ಸಾರ್ವಜನಿಕರಿಂದ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದ ಖದೀಮರ ಬಂಧನ
ಮೈಸೂರು

ಸಾರ್ವಜನಿಕರಿಂದ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದ ಖದೀಮರ ಬಂಧನ

December 14, 2018

ಮೈಸೂರು: ಸಾರ್ವಜನಿಕರ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಮೂವರನ್ನು ಜಯಲಕ್ಷ್ಮೀಪುರಂ ಪೊಲೀಸರು ಬಂಧಿಸಿ, 1.16 ಲಕ್ಷ ರೂ. ಮೌಲ್ಯದ 10 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ತಾಲೂಕು ಕೂರ್ಗಳ್ಳಿ ನಿವಾಸಿ ಧನುಷ್ @ ಧನು(21) ಮತ್ತು ಹೂಟಗಳ್ಳಿಯ ಎನ್.ನಾಗೇಶ್ @ಬೋಂಡಾ(22) ಹಾಗೂ ಬೆಳ ವಾಡಿ ನಿವಾಸಿ ಸಚಿನ್ @ ಸಚಿ(20) ಬಂಧಿತ ಆರೋಪಿಗಳು.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಬುಧವಾರ ಪಡುವಾರಹಳ್ಳಿಯಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ನಗರದ ವಿವಿಧೆಡೆ ಸಾರ್ವಜನಿಕರು ಮೊಬೈಲ್‍ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದು ಕಿತ್ತುಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 1.16 ಲಕ್ಷ ರೂ. ಮೌಲ್ಯದ 10 ಮೊಬೈಲ್‍ಗಳನ್ನು ವಶಪಡಿಸಿ ಕೊಂಡಿದ್ದಾರೆ. ಈ ಸಂಬಂಧ ಜಯಲಕ್ಷ್ಮೀಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »