100 ವರ್ಷವಾದರೂ ಜೆಡಿಎಸ್‍ಗೆ ಬಹುಮತ ಬರಲ್ಲ: ಶ್ರೀರಾಮುಲು
ಮೈಸೂರು

100 ವರ್ಷವಾದರೂ ಜೆಡಿಎಸ್‍ಗೆ ಬಹುಮತ ಬರಲ್ಲ: ಶ್ರೀರಾಮುಲು

May 29, 2018

ಕೊಪ್ಪಳ: ಜಾತ್ಯಾತೀತ ಜನತಾ ದಳಕ್ಕೆ 100 ವರ್ಷ ಆದರೂ ಬಹು ಮತ ಬರಲ್ಲ. ಬೇಕಾದರೆ ಇದನ್ನು ಬರೆದಿಟ್ಟುಕೊಳ್ಳಿ ಎಂದು ಬಿಜೆಪಿ ಮುಖಂಡ ಹಾಗೂ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಅಧಿಕಾರ ಇದೆ ಎಂದು ಪೊಲೀಸರನ್ನು ಬಳಸಿ ಕೊಂಡು ಬಿಜೆಪಿ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ಸರ್ಕಾರ ಬಹಳ ದಿನ ಇರಲ್ಲ. ಸದ್ಯದಲ್ಲೇ ಬಿದ್ದುಹೋಗುತ್ತದೆ. ಬಿ.ಎಸ್.ಯಡಿಯೂರಪ್ಪ ಅವರು ಸದ್ಯದಲ್ಲೇ ಮುಖ್ಯಮಂತ್ರಿ ಯಾಗುವುದು ಶತಸಿದ್ಧ ಎಂದು ಶ್ರೀರಾಮುಲು ಅಭಿಪ್ರಾಯಪಟ್ಟರು.

Translate »