ಡೋರ್‍ಲಾಕ್ ಮುರಿದು ಚಿನ್ನಾಭರಣ ಕಳವು
ಮೈಸೂರು

ಡೋರ್‍ಲಾಕ್ ಮುರಿದು ಚಿನ್ನಾಭರಣ ಕಳವು

November 21, 2018

ಮೈಸೂರು:  ಡೋರ್‍ಲಾಕ್ ಮುರಿದಿರುವ ಖದೀಮರು ಮನೆಯಲ್ಲಿದ್ದ ಸುಮಾರು 97 ಸಾವಿರ ರೂ.ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಶಕ್ತಿನಗರದಲ್ಲಿ ನಡೆದಿದೆ.

ಇಲ್ಲಿನ 2ನೇ ಕ್ರಾಸ್ ನಿವಾಸಿ ಶೋಭಾವತಿ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಶೋಭಾವತಿ ಅವರು ನ.15ರಂದು ಸಂಜೆ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿನ ಸಂಬಂಧಿಕರ ಮನೆಗೆ ಹೋಗಿದ್ದರು. ನ.18ರಂದು ಸಂಜೆ ಎದುರು ಮನೆ ನಿವಾಸಿ ಮಮತಾ ಅವರು ಹೊರ ಬಂದು ನೋಡಿದಾಗ ಶೋಭಾವತಿ ಅವರ ಮನೆಯ ಬಾಗಿಲು ತೆರೆದಿರುವುದು ಗೊತ್ತಾಗಿದೆ. ಕೂಡಲೇ ದೂರವಾಣಿ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.

ನಿನ್ನೆ (ನ.19) ಬೆಳಿಗ್ಗೆ ಶೋಭಾವತಿ ಅವರು ಮನೆಗೆ ಬಂದು ನೋಡಿದಾಗ ಮುಂಬಾಗಿಲ ಡೋರ್‍ಲಾಕ್ ಮುರಿದಿರುವುದು ಗೊತ್ತಾಗಿದೆ. ಮನೆಯೊಳಗೆ ಪ್ರವೇಶಿಸಿ ನೋಡಿದಾಗ ಬೆಡ್ ರೂಂನ ಗಾಡ್ರೇಜ್ ಬೀರುವಿನ ಬಾಗಿಲನ್ನು ಆಯುಧದಿಂದ ಮೀಟಿ ಸೀಕ್ರೇಟ್ ಲಾಕ್‍ನಲ್ಲಿದ್ದ 10 ಗ್ರಾಂನ ಚಿನ್ನದ ಓಲೆ, 5 ಗ್ರಾಂನ ಡಾಲರ್, 1 ಗ್ರಾಂನ 5 ಚಿನ್ನದ ನಾಣ್ಯ, ಮೂಗುತಿ, ಬೆಳ್ಳಿ ಪದಾರ್ಥಗಳು, 35 ಸಾವಿರ ರೂ. ನಗದು, ರೇಷ್ಮೆ ಸೀರೆ ಕಳವಾಗಿದ್ದವು. ಇವುಗಳ ಒಟ್ಟು ಮೌಲ್ಯ 97 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಉದಯಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »