ದೂರವಿದ್ದವರ ಪಕ್ಷ ಸೇರ್ಪಡೆ ಶಕ್ತಿ ತುಂಬಿದೆ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹದೇವಪ್ಪ ಅಭಿಮತ
ಮೈಸೂರು

ದೂರವಿದ್ದವರ ಪಕ್ಷ ಸೇರ್ಪಡೆ ಶಕ್ತಿ ತುಂಬಿದೆ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹದೇವಪ್ಪ ಅಭಿಮತ

April 27, 2018

ತಿ.ನರಸೀಪುರ: ಮುನಿಸಿಕೊಂಡು ದೂರವಿದ್ದವರೆಲ್ಲರೂ ಪಕ್ಷಕ್ಕೆ ಮರಳಿ, ನನಗೆ ರಾಜಕೀಯ ಸ್ಥೈರ್ಯ ವನ್ನು ತುಂಬುತ್ತಿರುವುದನ್ನು ನೋಡಿದರೆ 1985 ರಲ್ಲಿನ ಮೊದಲ ಚುನಾವಣೆಯಲ್ಲಿ ನನ್ನ ಕೈ ಹಿಡಿದು ಗೆಲ್ಲಿಸಿದ ಪರಿ ನೆನಪಾ ಗುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.

ತಾಲೂಕಿನ ಎಂ.ಸೀಹಳ್ಳಿ ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿ ಬಿಜೆಪಿ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಕೆಲವು ವರ್ಷಗಳಿಂದ ನಾನಾ ಕಾರಣ ಗಳಿಗೆ ದೂರವಾಗಿದ್ದ ಮುಖಂಡರೆಲ್ಲರೂ ಕಾಂಗ್ರೆಸ್‍ಗೆ ಮರಳುವ ಮೂಲಕ ಶಕ್ತಿ ಯನ್ನು ಇಮ್ಮಡಿಗೊಳಿಸುವ ಕೆಲಸವನ್ನು ಮಾಡಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚಿನ ರೀತಿಯಲ್ಲಿ ದುಡಿಯುತ್ತೇನೆ ಎಂದರು.

ಬಡವರ ಬದುಕಿನ ಮೇಲೆ ಸವಾರಿ ಮಾಡಲು ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಬಡವರ ಪರವಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸುವ ಹುನ್ನಾರವನ್ನು ಮಾಡುತ್ತಿ ದ್ದಾರೆ. ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲಾ ವರ್ಗದ ಜನರು ನೆಮ್ಮದಿಯಿಂದ ಜೀವನ ನಡೆಸಲು ರೂಪಿತವಾದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಸಂಚನ್ನು ಕೇಂದ್ರ ಸರ್ಕಾರ ಮಾಡುತ್ತಿರುವುದರಿಂದ ಎಲ್ಲಾ ವರ್ಗದ ಜನರು ಕಾಂಗ್ರೆಸ್ ಬೆಂಬಲಿಸ ಬೇಕೆಂದು ಮಹದೇವಪ್ಪ ಕರೆ ನೀಡಿದರು.
ಜಿ.ಪಂ ಸದಸ್ಯೆ ಎಂ.ಸುಧಾಮಹದೇವಯ್ಯ ಮಾತನಾಡಿ, ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಮಹದೇವಪ್ಪ ಅವರನ್ನು ಕನಿಷ್ಠ 25 ಮತಗಳ ಅಂತರದಿಂದ ಗೆಲ್ಲಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಬಿಜೆಪಿ ಮುಖಂಡರಾದ ಚಿಕ್ಕಮಹ ದೇವಪ್ಪ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಮಲ್ಲಪ್ಪ, ಗ್ರಾ.ಪಂ ಸದಸ್ಯ ಪ್ರಮೋದ್, ಪರಶಿವಮೂರ್ತಿ, ಜಯರಾಮು, ರವೀಶ, ಚಂದ್ರಪ್ಪ, ಚಂದ್ರಶೇಖರ, ಪರಮೇಶ ಹಾಗೂ ಇನ್ನಿತರರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಎಸ್.ಶಿವಮೂರ್ತಿ, ಮಾಜಿ ಪ್ರಧಾನ ಎಂ.ಡಿ.ಬಸವರಾಜು, ಜಿ.ಪಂ ಸದಸ್ಯ ಮಂಜುನಾಥನ್, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಎನ್.ಕೆ.ಫರೀದ್, ಸಂಚಾಲಕ ಕೆ.ಜಿ.ವೀರಣ್ಣ, ತಾ.ಪಂ ಮಾಜಿ ಸದಸ್ಯ ಕೆ.ಜಿ.ವೀರಣ್ಣ, ಕಿಯೋನಿಕ್ಸ್ ನಿರ್ದೇಶಕ ಕೊತ್ತೇಗಾಲ ಬಸವರಾಜು, ಗ್ರಾ.ಪಂ ಸದಸ್ಯರಾದ ಎಂ.ಶಿವಮೂರ್ತಿ, ಹೊಸಹಳ್ಳಿ ಮಾದೇಶ, ಚಂದ್ರ, ಕನ್ನಹಳ್ಳಿ ಲಕ್ಷ್ಮಣ, ಮೂಗೂರು ಡೈರಿ ಕಾರ್ಯ ದರ್ಶಿ ಎಂ.ನಾಗೇಂದ್ರ, ಕಾಡಾ ನಿರ್ದೇಶಕ ಹಿರಿಯೂರು ವಿರೇಂದ್ರ (ನವೀನ), ಮುಖಂಡ ರಾದ ಮಾವಿನಹಳ್ಳಿ ಪುಟ್ಟಸ್ವಾಮಿ, ಕೆಬ್ಬೇ ನಾಗರಾಜು, ಕೇಬಲ್ ಮಲ್ಲೇಶ, ಇಂದ್ರೇಶ್, ರಾಜೇಂದ್ರಪ್ಪನ ಕುಮಾರ, ಮಹದೇವು, ರಿಯಾಜ್ ಅಹಮ್ಮದ್, ಸಯ್ಯದ್ ಸಲೀಂ, ತೊಟ್ಟವಾಡಿ ರವಿ ಹಾಜರಿದ್ದರು.

Translate »