ಜೈನಕಾಶಿಯಿಂದ ಮಂಗಳ ವಿಹಾರ ಆರಂಭಿಸಿದ ತ್ಯಾಗಿ ವೃಂದ
ಹಾಸನ

ಜೈನಕಾಶಿಯಿಂದ ಮಂಗಳ ವಿಹಾರ ಆರಂಭಿಸಿದ ತ್ಯಾಗಿ ವೃಂದ

November 21, 2018

ಶ್ರವಣಬೆಳಗೊಳ: ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಿಂದ ಕ್ಷೇತ್ರಕ್ಕೆ ಆಗಮಿಸಿ ಇಲ್ಲಿಯೇ ಚಾತುರ್ಮಾಸ ಮುಗಿಸಿದ ತ್ಯಾಗಿಗಳು ಇಂದು ಮಂಗಳ ವಿಹಾರ ಹೊರಟರು.

ಆಚಾರ್ಯ ಶ್ರೀ ವರ್ಧಮಾನ ಸಾಗರ ಮಹಾರಾಜರ ಸಾನಿಧ್ಯ ಹಾಗೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃ ತ್ವದಲ್ಲಿ ನಡೆದ ಮಹೋತ್ಸವದಲ್ಲಿ ಒಟ್ಟು 375 ತ್ಯಾಗಿಗಳು ಮಾತಾಜಿಯವರು ಸಾನಿಧ್ಯ ವಹಿಸಿದ್ದರು. ಮಹಾಮಸ್ತಕಾಭಿಷೇಕ ಫೆಬ್ರವರಿ ಅಂತ್ಯದಲ್ಲಿ ಮುಗಿದ ಸಂದರ್ಭದಲ್ಲಿ ಹಲವು ಮುನಿಗಳು ಮಂಗಲ ವಿಹಾರ ನಡೆಸಿದ್ದರು. ಉಳಿದ 125 ತ್ಯಾಗಿಗಳು ಮತ್ತು ವೃಂದ ಕ್ಷೇತ್ರ ದಲ್ಲಿ ಈ ವರ್ಷದ ಚಾತುರ್ಮಾಸ ಆಚ ರಿಸಿ ಇಂದು ಕ್ಷೇತ್ರ ದಿಂದ ವಿವಿಧ ಕ್ಷೇತ್ರ ಗಳಿಗೆ ಮಂಗಲ ವಿಹಾರ ಆರಂಭಿಸಿದರು.

ಮುನಿಶ್ರೀ ಉತ್ತಮಸಾಗರ ಮಹಾ ರಾಜರು ಮತ್ತು ಸಂಘ, ಮುನಿಶ್ರೀ ವೈರಾಗ್ಯ ಸಾಗರ ಮಾಹಾರಾಜರು ಮತ್ತು ಸಂಘ, ಆರ್ಯಿಕಾ ಜಿನದೇವಿ ಮಾತಾಜಿ ಮತ್ತು ಸಂಘ, ಕ್ಷುಲ್ಲಿಕಾ ಮಂಗಲ ಮತಿ ಮಾತಾಜಿ ಹಾಗೂ ಆರ್ಯಿಕಾ ಶ್ರೀ ಧರ್ಮಮತಿ ಮಾತಾಜಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಂಗಲ ವಿಹಾರ ಆರಂಭಿಸಿದರು. ಮುನಿಶ್ರೀ ಕೀರ್ತಿಸಾಗರ ಮಹಾರಾಜರು, ಮುನಿಶ್ರೀ ದಿವ್ಯಸಾಗರ ಮಹಾರಾಜರು ಹಾಗೂ ಸುದರ್ಶನಸಾಗರ ಮಾಹಾರಾಜರು ಮತ್ತು ಆಚಾರ್ಯ ಶ್ರೀ ಪಂಚಕಲ್ಯಾಣ ಸಾಗರ ಮಾಹಾರಾಜರು, ಮುನಿಶ್ರೀ ಸುಯಶ ಗುಪ್ತ ಸಾಗರ ಮಹಾರಾಜರು, ಆರ್ಯಿಕಾ ಶ್ರೀ ಸರಸ್ವತಿ ಮಾತಾಜಿ, ಆರ್ಯಿಕಾ ಸುಜ್ಷಾನ ಶ್ರೀ ಮಾತಾಜಿ, ಆರ್ತಿಕಾ ಶ್ರೀ ಸುನೀತಿ ಮತಿ ಮಾತಾಜಿ ಹಾಗೂ ಆರ್ಯಿಕಾ ಶ್ರೀ ಸುಗ್ರೀವಾ ಮತಿ ಮಾತಾಜಿ ಮತ್ತು ಸಂಘ ಸ್ಥರು ನಾಗಮಂಗಲದ ಶ್ರೀಕ್ಷೇತ್ರ ಕಂಬದ ಹಳ್ಳಿಗೆ ಮಂಗಲ ವಿಹಾರ ಹೊರಟರು.

Translate »