ಸಮಾಜಕ್ಕೆ ಕೊಡುಗೆ ನೀಡಿದರೆ ಮನುಷ್ಯ ಜನ್ಮ ಸಾರ್ಥಕ
ಮೈಸೂರು

ಸಮಾಜಕ್ಕೆ ಕೊಡುಗೆ ನೀಡಿದರೆ ಮನುಷ್ಯ ಜನ್ಮ ಸಾರ್ಥಕ

November 24, 2018

ಎಚ್.ಡಿ.ಕೋಟೆ: ಹುಟ್ಟಿದ ಮೇಲೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಆಗ ಮಾತ್ರ ಮನುಷ್ಯ ಜನ್ಮ ಸಾರ್ಥಕ ಎಂದು ಶಾಸಕ ಅನಿಲ್ ಚಿಕ್ಕಮಾದು ಅಭಿಪ್ರಾಯಪಟ್ಟರು.

ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಬೆಂಗಳೂರಿನ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮತ್ತು ಎಚ್.ಡಿ.ಕೋಟೆಯ ಮದ್ಯವರ್ಜನಾ ಶಿಬಿರ ವ್ಯವಸ್ಥಾಪನಾ ಸಮಿತಿಯು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪಟ್ಟಣದ ಗುರುಭವನದಲ್ಲಿ 8 ದಿನಗಳಿಂದ ಹಮ್ಮಿಕೊಂಡಿರುವ ಮದ್ಯವರ್ಜನಾ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮನುಷ್ಯ ಮನಸ್ಸು ಮಾಡಿದರೆ ದೊಡ್ಡ ಬಂಡೆಯನ್ನೇ ಪುಡಿ ಮಾಡಬಹುದು. ಹಾಗಿರು ವಾಗ ಆಕಸ್ಮಿಕವಾಗಿ ಕುಡಿತದ ಚಟಕ್ಕೆ ಜಾರಿರುವ ನೀವು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಯೋಜನೆ ಹಮ್ಮಿಕೊಂಡಿರುವ ಮದ್ಯ ವರ್ಜನಾ ಶಿಬಿರದ ಮಾರ್ಗದರ್ಶನ ಪಡೆದು ವ್ಯಸನ ಮುಕ್ತರಾಗಿ ಕುಟುಂಬದೊಡನೆ ನೆಮ್ಮದಿ ಬದುಕು ನಡೆಸಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ತಹಶೀಲ್ದಾರ್ ಆರ್.ಮಂಜುನಾಥ್ ಮಾತನಾಡಿ, ಸರ್ಕಾರದ ಜೊತೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಂತಹ ಸಂಘ ಸಂಸ್ಥೆಗಳು ಕೈ ಜೋಡಿಸಿ ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣದ ಜೊತೆಗೆ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಯೋಜನಾಧಿಕಾರಿ ಎಂ.ಶಶಿಧರ್ ಮಾತನಾಡಿ, ಶ್ರೀಕ್ಷೇತ್ರ ಧರ್ಮ ಸ್ಥಳ ಧರ್ಮಾಧಿಕಾರಿ ಶ್ರೀ ಡಾ.ಡಿ.ವಿರೇಂದ್ರ ಹೆಗ್ಗಡೆ ಮತ್ತು ಪತ್ನಿ ಹೇಮಾವತಿ ಅಮ್ಮ ನವರು ಅಭಯಾನದ ಮೂಲಕ 1984ರಿಂದ ರಾಜ್ಯಾದಂತ ಮದ್ಯವರ್ಜನಾ ಶಿಬಿರ ದಂತಹ ಹತ್ತು ಹಲವು ಕಾರ್ಯಕ್ರಮಗಳ ಉತ್ತಮ ಮೂಲಕ ಸಮಾಜದಲ್ಲಿ ನೊಂದ, ಅಸಹಾಯಕ ಕುಟುಂಬಗಳ ಮೇಲೆತ್ತುವ ಛಲದೊಂದಿಗೆ ಸಾವಿರಾರರು ಕುಟುಂಬ ಗಳಿಗೆ ಬೆಳಕಾಗಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ಗಿರಿಗೌಡ, ಎಪಿಎಂಸಿ ಅಧ್ಯಕ್ಷ ಭಾಸ್ಕರ್, ಕಸಾಪ ಅಧ್ಯಕ್ಷ ಕನ್ನಡ ಪ್ರಮೋದ, ಮದ್ಯವರ್ಜನ ವ್ಯವ ಸ್ಥಾಪನಾ ಸಮಿತಿ ಅಧ್ಯಕ್ಷ ಲಯನ್ ಸಿ.ಎನ್. ನಾಗಣ್ಣ, ಮುಖಂಡರಾದ ಆರ್.ಪಿ. ವೀರಪ್ಪ, ಕೃಷ್ಣಪ್ಪ, ಆರ್.ನಟರಾಜ್, ಜಿಮ್ ಯಶವಂತ್, ವಿನಯ್ ಭಜರಂಗಿ, ತಹ ಶೀಲ್ದಾರ್ ಆರ್.ಮಂಜುನಾಥ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಶಿಧರ್, ರಾಜೇಶ್, ನಾಗೇಶ್, ರೇಣುಕಾ ಸೇರಿದಂತೆ ಶಿಬಿರಾಥಿರ್üಗಳು ಹಾಗೂ ಸಂಘ ಸಂಸ್ಥೆಗಳ ಸದಸ್ಯರಿದ್ದರು.

Translate »