Tag: HD Kote

ಕೋವಿಡ್ ಲಸಿಕೆಯಿಂದ ಅಡ್ಡ ಪರಿಣಾಮವಿಲ್ಲ
ಮೈಸೂರು

ಕೋವಿಡ್ ಲಸಿಕೆಯಿಂದ ಅಡ್ಡ ಪರಿಣಾಮವಿಲ್ಲ

March 18, 2021

ಹೆಚ್.ಡಿ.ಕೋಟೆ, ಮಾ. 17(ಮಂಜು)-ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಜಿಪಂ ಅಧ್ಯಕ್ಷೆ ಪರಿ ಮಳಾ ಶ್ಯಾಂ ತಿಳಿಸಿದರು. ತಾಲೂಕಿನ ಹ್ಯಾಂಡ್ ಪೆÇೀಸ್ಟ್ ಸರ್ಕಲ್ ನಲ್ಲಿ ಕೋವಿಡ್ ಲಸಿಕೆ ಅಭಿಯಾನ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ಸ್ವಾಮಿ ವಿವೇಕಾನಂದ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಪ್ರಚಾರ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಲಸಿಕೆ ಪಡೆಯಲು ಯಾರೂ ಹಿಂಜರಿಯಬಾರದು. ಲಸಿಕೆ ಪಡೆದ ನಂತರವೂ…

ಭಗವಾನ್ ಬಿರ್ಸಾಮುಂಡಾ  ಭವನ ಲೋಕಾರ್ಪಣೆ
ಮೈಸೂರು

ಭಗವಾನ್ ಬಿರ್ಸಾಮುಂಡಾ ಭವನ ಲೋಕಾರ್ಪಣೆ

March 18, 2021

ಹೆಚ್.ಡಿ.ಕೋಟೆ, ಮಾ.17(ಮಂಜು)-ವನವಾಸಿಗಳು ಅತ್ಯಂತ ಸ್ವಾವಲಂಬಿ ಹಾಗೂ ಸರಳ ಜೀವಿಗಳು ಎಂದು ಅಖಿಲ ಭಾರತೀಯ ವನವಾಸಿ ಕಲ್ಯಾಣಾಶ್ರಮ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀಪಾದ ಅಭಿಪ್ರಾಯಪಟ್ಟರು. ಪಟ್ಟಣದ ಸ್ಟೇಡಿಯಂ ಬಡಾ ವಣೆಯಲ್ಲಿ ವನವಾಸಿ ಕಲ್ಯಾಣ ಕರ್ನಾಟಕದಿಂದ ನೂತನವಾಗಿ ನಿರ್ಮಾಣವಾಗಿರುವ ಭಗವಾನ್ ಬಿರ್ಸಾಮುಂಡಾ ಭವನ ಲೋಕಾ ರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಆದಿವಾಸಿಗಳಿಗೆ ಇನ್ನೂ ಸರಿಯಾದ ನೆಲೆ ಇಲ್ಲ. ಜೀವನ ನಿರ್ವಹಣೆಗೆ ಜಮೀನು ಇಲ್ಲದೆ ನಿಕೃಷ್ಟವಾಗಿ ಬದುಕುತ್ತಿದ್ದಾರೆ. ಇವರ ಬದುಕು ಹಸನು ಮಾಡುವಲ್ಲಿ ಸರ್ಕಾರಗಳು ವಿಫಲವಾಗಿವೆ…

ಕೊನೆಗೂ ನರಭಕ್ಷಕ ಹುಲಿ ಸೆರೆ
ಮೈಸೂರು

ಕೊನೆಗೂ ನರಭಕ್ಷಕ ಹುಲಿ ಸೆರೆ

February 2, 2019

ಹೆಚ್.ಡಿ.ಕೋಟೆ: ತಾಲೂಕಿನ ನಾಗರಹೊಳೆ ಅಭಯಾರಣ್ಯದ ಡಿ.ಬಿ.ಕುಪ್ಪೆ ಕಾಡಂಚಿನ ಗ್ರಾಮಗಳಲ್ಲಿ ಮೂವರನ್ನು ಬಲಿ ಪಡೆದಿದ್ದ ನರ ಭಕ್ಷಕ ಹುಲಿಯನ್ನು ಇಂದು ಮಧ್ಯಾಹ್ನ ಸೇಬಿನಕೊಲ್ಲಿ ಎಂಬಲ್ಲಿ ಸೆರೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮೊದಲು ಮಾನಿಮೂಲೆ ಹಾಡಿಯ ಮಧು ಎಂಬಾತನನ್ನು ಬಲಿ ಪಡೆದಿದ್ದ ವ್ಯಾಘ್ರ, ಜ.28ರಂದು ಹುಲ್ಮಟ್ಟು ಗ್ರಾಮದ ಚಿನ್ನಪ್ಪ ಮತ್ತು ಜ.31ರಂದು ಸಂಜೆ ಹೊಸೂರು ಹಾಡಿಯ ಕೆಂಚ ಅವರನ್ನು ಕೊಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದ ಹೆಚ್ಚಿನ ಸಿಬ್ಬಂದಿಯೊಂದಿಗೆ ಹುಲಿ ಸೆರೆ ಕಾರ್ಯಾಚರಣೆಯನ್ನು ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ…

ನರ ಭಕ್ಷಕ ಹುಲಿಗೆ ಮತ್ತೊಂದು ಬಲಿ
ಮೈಸೂರು

ನರ ಭಕ್ಷಕ ಹುಲಿಗೆ ಮತ್ತೊಂದು ಬಲಿ

February 1, 2019

ಹೆಚ್.ಡಿ.ಕೋಟೆ: ಸಾಕು ಆನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ನಡೆಸುತ್ತಿ ರುವ ಕಾರ್ಯಾಚರಣೆ ನಡುವೆಯೇ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹುಲಿಯ ಅಟ್ಟಹಾಸ ಮುಂದುವರೆದಿದ್ದು, ಕಾಡಂಚಿನ ಗ್ರಾಮಸ್ಥರು ಮತ್ತಷ್ಟು ಭಯಭೀತರಾಗಿದ್ದಾರೆ. ಸೋಮವಾರದಂದು ಹುಲ್ಮಟ್ಲು ಗ್ರಾಮದ ಚಿನ್ನಪ್ಪನನ್ನು ಕೊಂದು ಹಾಕಿದ್ದ ಹುಲಿ, ಇಂದು ಬೆಳಿಗ್ಗೆ ತಿಮ್ಮನ ಹೊಸಳ್ಳಿ ಗ್ರಾಮದ ಕೆಂಚ(55) ಎಂಬಾತನನ್ನು ಬಲಿ ಪಡೆಯುವ ಮೂಲಕ ತನ್ನ ಅಟ್ಟಹಾಸವನ್ನು ಮುಂದು ವರೆಸಿದೆ. ಕಾಡಂಚಿನ ಸೇಬನಕೊಲ್ಲಿ ಎಂಬಲ್ಲಿ ಕೆಂಚ ಮತ್ತು 12 ವರ್ಷದ ಬಳ್ಳ ಎಂಬ ಬಾಲಕ ಇಂದು ಸಂಜೆ…

`ಉದ್ಯೋಗ ಖಾತ್ರಿ’ಯಿಂದ ಗ್ರಾಮೀಣಾಭಿವೃದ್ಧಿ
ಕೊಡಗು

`ಉದ್ಯೋಗ ಖಾತ್ರಿ’ಯಿಂದ ಗ್ರಾಮೀಣಾಭಿವೃದ್ಧಿ

November 26, 2018

ಎಚ್.ಡಿ.ಕೋಟೆ: ಉದ್ಯೋಗ ಖಾತ್ರಿಯಿಂದ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುಕೂಲ ವಾಗಲಿದ್ದು, ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಗೊಳಿಸುವಂತೆ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳಿಗೆ ಶಾಸಕ ಸಿ.ಅನಿಲ್ ಕುಮಾರ್ ಕಿವಿಮಾತು ಹೇಳಿದರು. ತಾಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ 16 ಲಕ್ಷ ರೂ. ವೆಚ್ಚದ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ ನಾಡಿದ ಅವರು, ಗ್ರಾಮಗಳ ಅಭಿವೃದ್ಧಿಗೆ ಉದ್ಯೋಗ ಖಾತ್ರಿ ಯೋಜನೆ ಪೂರಕ ವಾಗಿದೆ. ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿ ಕೊಳ್ಳುವಲ್ಲಿ ಈ…

ಸಮಾಜಕ್ಕೆ ಕೊಡುಗೆ ನೀಡಿದರೆ ಮನುಷ್ಯ ಜನ್ಮ ಸಾರ್ಥಕ
ಮೈಸೂರು

ಸಮಾಜಕ್ಕೆ ಕೊಡುಗೆ ನೀಡಿದರೆ ಮನುಷ್ಯ ಜನ್ಮ ಸಾರ್ಥಕ

November 24, 2018

ಎಚ್.ಡಿ.ಕೋಟೆ: ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಆಗ ಮಾತ್ರ ಮನುಷ್ಯ ಜನ್ಮ ಸಾರ್ಥಕ ಎಂದು ಶಾಸಕ ಅನಿಲ್ ಚಿಕ್ಕಮಾದು ಅಭಿಪ್ರಾಯಪಟ್ಟರು. ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬೆಂಗಳೂರಿನ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮತ್ತು ಎಚ್.ಡಿ.ಕೋಟೆಯ ಮದ್ಯವರ್ಜನಾ ಶಿಬಿರ ವ್ಯವಸ್ಥಾಪನಾ ಸಮಿತಿಯು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪಟ್ಟಣದ ಗುರುಭವನದಲ್ಲಿ 8 ದಿನಗಳಿಂದ ಹಮ್ಮಿಕೊಂಡಿರುವ ಮದ್ಯವರ್ಜನಾ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮನುಷ್ಯ ಮನಸ್ಸು ಮಾಡಿದರೆ ದೊಡ್ಡ ಬಂಡೆಯನ್ನೇ ಪುಡಿ…

ಶೌಚಾಲಯ ಬಳಸಿ, ರೋಗ ರುಜಿನ ತಡೆಗಟ್ಟಿ
ಮೈಸೂರು

ಶೌಚಾಲಯ ಬಳಸಿ, ರೋಗ ರುಜಿನ ತಡೆಗಟ್ಟಿ

November 21, 2018

ಎಚ್.ಡಿ. ಕೋಟೆ:  ಶೌಚಾಲಯದ ಬಳಕೆ ಕಡ್ಡಾಯ. ಪ್ರತಿ ಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಶೌಚಾಲಯವನ್ನು ಕಟ್ಟಿಸಿಕೊಳ್ಳುವುದರ ಜತೆಗೆ ಬಳಕೆ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ದರ್ಶನ್ ತಿಳಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ವಿಶ್ವ ಶೌಚಾಲಯದ ದಿನಾಚರಣೆ ಅಂಗವಾಗಿ ನಡೆದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮಾಂತರ ಪ್ರದೇಶಗಳ ಕೆಲವು ಮನೆಗಳಲ್ಲಿ ಶೌಚಾಲಯ ಕಟ್ಟಿಸಿಕೊಳ್ಳು ತ್ತಾರೆ. ಆದರೆ ಅದನ್ನು ಬಳಕೆ ಮಾಡಿಕೊಳ್ಳು ವುದಿಲ್ಲ. ಇನ್ನು ಕೆಲವರಂತೂ ಲಕ್ಷಾಂತರ ಹಣ ಖರ್ಚು…

ಕೋಟೆಯಲ್ಲಿ ಇಂದಿನಿಂದ ಮದ್ಯವರ್ಜನ ಶಿಬಿರ
ಮೈಸೂರು

ಕೋಟೆಯಲ್ಲಿ ಇಂದಿನಿಂದ ಮದ್ಯವರ್ಜನ ಶಿಬಿರ

November 16, 2018

ಎಚ್.ಡಿ.ಕೋಟೆ:  ಪಟ್ಟಣದ ಬೆಳಗನಹಳ್ಳಿ ರಸ್ತೆಯಲ್ಲಿರುವ ಗುರು ಭವನದಲ್ಲಿ 1288ನೇ ಮದ್ಯವರ್ಜನ ಶಿಬಿರ, ನ.16 ರಿಂದ 23 ರವರೆಗೆ ನಡೆ ಯಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾ ಧಿಕಾರಿ ಎಂ.ಶಶಿಧರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ತಾಲೂಕಿನಲ್ಲಿ ನಡೆಯುತ್ತಿರುವ 5 ನೇ ಮದ್ಯವರ್ಜನ ಶಿಬಿರ ಇದಾಗಿದ್ದು, ಶಿಬಿರವನ್ನು ತಹಸಿಲ್ದಾರ್ ಮಂಜುನಾಥ್ ಉದ್ಘಾಟಿಸುವರು. ಮದ್ಯವರ್ಜನ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಸಿ.ಎನ್. ನಾಗಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ನಿರ್ದೆಶಕ ವಿ.ವಿಜಯಕುಮಾರ್, ತಾಲೂಕು ಪಂಚಾ ಯಿತಿ ಸ್ಥಾಯಿ…

ಡಿ.ಬಿ.ಕುಪ್ಪೆ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿ ಮುಂದುವರಿಕೆ: ಬಿಇಓ
ಮೈಸೂರು

ಡಿ.ಬಿ.ಕುಪ್ಪೆ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕಿ ಮುಂದುವರಿಕೆ: ಬಿಇಓ

October 30, 2018

ಎಚ್.ಡಿ.ಕೋಟೆ: ಡಿ.ಬಿ.ಕುಪ್ಪೆ ಗ್ರಾಮದ ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಪ್ರತಿಭಾ ಅವರನ್ನು ಇಲ್ಲೇ ಮುಂದುವರೆಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸುಂದರ್ ತಿಳಿಸಿದರು. ತಾಲೂಕಿನ ಗಡಿ ಭಾಗ ಡಿ.ಬಿ.ಕುಪ್ಪೆ ಗ್ರಾಮದ ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಪೋಷಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಮಮತಾರವರ ಮೌಖಿಕ ಆದೇಶದ ಮೇರೆಗೆ ತಾವು ಇಲ್ಲಿಗೆ ಬಂದಿದ್ದೇನೆ. ಅವರು ಸಮಸ್ಯೆ ಪರಿಹರಿಸುವಂತೆ ತಮಗೆ ತಿಳಿಸಿದ್ದರು. ಶಾಲೆಯ 8ನೇ ತರಗತಿ ಮಕ್ಕಳಿಗೆ ಶಾಲಾ ಲಾಗ್‍ಇನ್ ಬಳಸಿ,…

ಕೋಟೆ ಶ್ರೀ ವರದರಾಜಸ್ವಾಮಿ ದೇವಾಲಯ ನಿರ್ಲಕ್ಷಿಸಿರುವ ಆಡಳಿತ ವ್ಯವಸ್ಥೆ
ಮೈಸೂರು

ಕೋಟೆ ಶ್ರೀ ವರದರಾಜಸ್ವಾಮಿ ದೇವಾಲಯ ನಿರ್ಲಕ್ಷಿಸಿರುವ ಆಡಳಿತ ವ್ಯವಸ್ಥೆ

October 16, 2018

ಹೆಚ್.ಡಿ.ಕೋಟೆ:  ಪುರಾತನ ಪುಣ್ಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಹೆಗ್ಗಡದೇವನಕೋಟೆ ಪಟ್ಟಣ ಶ್ರೀ ವರದ ರಾಜಸ್ವಾಮಿ ದೇವಾಲಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ದೇವಾಲಯಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಬೇಕಾದ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಈ ದೇವಾಲಯದತ್ತ ಕಿಂಚಿತ್ತು ಗಮನಹರಿಸುತ್ತಿಲ್ಲ. ಶತಮಾನಗಳ ಇತಿಹಾಸವಿರುವ ಈ ದೇವಾಲಯಕ್ಕೆ ರಾಜಗೋಪುರ ನಿರ್ಮಾಣ ಮಾಡಿ ಅಭಿವೃದ್ಧಿ ಪಡಿಸಬೇಕೆಂಬ ಭಕ್ತರ ಕೂಗಿಗೆ ಮನ್ನಣೆ ಇಲ್ಲದಂತಾಗಿದೆ. ದೇವ ಸ್ಥಾನದ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕಾದ ಮುಜರಾಯಿ ಇಲಾಖೆ ಈ ದೇವಾಲಯದಲ್ಲಿ ಹೆಚ್ಚಿನ ಆದಾಯ ವಿಲ್ಲ ಎಂಬ ಕಾರಣಕ್ಕೆ ನಿರ್ಲಕ್ಷಿಸುತ್ತಿದೆ ಎಂಬ ಮಾತು…

1 2 3 4
Translate »