ಜಿಲ್ಲಾ ಮಟ್ಟದ ಯುವಜನೋತ್ಸವಕ್ಕೆ ಚಾಲನೆ: ಸಂಸ್ಕøತಿ ಉಳಿಸಿ, ಬೆಳೆಸಲು ಯುವಜನರ ಪಾತ್ರ ಮುಖ್ಯ
ಹಾಸನ

ಜಿಲ್ಲಾ ಮಟ್ಟದ ಯುವಜನೋತ್ಸವಕ್ಕೆ ಚಾಲನೆ: ಸಂಸ್ಕøತಿ ಉಳಿಸಿ, ಬೆಳೆಸಲು ಯುವಜನರ ಪಾತ್ರ ಮುಖ್ಯ

November 21, 2018

ಹಾಸನ:  ಭಾರತೀಯ ಸಂಸ್ಕøತಿ ಉಳಿಸಿ, ಬೆಳೆಸುವಲ್ಲಿ ಯುವ ಜನತೆಯ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಯುವ ಜನರು ನಾಟಕ, ನೃತ್ಯ, ಜನಪದ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜು ಸಲಹೆ ನೀಡಿದರು.

ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸುಗ್ಗಿ-ಹುಗ್ಗಿ ಸಾಂಸ್ಕøತಿಕ ಯುವಕರ ಸಂಘ(ರಿ) ಹಾಗೂ ಹೊಯ್ಸಳ ಜಾನಪದ ಕಲಾ ಸಂಸ್ಥೆಯಿಂದ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇ ತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮಲ್ಲಿರುವ ಸೃಜನಶೀಲ ಪ್ರತಿಭೆ ಅನಾ ವರಣಗೊಳಿಸಬೇಕು. ಸರ್ಕಾರವು ಯುವ ಜನತೆಯ ಸಬಲೀಕರಣಕ್ಕಾಗಿ ವಿವಿಧ ಯೋಜನೆ ಜಾರಿಗೆ ತಂದಿದೆ ಅವುಗಳನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯ ದರ್ಶಿ ನಾಗರಾಜ್ ಮಾತನಾಡಿ, ಯುವ ಜನರಲ್ಲಿರುವ ಪ್ರತಿಭೆ ಗುರುತಿಸುವ ಉದ್ದೇಶ ದಿಂದ ಇಂತಹ ಕಾರ್ಯಕ್ರಮ ಆಯೋ ಜಿಸಲಾಗುತ್ತದೆ. ಯುವ ಜನತೆ ಹೆಚ್ಚಿನ ಸಂಖ್ಯೆ ಯಲ್ಲಿ ಭಾಗವಹಿಸಬೇಕು. ಉತ್ತಮ ಪ್ರದರ್ಶನ ನೀಡಿ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಶುಭ ಹಾರೈಸಿದರು.

ಎ.ವಿ.ಕೆ ಕಾಲೇಜಿನ ಉಪನ್ಯಾಸಕ ಪ್ರೊ. ಯತೀಶ್ವರ್ ಮಾತನಾಡಿ, ಸ್ವಾಮಿ ವಿವೇಕಾ ನಂದರ ವಿಚಾರಧಾರೆಗಳಿಂದ ಸ್ಫೂರ್ತಿ ಪಡೆದು ಯುವಜನತೆ ಸಮಾಜದಲ್ಲಿ ಸಾಮ ರಸ್ಯದಿಂದ ಸಾಗಬೇಕು. ಯುವಜನತೆ ನಿರಂತರವಾಗಿ ಜನಪದ ಸಾಹಿತ್ಯ, ನಾಟಕ, ರಂಗಭೂಮಿ ಹಾಡುಗಳನ್ನು ಅಭ್ಯಾಸ ಮಾಡಿ ದರೆ ಆತ್ಮೀಯ ಸಂಬಂಧÀಗಳನ್ನು ಅರ್ಥೈಸಿ ಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಮ ರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹೆಚ್.ಮಂಜುನಾಥ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಂತಪ್ಪ, ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಹೆಚ್.ಎಂ.ದಿನೇಶ್, ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಕಾಶ್, ಎಂ.ಸರಶೆಟ್ಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಮೀನಾ ಕ್ಷಮ್ಮ, ಕಲಾವಿದ ಬಿ.ಟಿ.ಮಾನವ ಇದ್ದರು.

Translate »