಾದ ಭೀಮಪ್ಪ, ಸಣ್ಣಸ್ವಾಮಿ ಮತ್ತಿತರರರು ಹಾಜರಿದ್ದರು.
ಮಕ್ಕಳು ಪರೀಕ್ಷೆ ಬರೆದರು: ಶುಕ್ರವಾರ ಮತ್ತು ಶನಿವಾರದಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಕ್ಕಳು, ಇಂದು ಪರೀಕ್ಷೆ ಇದ್ದುದರಿಂದ ಪ್ರತಿಭಟನೆಯಲ್ಲಿ ಭಾಗವಹಿಸಿ ರಲಿಲ್ಲ. ಪೋಷಕರಷ್ಟೆ ಪ್ರತಿಭಟನೆ ನಡೆಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಬೀಚನಹಳ್ಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.