ಡಿ.15ರಂದು ಉತ್ತರಕನ್ನಡ ಜಿಲ್ಲಾ ಸಾಂಸ್ಕøತಿಕ ಸಂಘದ ರಂಗಮಂದಿರ ಉದ್ಘಾಟನೆ
ಮೈಸೂರು

ಡಿ.15ರಂದು ಉತ್ತರಕನ್ನಡ ಜಿಲ್ಲಾ ಸಾಂಸ್ಕøತಿಕ ಸಂಘದ ರಂಗಮಂದಿರ ಉದ್ಘಾಟನೆ

December 14, 2018

ಮೈಸೂರು: ಮೈಸೂ ರಿನ ಕುವೆಂಪುನಗರದ ಉತ್ತರ ಕನ್ನಡ ಜಿಲ್ಲಾ ಸಾಂಸ್ಕøತಿಕ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪ.ಸು.ಭಟ್ಟ ಬಯಲು ರಂಗಮಂದಿರದ ಉದ್ಘಾಟನೆ, ಆಹಾರ ಮೇಳ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವನ್ನು ಡಿ.15ರಂದು ಹಮ್ಮಿ ಕೊಳ್ಳಲಾಗಿದೆ ಎಂದು ಸಂಘದ ಕಾರ್ಯ ದರ್ಶಿ ತೇಜಸ್ವಿ ನಾಯಕ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುವೆಂಪುನಗರದ ಲವಕುಶ ಪಾರ್ಕ್ ಎದುರಿನ ಸಂಘದ ಆವರಣದಲ್ಲಿ ಬಯಲು ರಂಗಮಂದಿರ ನಿರ್ಮಿಸಿದ್ದು, ಇದರ ಉದ್ಘಾಟನೆಯನ್ನು ಅಂದು ಸಂಜೆ 5ಕ್ಕೆ ಸಂಘದ ಮಾಜಿ ಅಧ್ಯಕ್ಷರೂ ಆದ ನಿವೃತ್ತ ಪ್ರಾಧ್ಯಾಪಕ ಕೃಷ್ಣ ಮಂಜ ಭಟ್ಟ ನೆರವೇರಿಸಲಿದ್ದಾರೆ. ಅತಿಥಿ ಯಾಗಿ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಭಾಗವಹಿಸ ಲಿದ್ದಾರೆ ಎಂದು ಹೇಳಿದರು.

ಪಾಲಿಕೆ ಸದಸ್ಯ ಎಂ.ಸಿ.ರಮೇಶ್ ಉಪ ಸ್ಥಿತರಿರಲಿದ್ದು, ಸಂಘದ ಅಧ್ಯಕ್ಷ ಎನ್. ನಾಗೇಂದ್ರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ವೇಳೆ ಸಂಘದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಡಿ.ಜಿ.ಸೋಂದೆ, ಡಾ. ಎಸ್.ಎನ್.ಹೆಗಡೆ, ಕೃಷ್ಣ ಮಂಜಭಟ್ಟ ಅವರನ್ನು ಸನ್ಮಾನಿಸಲಾಗುವುದು. ನೂತನ ಬಯಲು ರಂಗಮಂದಿರದಲ್ಲಿ ಒಂದೂ ವರೆ ಸಾವಿರದಷ್ಟು ಮಂದಿ ಆಸೀನರಾಗುವ ವ್ಯವಸ್ಥೆ ಇದ್ದು, ಬಾಡಿಗೆ ಆಧಾರದಲ್ಲಿ ಕಾರ್ಯ ಕ್ರಮಗಳ ಆಯೋಜನೆಗೆ ಸಾರ್ವಜನಿಕರು ರಂಗಮಂದಿರ ಬಳಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ರಂಗಮಂದಿರಕ್ಕೆ ಮೇಲ್ಛಾವಣಿ ನಿರ್ಮಿಸಲಾಗುವುದು ಎಂದರು.

ಆಹಾರ ಮೇಳ: ಇದೇ ದಿನ ಸಂಘದ ಆವರಣದಲ್ಲಿ ಮಧ್ಯಾಹ್ನ 12ರಿಂದ ರಾತ್ರಿ 9.30ರವರಗೆ ಆಹಾರ ಮೇಳ ಆಯೋ ಜಿಸಲಾಗಿದೆ. ಆಹಾರ ಮೇಳದಲ್ಲಿ ಉತ್ತರ ಕನ್ನಡ ಜಿಲ್ಲೆಯ ವಿವಿಧ ತಿಂಡಿ-ತಿನಿಸು ಕೈಗೆಟಕುವ ದರದಲ್ಲಿ ದೊರೆಯಲಿವೆ. ಕರಾ ವಳಿ ಮಲೆನಾಡಿನ ಊಟ, ನೀರು ದೋಸೆ, ತೆಳ್ಳೆವು, ಕೊಟ್ಟೆಕಡುಬು, ಕೇಸರಿ ಬಾತು, ತೊಡೆದೇವು, ಅತಿರಸ, ಒತ್ತು ಶಾವಿಗೆ, ಪತ್ರೊಡೆ ಮೊದಲಾದ ತಿನಿಸುಗಳು ಲಭ್ಯ ವಿರಲಿವೆ. ಜೊತೆಗೆ ದೇಸೀಯ ನೈಸರ್ಗಿಕ ಉತ್ಪನ್ನಗಳ ಮಾರಾಟವೂ ಇರಲಿದೆ. ನಂತರ ಸಂಜೆ ಡಾ.ಶಿಲ್ಪಾ ಹೆಗಡೆ ಮತ್ತು ತಂಡ ದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯ ಲಿದೆ ಎಂದು ವಿವರಿಸಿದರು. ಸಂಘದ ಅಧ್ಯಕ್ಷ ಎನ್.ನಾಗೇಂದ್ರ ಭಟ್, ಪದಾಧಿಕಾರಿ ಡಾ. ನಾರಾಯಣ ಹೆಗಡೆ ಗೋಷ್ಠಿಯಲ್ಲಿದ್ದರು.

Translate »