ಚಿಪ್ಪುಹಂದಿ ಮಾರಾಟ ಯತ್ನ: ಓರ್ವನ ಬಂಧನ
ಮೈಸೂರು

ಚಿಪ್ಪುಹಂದಿ ಮಾರಾಟ ಯತ್ನ: ಓರ್ವನ ಬಂಧನ

November 21, 2018

ಮೈಸೂರು:  ಮೈಸೂರು ಅರಣ್ಯ ಸಂಚಾರ ದಳದ ಸಿಬ್ಬಂದಿ ಅಪರೂಪದ ಚಿಪ್ಪುಹಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ನನ್ನು ಬಂಧಿಸಿ, ಬೈಕ್‍ವೊಂದನ್ನು ಚಾಮ ರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸೋಮ ವಾರ ಅರಣ್ಯ ಸಂಚಾರ ದಳದ ಡಿಸಿಎಫ್ ಪೂವಯ್ಯ ನೇತೃತ್ವದಲ್ಲಿ ನಡೆದ ದಾಳಿ ಯಲ್ಲಿ ಕೊಳ್ಳೇಗಾಲದಲ್ಲಿ ಚಿಪ್ಪುಹಂದಿ ಯನ್ನು ಮಾರಾಟ ಮಾಡುತ್ತಿದ್ದ ಹುಣ ಸೂರು ತಾಲೂಕಿನ ಆರ್.ಎಸ್.ದೊಡ್ಡಿ ಗ್ರಾಮದ ನಿವಾಸಿ ರಂಗಶೆಟ್ಟಿ ಮಗ ರಂಗಸ್ವಾಮಿ(30)ಯನ್ನು ಬಂಧಿಸಿ ದ್ದಾರೆ. ಬಂಧಿತನಿಂದ ಚಿಪ್ಪುಹಂದಿಯನ್ನು ರಕ್ಷಿಸಿ, ಅಲ್ಲದೆ ಕೃತ್ಯಕ್ಕೆ ಬಳಸಿದ್ದ (ಕೆಎ.02, ಇಯು.1485) ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಯನ್ನು ಕೊಳ್ಳೇಗಾಲದ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.

ರಕ್ಷಿಸಲ್ಪಟ್ಟ ಚಿಪ್ಪುಹಂದಿಯನ್ನು ಅರಣ್ಯಕ್ಕೆ ಬಿಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಚಿಪ್ಪುಹಂದಿ ಮಾರಾಟ ಮಾಡುವ ದೊಡ್ಡ ಜಾಲವೊಂದು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅನು ಮಾನ ವ್ಯಕ್ತವಾಗಿದೆ. ಕಳೆದ ಒಂದು ತಿಂಗಳಲ್ಲಿ ಮೂರು ಚಿಪ್ಪುಹಂದಿಯನ್ನು ರಕ್ಷಿಸಲಾಗಿದ್ದು, ನಾಲ್ವರು ಆರೋಪಿ ಗಳು, ಎರಡು ಬೈಕ್ ಹಾಗೂ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ.

Translate »