ಹೆಚ್‍ಡಿಕೆ ರಾಜ್ಯದ ಜನತೆ ಕ್ಷಮೆ ಯಾಚಿಸಲು ಆಗ್ರಹ
ಹಾಸನ

ಹೆಚ್‍ಡಿಕೆ ರಾಜ್ಯದ ಜನತೆ ಕ್ಷಮೆ ಯಾಚಿಸಲು ಆಗ್ರಹ

November 21, 2018

ಬೇಲೂರು: ರೈತ ಮುಖಂಡ ರನ್ನು ಗೂಂಡಾಗಳೆಂದು ಹೇಳಿಕೆ ನೀಡಿ, ರೈತ ಮಹಿಳೆಯನ್ನು ನಿಂದಿಸಿರುವುದು ಖಂಡನೀಯ. ಕೂಡಲೇ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಜನ ತೆಯ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಕೊರಟಿ ಗೆರೆ ಪ್ರಕಾಶ್ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಕಬ್ಬು ಬೆಳೆಗಾರ ಹೋರಾಟ ಗಾರರನ್ನು ಗೂಂಡಾಗಳೆಂದು ಹೇಳಿರು ವುದಲ್ಲದೆ, ರೈತ ಮಹಿಳೆಯನ್ನು ನಿಂದಿಸಿ ರುವುದು ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆ ತರುವ ವಿಚಾರವಲ್ಲ. ಅಧಿಕಾರಕ್ಕೆ ಬರುವ ಮುನ್ನಾ ರೈತ ಸಮಸ್ಯೆಗಳನ್ನು 24 ಗಂಟೆಗಳಲ್ಲೇ ಬಗೆಹರಿಸುತ್ತೇನೆಂದು ಹೇಳಿ, ಇಂದು ಅವರನ್ನೇ ನಿಂದಿಸುತ್ತಿ ರುವುದು ಅವರ ಬೇಜವಾಬ್ದಾರಿ ತೋರಿ ಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಆರೂವರೆ ಕೋಟಿ ಜನರಿಗೆ ಮೋಸ ಮಾಡಿರುವ ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ಸಮಸ್ಯೆ ಕೇಳುವಂತಹ ಸಹನೆ ಯನ್ನೂ ಹೊಂದಿಲ್ಲ. ಆದರೆ ಸಾಲ ಮನ್ನಾ ಮಾಡುತ್ತೇನೆಂದು ಹೇಳಿ ರೈತರಿಗೆ ಮಂಕು ಬೂದಿ ಎರಚಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ತಕ್ಷಣವೇ ಬಹಿರಂಗವಾಗಿ ನಿಂದಿಸಿದ ರೈತ ಮಹಿಳೆ ಬಳಿ ಕ್ಷಮೆ ಕೇಳ ಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಮೋರ್ಚಾ ರಾಜ್ಯ ಕಾರ್ಯ ದರ್ಶಿ ರೇಣುಕುಮಾರ್ ಮಾತನಾಡಿ, ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಇದುವರೆವಿಗೂ ಕಾರ್ಯ ಗತಗೊಳಿಸದ ಹಿನ್ನೆಲೆ ರೈತರು ಮತ್ತು ಬ್ಯಾಂಕ್‍ಗಳು ದಿವಾಳಿ ಹಂತಕ್ಕೆ ತಲುಪು ವಂತಾಗಿದೆ. ಅಧಿಕಾರದ ವ್ಯಾಮೋಹ ಕ್ಕಾಗಿ ಭರವಸೆ ನೀಡಿ, ನಂತರ ಜಬಾ ಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿ ಸುತ್ತಿರುವ ಮುಖ್ಯಮಂತ್ರಿಗಳು, ಹೋರಾಟ ಮಾಡುವ ರೈತರಿಗೆ ಜಮೀನು ಉಳುಮೆ ಮಾಡಿ ಗೊತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

ಆದರೆ ಸಿಎಂ ಕುಮಾರಸ್ವಾಮಿ ಎಂದಾ ದರೂ ಉತ್ತಿ, ಬಿತ್ತಿ ಬೆಳೆದಿದ್ದಾರೆ ಎಂದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿ ದರಲ್ಲದೆ, ರಾಜ್ಯದ ರೈತರ ಸಮಸ್ಯೆಗಳನ್ನು ಹಗುರವಾಗಿ ಪರಿಗಣಿ ಸದೇ ಕೂಡಲೇ ಬಗೆ ಹರಿಸಬೇಕು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಎಸ್‍ಸಿ, ಎಸ್‍ಟಿ ಪ್ರಧಾನ ಕಾರ್ಯದರ್ಶಿ ಪರ್ವತಯ್ಯ, ಜಿಲ್ಲಾ ಕಾರ್ಯದರ್ಶಿ ಶೇಖರಯ್ಯ, ತಾಲೂಕು ಕಾರ್ಯದರ್ಶಿ ಚಂದ್ರ ಶೇಖರ್ ಇದ್ದರು.

Translate »