ಬಟ್ಟೆ ಅಂಗಡಿಯಲ್ಲಿ 3.42 ಲಕ್ಷ ನಗದು ಕಳವು
ಮೈಸೂರು

ಬಟ್ಟೆ ಅಂಗಡಿಯಲ್ಲಿ 3.42 ಲಕ್ಷ ನಗದು ಕಳವು

November 14, 2018

ಮೈಸೂರು:  ಬಟ್ಟೆ ಅಂಗಡಿಯೊಂದರ ಮೇಲ್ಛಾವಣಿ ಶೀಟ್ ತೆಗೆದು ಒಳ ನುಗ್ಗಿರುವ ಖದೀಮರು, ಲಾಕರ್‍ನಲ್ಲಿದ್ದ ಸುಮಾರು 3.42 ಲಕ್ಷ ರೂ. ಹಣವನ್ನು ದೋಚಿರುವ ಘಟನೆ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ದೇವರಾಜ ಅರಸು ರಸ್ತೆಯಲ್ಲಿರುವ ಶೋ ಆಫ್ ಬಟ್ಟೆ ಅಂಗಡಿ, ಮೂರನೇ ಮಹಡಿಯ ಮೇಲ್ಛಾವಣಿ ಶೀಟ್ ತೆಗೆದು ಒಳಗಿಳಿದಿರುವ ಖದೀಮರು, ಶೌಚಾಲಯದ ಗಾಜು ತೆಗೆದು ಅಂಗಡಿ ಒಳ ಆವರಣದಲ್ಲಿದ್ದ ಲಾಕರ್ ಮುರಿದು ಅದರಲ್ಲಿದ್ದ 3,42130ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ. ಲಾಕರ್ ಅನ್ನು ಮೇಲಂತಸ್ತಿಗೆ ತೆಗೆದುಕೊಂಡು ಹೋಗಿ ಯಾವುದೋ ಆಯುಧದಿಂದ ಮುರಿದಿರುವುದು ಕಂಡುಬಂದಿದೆ. ಅಲ್ಲದೆ ಸುಳಿವು ಸಿಗಬಾರದೆಂದು ಸಿಸಿಟಿವಿ ಡಿವಿಆರ್ ಅನ್ನೂ ಕದ್ದೊಯ್ದಿದ್ದಾರೆ.

ಈ ಸಂಬಂಧ ಅಂಗಡಿಯ ಸಹಾಯಕ ಸ್ಟೋರ್ ಮ್ಯಾನೇಜರ್ ಸಂತೋಷ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ದೇವರಾಜ ಠಾಣೆ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »