ಮನೆ ಬಾಗಿಲು ಮೀಟಿ ಚಿನ್ನಾಭರಣ, ನಗದು ಕಳವು
ಮೈಸೂರು

ಮನೆ ಬಾಗಿಲು ಮೀಟಿ ಚಿನ್ನಾಭರಣ, ನಗದು ಕಳವು

November 14, 2018

ಮೈಸೂರು: ಮನೆಯ ಬಾಗಿಲು ಮೀಟಿ, ಬೀರುವಿನಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ದೋಚಿರುವ ಘಟನೆ ಮೈಸೂರಿನ ಅರವಿಂದನಗರದಲ್ಲಿ ನಡೆದಿದೆ.

ಅರವಿಂದನಗರ 2ನೇ ಹಂತದ 1ನೇ ಕ್ರಾಸ್ ನಿವಾಸಿ ಸಿ.ಸುನಿಲ್ ಕುಮಾರ್ ಮನೆಯಲ್ಲಿ ಕಳ್ಳತನವಾಗಿದೆ. ಕ್ಯಾಲಿಕಟ್ ಮೂಲದ ಸುನಿಲ್, ನ.9ರಂದು ಊರಿಗೆ ತೆರಳಿದ್ದರು. ನ.12 ರಂದು ಅವರು ವಾಪಸ್ಸಾದಾಗ ಮನೆಯ ಮುಂಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ, ತೆರೆದಿದ್ದು ಬೆಳಕಿಗೆ ಬಂದಿತು. ಒಳಹೋಗಿ ನೋಡಿದಾಗ ಕೊಠಡಿಯಲ್ಲಿದ್ದ ಬೀರು ವನ್ನು ಒಡೆದು, 3 ಸಾವಿರ ಮೌಲ್ಯದ ಬೆಳ್ಳಿಯ ಕಾಲುಗೆಜ್ಜೆ, 14 ಸಾವಿರ ಮೌಲ್ಯದ ಓಲೆ ಮತ್ತು ಉಂಗುರ ಹಾಗೂ ಗೋಲಕದಲ್ಲಿದ್ದ ಸುಮಾರು 7 ಸಾವಿರ ರೂ. ನಗದನ್ನು ಕಳ್ಳತನ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ಸುನಿಲ್ ನೀಡಿರುವ ದೂರಿನನ್ವಯ ಅಶೋಕಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Translate »