ಶೌಚಾಲಯ ಬಳಸಿ, ರೋಗ ರುಜಿನ ತಡೆಗಟ್ಟಿ
ಮೈಸೂರು

ಶೌಚಾಲಯ ಬಳಸಿ, ರೋಗ ರುಜಿನ ತಡೆಗಟ್ಟಿ

November 21, 2018

ಎಚ್.ಡಿ. ಕೋಟೆ:  ಶೌಚಾಲಯದ ಬಳಕೆ ಕಡ್ಡಾಯ. ಪ್ರತಿ ಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಶೌಚಾಲಯವನ್ನು ಕಟ್ಟಿಸಿಕೊಳ್ಳುವುದರ ಜತೆಗೆ ಬಳಕೆ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ದರ್ಶನ್ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ವಿಶ್ವ ಶೌಚಾಲಯದ ದಿನಾಚರಣೆ ಅಂಗವಾಗಿ ನಡೆದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮಾಂತರ ಪ್ರದೇಶಗಳ ಕೆಲವು ಮನೆಗಳಲ್ಲಿ ಶೌಚಾಲಯ ಕಟ್ಟಿಸಿಕೊಳ್ಳು ತ್ತಾರೆ. ಆದರೆ ಅದನ್ನು ಬಳಕೆ ಮಾಡಿಕೊಳ್ಳು ವುದಿಲ್ಲ. ಇನ್ನು ಕೆಲವರಂತೂ ಲಕ್ಷಾಂತರ ಹಣ ಖರ್ಚು ಮಾಡಿ ಮನೆ ಕಟ್ಟಿಸಿ ಕೊಳ್ಳುತ್ತಾರೆ. ಆದರೆ ಶೌಚಾಲಯವನ್ನು ಕಟ್ಟಿಸಿಕೊಳ್ಳುವುದಿಲ್ಲ. ಇಂತಹವರು ವಿರಳ. ಬಯಲು ಶೌಚಾಲಯದಿಂದ ಅನೇಕ ರೋಗ ರುಜಿನಗಳು ಬರುತ್ತಿವೆ. ಮರ್ಯಾದೆ ಕಳೆದುಕೊಳ್ಳಬೇಕಾಗುತ್ತದೆ. ರಾತ್ರಿ ವೇಳೆ ಯಲ್ಲಿ ಮಹಿಳೆಯೊಬ್ಬರು ಬಹಿರ್ದೆಸೆಗೆ ಹೋದ ಸಂದರ್ಭದಲ್ಲಿ ಅನಾಹುತ ಗಳಾಗಿರುವ ಘಟನೆಗಳೂ ಸಹ ನಡೆದಿವೆ ಎಂದು ಮನವರಿಕೆ ಮಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ, ಶೌಚಾ ಲಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ಕೊಡು ತ್ತಿದೆ. ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಕೊಡುತ್ತಿದೆ. ಜತೆಗೆ ಸರ್ಕಾರದ ಯೋಜನೆ ಯನ್ನು ಸರಿಯಾಗಿ ಬಳಕೆ ಮಾಡಿಕೊಂಡು ಶೌಚಾಲಯ ನಿರ್ಮಾಣ ಮಾಡಿಕೊಳ್ಳ ಬೇಕು. ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಎಂಬುದಾಗಿ ಘೋಷಣೆ ಮಾಡಬೇಕಾ ಗಿದೆ. ಈ ನಿಟ್ಟಿನಲ್ಲಿ ಜನತೆಯ ಸಹಕಾರ ಅತೀ ಅಗತ್ಯ ಎಂದರು.ಜಾಥಾ ಕಾರ್ಯಕ್ರಮವನ್ನು ಪಟ್ಟಣದ ಹುಣಸೂರು-ಬೇಗೂರು ರಸ್ತೆಯಲ್ಲಿ ಸಾಗಿ ಮಿನಿ ವಿಧಾನಸೌಧದಲ್ಲಿ ಮುಕ್ತಾಯಗೊಳಿ ಸಲಾಯಿತು.

ಜಾಥಾದಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದ ಅಂಕನಾಯಕ, ರಾಜು, ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್, ಪುರಸಭೆ ಸದಸ್ಯ ಮಧು ಸೂಧನ್, ಮುಖ್ಯಾಧಿಕಾರಿ ಡಿ.ಎನ್. ವಿಜಯ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಕನ್ನಡ ಪ್ರಮೋದ್, ಸಹಾಯಕ ನಿರ್ದೇಶಕ ಜೆರಾಲ್ಡ್ ರಾಜೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ್ ನಾಗ್, ನಾಗೇಂದ್ರ, ಆಶಾ, ನೇತ್ರಾವತಿ, ಕೀರ್ತಿಸುರೇಶ್, ತಾಲೂಕು ಪಂಚಾಯಿತಿ ಕಚೇರಿ ಸಿಬ್ಬಂದಿ ಸಿದ್ದ ರಾಜು, ನಂಜುಂಡಸ್ವಾಮಿ, ಗುರುಸ್ವಾಮಿ ಮತ್ತಿತರರಿದ್ದರು.

ನಗರದ ತಾಲೂಕು ಕಚೇರಿಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳು ಸೇರಿದಂತೆ ಸಾರ್ವಜನಿಕ ವಲಯ ಹಾಗೂ ವಿವಿಧ ಸಂಘ ಸಂಸ್ಥೆಗಳು ಕಚೇರಿಯಲ್ಲಿರುವ ಮೂಲಸೌಲಭ್ಯ

Translate »