ಫಸಲ್ ಬಿಮಾ ಯೋಜನೆಯ ಲೋಪದೋಷ ಕುರಿತ ಅಧಿಕಾರಿಗಳ ಸಭೆ ನ.30 ರೊಳಗೆ ಬೆಳೆ ವಿಮೆ ಮಾಡಿಸಲು ಶಾಸಕರ ಸಲಹೆ
ಹಾಸನ

ಫಸಲ್ ಬಿಮಾ ಯೋಜನೆಯ ಲೋಪದೋಷ ಕುರಿತ ಅಧಿಕಾರಿಗಳ ಸಭೆ ನ.30 ರೊಳಗೆ ಬೆಳೆ ವಿಮೆ ಮಾಡಿಸಲು ಶಾಸಕರ ಸಲಹೆ

November 21, 2018

ಅರಸೀಕೆರೆ: ಫಸಲ್ ಬಿಮಾ ಯೋಜನೆಗೆ ಅರ್ಜಿ ಸಲ್ಲಿಸಲು ನ.30 ರಂದು ಕಡೆಯ ದಿನವಾಗಿದ್ದು, ತಾಲೂಕಿನ ಎಲ್ಲಾ ರೈತರು ಅರ್ಜಿ ಸಲ್ಲಿಸಬೇಕು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಸಲಹೆ ನೀಡಿದರು.

ನಗರದ ತಾಲೂಕು ಪಂಚಾಯಿತಿ ಸಭಾಂ ಗಣದಲ್ಲಿ ಮಂಗಳವಾರ ಕೃಷಿ ಇಲಾಖೆ, ಹಾಸನ ಲೀಡ್ ಬ್ಯಾಂಕ್, ತಾಪಂ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂ ದಿಗೆ ನಡೆಸಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ಬಯಲು ಸೀಮೆಗೆ ಬರದ ಛಾಯೆ ಬಡಿದು ತಾಂಡವಾಡುತ್ತಿದೆ. ಅದ ರಲ್ಲೂ ಕ್ಷೇತ್ರದ ರೈತರು ಮಳೆಯೂ ಇಲ್ಲದೇ, ಬೆಳೆಯೂ ಇಲ್ಲದೇ ಅತಂತ್ರ ಸ್ಥಿತಿ ಎದರಿ ಸುತ್ತಿದ್ದಾರೆ. ಅವರಿಗೆ ಫಸಲ್ ಬಿಮಾ ಯೋಜನೆಯಿಂದ ಬೆಳೆ ನಷ್ಟವನ್ನು ಪಡೆ ಯಲು ಸರ್ಕಾರ ಅವಕಾಶವನ್ನು ಮಾಡಿ ಕೊಟ್ಟಿದ್ದು, ಅಧಿಕಾರಿಗಳು ಇದನ್ನು ಸಮರ್ಪಕ ವಾಗಿ ಸಲ್ಲಿಸಬೇಕು ಎಂದು ಸೂಚಿಸಿದರು.

ರೈತರು ತಾವು ವಹಿವಾಟು ನಡೆಸುವ ಬ್ಯಾಂಕ್‍ಗಳಿಗೆ ಯಾವುದೇ ದಾಖಲೆಗಳ ದೃಢೀಕರಣ ಪತ್ರವನ್ನು ನೀಡದೇ, ಛಾಪಾ ಕಾಗದದಲ್ಲಿ ಸ್ವಯಂ ಘೋಷಿತ ಮಾಹಿತಿ ಯುಳ್ಳ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿ ಸಬಹುದಾಗಿದೆ. ಫಸಲ್ ಬಿಮಾ ಯೋಜನೆ ಯಲ್ಲಿ ಅವೈಜ್ಞಾನಿಕ ಮಾನ ದಂಡಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಮಾನದಂಡಗಳನ್ನು ಸರಿಪಡಿಸಿ ಸರಳ ನಿಯಮಾವಳಿ ರೂಪಿಸಲು ಸರ್ಕಾರ ದೊಂದಿಗೆ ಚರ್ಚಿಸಲಾಗುವುದು ಎಂದರು. ಸಭೆಯ ತೀರ್ಮಾನದಂತೆ ಬ್ಯಾಂಕ್‍ಗಳ ಅಧಿಕಾರಿಗಳು ಯಾವುದೇ ದಾಖಲೆಗಳ ದೃಢೀಕರಣವಿಲ್ಲದೇ ರೈತರಿಂದ ನ.30 ರೊಳಗೆ ವಿಮಾ ಯೋಜನೆ ಅರ್ಜಿಗಳನ್ನು ಸ್ವೀಕಾರ ಮಾಡಬೇಕು ಎಂದು ತಿಳಿಸಿದರು. ತಾಲೂಕು ಕೃಷಿ ಇಲಾಖೆ ಸಹಾಯಕ ನಿದೆರ್Éೀ ಶಕ ಹರೀಶ್ ಮಾತನಾಡಿ, ಕರಪತ್ರ, ಗ್ರಾಮ ಸಭೆ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಫಸಲ್ ಬಿಮಾ ಯೋಜನೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುವುದು.

ತಾಲೂಕಿ ನಲ್ಲಿ ರೈತರು ಬೆಳೆಯುವ ಪ್ರಮುಖ ಬೆಳೆಗಳಾದ ರಾಗಿ, ಜೋಳ, ಹುರಳಿ ಕಾಳು ಗಳು ಸೇರಿದಂತೆ ವಿವಿಧ ಮಳೆ ಅಧಾರಿತ ಬೆಳೆಗಳಿಗೆ ವಿಮಾ ಯೋಜನೆ ಅನ್ವಯಿ ಸುತ್ತದೆ. ರೈತರು ಕೊನೆಯ ದಿನದೊಳಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ತಾಪಂ ಕಾರ್ಯ ನಿರ್ವ ಹಣಾಧಿಕಾರಿ ಕೃಷ್ಣಮೂರ್ತಿ, ಉಪ ತಹಶೀಲ್ದಾರ್ ಪಾಲಾಕ್ಷಯ್ಯ ಸೇರಿದಂತೆ ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »